ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ
ಮಕ್ಕಳಿಗೆ ಸಿಹಿ ಎಂದರೆ ತುಂಬಾ ಖುಷಿ. ಹಾಗಾಗಿ ರುಚಿಕರವಾದ ಪಾಯಸ ಮಾಡಿಕೊಡುವುದರಿಂದ ಅವರ ತೂಕ ಹೆಚ್ಚಾಗುತ್ತದೆ. ಬಾರ್ಲಿ ಪಾಯಸವನ್ನು ಆಗಾಗ ಮಾಡಿಕೊಡುವುದರಿಂದ ಮಕ್ಕಳ ತೂಕ ಆರೋಗ್ಯಕರವಾಗಿ ಹೆಚ್ಚಾಗುತ್ತದೆ.

ಮೊದಲಿಗೆ ¼ ಕಪ್ ಬಾರ್ಲಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಾರ್ಲಿ ಚೆನ್ನಾಗಿ ಬೇಯಲಿ ನಂತರ ಇದಕ್ಕೆ 1 ಗ್ಲಾಸ್ ಹಾಲು ಸೇರಿಸಿ ಕುದಿಸಿ. ಕಲ್ಲು ಸಕ್ಕರೆ ಸೇರಿಸಿ. ನಂತರ ಬಾದಾಮಿ, ಗೋಡಂಬಿಯನ್ನು ಕೂಡ ತುಪ್ಪದಲ್ಲಿ ಹುರಿದುಕೊಂಡು ಚಿಕ್ಕದ್ದಾಗಿ ಕತ್ತರಿಸಿ ಈ ಪಾಯಸಕ್ಕೆ ಸೇರಿಸಿ. ಇದನ್ನು 2 ವರ್ಷದಿಂದ 6 ವರ್ಷದ ಮಕ್ಕಳಿಗೆ ಕೊಡಬಹುದು. ಅವರ ತೂಕ ಹೆಚ್ಚಾಗುತ್ತದೆ.

ಒಂದು ಕಪ್ ನೀರಿಗೆ 2 ಸ್ಪೂನ್ ನಷ್ಟು ಜೀರಿಗೆ ಹಾಕಿ ನೆನೆಸಿಡಿ. ನಂತರ ಇದಕ್ಕೆ ಇನ್ನೊಂದು ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. 2 ಕಪ್ ನೀರು ಒಂದು ಕಪ್ ಆಗುವವರೆಗೆ ಚೆನ್ನಾಗಿ ಕುದಿಸಿ. ಇದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಬೆಲ್ಲ ಕರಗುವವರೆಗೆ ಕುದಿಸಿ. 5 ವರ್ಷದ ಮೇಲಿನ ಮಕ್ಕಳಿಗೆ ದಿನಾ ¼ ಕಪ್ ನಷ್ಟು ಕೊಟ್ಟರೆ ಮಕ್ಕಳಿಗೆ ಹಸಿವು ಹೆಚ್ಚಾಗಿ ಚೆನ್ನಾಗಿ ಊಟ ತಿನ್ನುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಸನದಲ್ಲಿ ಮದುವೆಯಾದ ಮೂರನೇ ವಾರಕ್ಕೆ ಮದುಮಗಳ ಸಾವು

Wed Dec 22 , 2021
ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಆರೋಪದಲ್ಲಿ ಕೇಸ್ ದಾಖಲಾಗಿದೆ. ಹಾಸನ: ಮದುವೆಯಾದ ಮೂರನೇ ವಾರಕ್ಕೆ ಮದುಮಗಳು ಸಾವಿಗೀಡಾಗಿದ್ದಾಳೆ. ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಆ ಮದುಮಗಳ ಪೋಷಕರು ಆರೋಪ ಮಾಡಿದ್ದಾರೆ. ಹಾಸನದ ಸಲೀಂ ನಗರದಲ್ಲಿ ಈ […]

Advertisement

Wordpress Social Share Plugin powered by Ultimatelysocial