ಮಗಳ ನಿಶ್ಚಿತಾರ್ಥದ ನಂತರ ಅಳಿಯನಿಗೆ ಎಚ್ಚರಿಕೆ ನೀಡಿದ ಸ್ಮೃತಿ ಇರಾನಿ: ಏನು ಗೊತ್ತಾ..?

ಮಗಳ ನಿಶ್ಚಿತಾರ್ಥದ ನಂತರ ಅಳಿಯನಿಗೆ ಎಚ್ಚರಿಕೆ ನೀಡಿದ ಸ್ಮೃತಿ ಇರಾನಿ: ಏನು ಗೊತ್ತಾ..?

ನವದೆಹಲಿ: ಕೇಂದ್ರ ಸಚಿವೆ ಮತ್ತು ಉತ್ತರ ಪ್ರದೇಶದ ಅಮೇಥಿ ಲೋಕಸಭೆಯ ಸಂಸದೆ ಸ್ಮೃತಿ ಇರಾನಿ(Smriti Irani) ರಾಜಕೀಯದ ಬದಲು ಇದೀಗ ವೈಯಕ್ತಿಕ ಜೀವನದ ಕುರಿತು ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರ ಪುತ್ರಿ ಶಾನೆಲ್ಲೆ ಇರಾನಿಯವರು ಅರ್ಜುನ್ ಭಲ್ಲಾ ಜೊತೆ ನಿಶ್ಚಿತಾರ್ಥ(Shanelle Irani Engagement) ಮಾಡಿಕೊಂಡಿದ್ದಾರೆ.

ಸ್ಮೃತಿ ಇರಾನಿ ತಮ್ಮ ಪುತ್ರಿ ಮತ್ತು ಅಳಿಯನಿಗೆ ತಮಾಷೆಯ ರೀತಿಯಲ್ಲಿ ಅಭಿನಂದಿಸಿದ್ದಾರೆ. ಸ್ಮೃತಿ ಇರಾನಿ ಡಿಸೆಂಬರ್ 25 ರಂದು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ಸ್ಮೃತಿ ಇರಾನಿ ಅವರ ಮಗಳು(Smiriti Irani Daughter) ಮತ್ತು ಅವರ ಭಾವಿ ಅಳಿಯನಿಗೆ ಶುಭ ಹಾರೈಸಿದ್ದಾರೆ.

ಅಳಿಯನಿಗೆ ಸ್ಮೃತಿ ಇರಾನಿ ಎಚ್ಚರಿಕೆ

ಸ್ಮೃತಿ ಇರಾನಿ ಅವರು ತಮ್ಮ ಮಗಳು ಮತ್ತು ಭಾವಿ ಅಳಿಯನ ಫೋಟೋವನ್ನು ಹಂಚಿಕೊಂಡಿದ್ದು, ‘ಪ್ರೀತಿಯ ಅರ್ಜುನ್ ಭಲ್ಲಾ(Arjun Bhalla)ನಿಗೆ ನಮ್ಮ ಕುಟುಂಬಕ್ಕೆ ಸ್ವಾಗತ’ ಎಂದು ಬರೆದಿದ್ದಾರೆ. ‘ನೀವು ಆಶೀವರ್ದಿಸಲ್ಪಟ್ಟಿದ್ದೀರಿ. ಏಕೆಂದರೆ ನೀವು ವಿಶೇಷ ವ್ಯಕ್ತಿ. ನಿಮ್ಮ ಮಾವ ಮತ್ತು ನನ್ನಂತಹ ಅತ್ತೆಯೊಂದಿಗೆ ನೀವು ವ್ಯವಹರಿಸಬೇಕಾಗಿದೆ (you have been officially warned). ಶನೆಲ್ಲೆಗೆ ದೇವರ ಕೃಪೆ ಯಾವಾಗಲೂ ಇರುತ್ತದೆ’ ಅಂತಾ ಹೇಳಿದ್ದಾರೆ.

 

ರೊಮ್ಯಾಂಟಿಕ್ ಮೂಡ್ ನಲ್ಲಿಅರ್ಜುನ್ ಮತ್ತು ಶನೆಲ್ಲೆ

ಸ್ಮೃತಿ ಇರಾನಿ ಅವರು Instagramನಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಪುತ್ರಿ ಶನೆಲ್ಲೆ(Shanelle Irani)ಗೆ ಅರ್ಜುನ್ ಭಲ್ಲಾ ಉಂಗುರ ಹಾಕುತ್ತಿರುವುದನ್ನು ಕಾಣಬಹುದು. 2ನೇ ಫೋಟೋ ಶನೆಲ್ಲೆ ಮತ್ತು ಅರ್ಜುನ್ ಭಲ್ಲಾ ಅವರು ಸೆಲ್ಫಿ ತೆಗೆಸಿಕೊಂಡಿದ್ದು, ಇಬ್ಬರೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ ಸ್ಮೃತಿ ಇರಾನಿ(Smriti Irani) ಪೋಸ್ಟ್ ಹಂಚಿಕೊಂಡ ಬಳಿಕ ಚಿತ್ರರಂಗದಿಂದ ರಾಜಕೀಯದವರೆಗೆ ಅನೇಕರು ಶನೆಲ್ಲೆ ಮತ್ತು ಅಜಯ್ ಭಲ್ಲಾ ಅವರನ್ನು ಅಭಿನಂದಿಸಿದ್ದಾರೆ. ಏಕ್ತಾ ಕಪೂರ್, ಮೌನಿ ರಾಯ್ ಮತ್ತು ಭೂಪೇಂದ್ರ ಯಾದವ್ ಸ್ಮೃತಿ ಇರಾನಿ ಅವರನ್ನು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಂಸಲೇಖ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? : ಸಿದ್ದರಾಮಯ್ಯ

Sun Dec 26 , 2021
ಬೆಂಗಳೂರು : ಹಂಸಲೇಖ ನೀಡಿರುವ ಹೇಳಿಕೆಯಲ್ಲಿ ಯಾವ ಅಪರಾಧವಿದೆ ? ಅವರು ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಾಹಿತಿ ಡಾ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಉಪಸ್ಥಿತರಿದ್ದ ಹಂಸಲೇಖ ಅವರನ್ನು ಸಮರ್ಥಿಸಿಕೊಂಡರು. ಹಂಸಲೇಖ ವಾಸ್ತಿವಿಕ ನೆಲೆಗಟ್ಟಿನಲ್ಲಿ ಮಾತನಾಡಿದರು. ಅದರೂ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದರು. ಪೇಜಾವರ ಶ್ರೀಗಳ ಬಗ್ಗೆ ಕಳೆದ ತಿಂಗಳು ಹಂಸಲೇಖ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. […]

Advertisement

Wordpress Social Share Plugin powered by Ultimatelysocial