ಮಾರ್ಚ್ 1 ರಿಂದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಸರ್ಕಾರಕ್ಕೆ ಕಡಕ್ ಎಚ್ಚರಿಕೆ ಕೊಟ್ಟ ಸರ್ಕಾರಿ ನೌಕರರು.

ಸರ್ಕಾರಿ ನೌಕರರಿಗೆ ಓ ಪಿ ಎಸ್ ಸೇರಿದಂತೆ ವಿವಿಧ ಬೇಡಿಕೆಗಳು ತಕ್ಷಣ ಜಾರಿಗೆ ಬರುವಂತೆ ಮಾಡಬೇಕು ಇಲ್ಲದಿದ್ದರೆ ಮಾರ್ಚ್ 1ರಿಂದ ತಾಲೂಕಿನ ಅದ್ಯಂತ ಯಾವುದೇ ಸರ್ಕಾರಿ ಕಚೇರಿಗಳು ಓಪನ್ ಆಗುವುದಿಲ್ಲ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಸರ್ಕಾರಕ್ಕೆ ಈ ಮೂಲಕ ಸಂದೇಶ ನೀಡಿದರು ತಾಲೂಕಿನ ಸರ್ಕಾರಿ ನೌಕರರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 202324ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನ ಬತ್ತಿ ಪರಿಷ್ಕರಣಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡಿರುವುದಿಲ್ಲ ಇದನ್ನು ಮನಗೊಂಡ ಸರ್ಕಾರ ನೌಕರರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಮಾನ್ಯ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ ಫೆಬ್ರುವರಿ 28ರ ವರೆಗೆ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಎಂದರೆ ಮಾರ್ಚ್ 1ನೇ ತಾರೀಖಿನಿಂದ ಯಾವುದೇ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವುದಿಲ್ಲ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು.
ಹಾಗೆಯೇ 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ವಿಧಾನಸಭಾ ಚುನಾವಣೆ ನೀತಿ ಸಹಿತ ಜಾರಿಗೂ ಮೊದಲು ಸರ್ಕಾರಿ ನೌಕರರ ಬೇಡಿಕೆಗಳನ್ನ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ನೌಕರರ ಗೌರವಾಧ್ಯಕ್ಷ ಚೆನ್ನರಾಜು ಮಾತನಾಡಿ ಪಂಜಾಬ್ ರಾಜಸ್ಥಾನ್ ಹಿಮಾಚಲ ಪ್ರದೇಶಗಳ ಮಾದರಿಯಂತೆ ಕರ್ನಾಟಕ ಸರ್ಕಾರವು ಎನ್‌ಪಿಎಸ್ ರದ್ದುಪಡಿಸಿ ಓ ಪಿ ಎಸ್ ಜಾರಿಗೊಳಿಸಿ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಈ ಮೂಲಕ ನೌಕರರ ವೃದ್ಧಪ್ಯ ಸಮಯಕ್ಕೆ ಆಸರೆಯಾಗಬೇಕು ಇಲ್ಲವಾದಲ್ಲಿ ಮಾರ್ಚ್ 1ರಿಂದ ನಮ್ಮ ಸರ್ಕಾರಿ ಅಧಿಕಾರಿಗಳಾಗಲಿ ಸಿಬ್ಬಂದಿ ವರ್ಗದವರಾಗಲಿ ಯಾರು ಕೂಡ ಕಚೇರಿಗಳಿಗೆ ಹಾಜರಾಗುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರಿಕಾ ಹೇಳಿಕೆಯ ಮುಖಾಂತರ ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕಿನ ಎಲ್ಲಾ ಅಧಿಕಾರಿಗಳು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು, ಶಿಕ್ಷಕರು, ನೌಕರರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗಳು ಎಂಬ ಕರುಣೆಯಿಲ್ಲದೆ ಕತ್ತು ಕೊಯ್ದು ರುಂಡ-ಮುಂಡವನ್ನು ಬೇರ್ಪಡಿಸಿದ ತಂದೆ..!

Sun Feb 26 , 2023
ನವದೆಹಲಿ : ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಪ್ರಕರಣ ಸಂಚಲನ ಮೂಡಿಸಿದೆ. ಬೇರೆ ಜಾತಿಯ ಹುಡುಗನನ್ನು ಪ್ರೀತಿ ಮದುವೆಯಾಗಿದ್ದ ಮಗಳನ್ನು ತಂದೆ ಸಿಟ್ಟಿನಲ್ಲಿ ಕೊಂದಿದ್ದಾನೆ. ಆಕೆಯ ರುಂಡ-ಮುಂಡವನ್ನು ಬೇರ್ಪಡಿಸಿ ಭೀಕರವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ಈ ಘಟನೆ ನಡೆದಿದೆ. ಆದರೆ, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಪಾಣ್ಯಂ ಪೊಲೀಸರು ಈ ಘಟನೆಯ ವಿವರಗಳನ್ನು ತಿಳಿಸಿದ್ದಾರೆ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಎಂಬುವವರಿಗೆ ಇಬ್ಬರು ಹೆಣ್ಣು […]

Advertisement

Wordpress Social Share Plugin powered by Ultimatelysocial