ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ;

 

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಪ್ರಕರಣದ ತನಿಖೆಗೆ ರಚನೆಗೊಂಡಿದ್ದ ಎಸ್‌ಐಟಿ ತಂಡ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿ ಹೈಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿತ್ತು. ಎಸ್ ಐ ಟಿ ರಚನೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು. ಎಸ್ ಐ ಟಿ ರಚನೆಯೇ ಸೂಕ್ತವಾಗಿಲ್ಲ. ಹೀಗಿರುವಾಗ ಅಂತಹ ತನಿಖಾ ತಂಡ ನಡೆಸಿರುವ ತನಿಖಾ ವರದಿ ನಂಬಿಕಾರ್ಹವಲ್ಲ. ಪ್ರಕರಣದ ಬಗ್ಗೆ ಮತ್ತೊಮ್ಮೆ ತನಿಖೆಯಾಗಬೇಕು ಎಸ್ ಐ ಟಿ ತನಿಖಾ ವರದಿಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ನಲ್ಲಿ ಮನವಿ ಮಾಡಿದ್ದಳು.

ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಎಸ್ ಐ ಟಿ ತನಿಖಾ ವರದಿಗೆ ತಡೆ ನೀಡಿದ್ದು, ಎಸ್ ಐ ಟಿ ವರದಿ ಬಗ್ಗೆ ಹೈಕೋರ್ಟ್ ತೀರ್ಮಾನಕ್ಕೆ ಬರಲಿ. ಮಾರ್ಚ್ 9ರಂದು ಹೈಕೋರ್ಟ್ ವಿಚಾರಣೆ ನಡೆಸುವಂತೆ ಸೂಚಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಕೂದಲು, ಚರ್ಮಕ್ಕೆ ಸಾಕಷ್ಟು ಪ್ರಯೋಜನವಿದೆ.

Fri Feb 18 , 2022
  ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಕೂದಲು, ಚರ್ಮಕ್ಕೆ ಸಾಕಷ್ಟು ಪ್ರಯೋಜನವಿದೆ. ಇದನ್ನು ಹಾಗೇ ಕೂಡ ತಿನ್ನಬಹುದು ಇಲ್ಲ ಜ್ಯೂಸ್ ಮಾಡಿ ಕುಡಿಯಬಹುದು. ಇದರಲ್ಲಿ ವಿಟಮಿನ್ಸ್ ಹೇರಳವಾಗಿದೆ. ದಿನ ಈ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ದೇಹಕ್ಕೆ ಎಷ್ಟೆಲ್ಲಾ ಲಾಭವಿದೆ ಎಂಬುದನ್ನು ತಿಳಿಯೋಣ. ದಾಳಿಂಬೆ ಹಣ್ಣಿನಲ್ಲಿ ಆಯಂಟಿಆಕ್ಸಿಡೆಂಟ್ ಇದೆ. ಹಾಗೇ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಅನ್ನು ನಿವಾರಿಸುತ್ತದೆ. ಹಾಲು ಸೇರಿಸಿ ಇದರ ಸ್ಮೂಥಿ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ […]

Advertisement

Wordpress Social Share Plugin powered by Ultimatelysocial