ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು.!

ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ, ವಧು-ವರರ ಬಗ್ಗೆ ಹಲವಾರು ವಿಚಿತ್ರವಾದ ಮತ್ತು ವಿಶಿಷ್ಟವಾದ ಕಥೆಗಳನ್ನು ನೀವು ಕೇಳಿರಬಹುದು.

ಇದೀಗ ಹಸೆಮಣೆಯಲ್ಲಿ ಕುಳಿತಿದ್ದ ವಧು, ವಿವಾಹದ ಸಂಪ್ರದಾಯಗಳನ್ನು ನಡೆಸುತ್ತಿರುವಂತೆಯೇ ವರನನ್ನು ಮದುವೆಯಾಗಲು ನಿರಾಕರಿಸಿರೋ ಘಟನೆ ನಡೆದಿದೆ.

ಉತ್ತರ ಪ್ರದೇಶದ ಉನ್ನಾವೊದ ವಧು, ವರನ ತಲೆ ಬೋಳಾಗಿದೆ ಎಂದು ತಿಳಿದ ನಂತರ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ತಲೆಗೆ ವಿಗ್ ಧರಿಸಿ ಬೋಳು ತಲೆಯನ್ನು ವರ ಮರೆಮಾಚಿದ್ದಾನೆ. ಈ ಘಟನೆಯು ಖಂಡಿತವಾಗಿಯೂ ನಿಮಗೆ ಆಯುಷ್ಮಾನ್ ಖುರಾನಾ ಅವರ 2019ರ ಚಲನಚಿತ್ರ ‘ಬಾಲಾ’ವನ್ನು ನೆನಪಿಸುತ್ತದೆ. ಇದು ಬೋಳು ತಲೆಯಿರುವ ಮತ್ತು ಮದುವೆಯಾಗಲು ತನ್ನ ಹೆಂಡತಿಯಿಂದ ಅದನ್ನು ಮರೆಮಾಡುವ ವ್ಯಕ್ತಿಯ ಕಥೆಯಾಗಿದೆ.

ಈ ಉನ್ನಾವೋ ಘಟನೆಯಲ್ಲಿ, ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದಿದ್ದವು. ಇನ್ನೇನು ಮಾಂಗಲ್ಯಧಾರಣೆ ಮಾಡಬೇಕು ಅನ್ನೋವಾಗ ಇಡೀ ಸನ್ನಿವೇಶವು ಬದಲಾಗಿದೆ. ವರ, ಮಂಟಪಕ್ಕೆ ಕಾಲಿಡುವ ಮೊದಲು, ಮೂರ್ಛೆ ತಪ್ಪಿದ್ದಾನೆ. ಆತ ತಲೆಸುತ್ತಿ ಕೆಳಕ್ಕೆ ಬಿದ್ದಾಗ, ವರನ ಅಸಲಿಯತ್ತು ಬಯಲಾಗಿದೆ. ಆತ ಧರಿಸಿದ್ದ ವಿಗ್ ಹೊರಬಂದಿದೆ. ಈ ವೇಳೆ ವಧುವಿನ ಕುಟುಂಬದಿಂದ ಮರೆಮಾಡಲ್ಪಟ್ಟ ಸತ್ಯವನ್ನು ಎಲ್ಲರೂ ನೋಡಿದ್ದಾರೆ.

ವರನ ಬೋಳು ತಲೆ ಕಂಡು ವಧು ಮದುವೆಗೆ ಒಲ್ಲೆ ಎಂದಿದ್ದಾಳೆ. ಅನೇಕರು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಮಧ್ಯಪ್ರವೇಶಿಸಿದರೂ ಸಹ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಸಾವೊಂದೇ ಕಟ್ಟ ಕಡೆಯ ಆಯ್ಕೆ ಅದು ನೂರು ಪ್ರತಿಶತ ಸಂಭವಿಸುತ್ತದೆ;

Mon May 23 , 2022
  ದ್ವೀಪ ರಾಷ್ಟ್ರ  ಶ್ರೀಲಂಕಾ  ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿನೊಂದಿಗೆ   ಹೋರಾಡುತ್ತಿದ್ದು, ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ಅಗತ್ಯ ವಸ್ತುಗಳ  ಬೆಲೆ   ಗಗನಕ್ಕೇರಿದೆ. ಅವಶ್ಯಕ ವಸ್ತುಗಳಾದ ಅಕ್ಕಿ (Rice), ಹಾಲಿನ ಪುಡಿ  ಬೇಳೆಕಾಳು   ಎಲ್ಪಿಜಿ  , ಸಕ್ಕರೆ   ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. ಆರ್ಥಿಕ ಪರಿಸ್ಥಿತಿ ಜೊತೆಗೆ ವಿದ್ಯುತ್, ಇಂಧನ, ಅನಿಲ, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆಯೂ ಕೆಗೆಟಕುವ ಯಾವುದೇ ಲಕ್ಷಣಗಳನ್ನು ತೋರುತ್ತಿಲ್ಲ. ಆಹಾರ ಕೊರತೆ […]

Advertisement

Wordpress Social Share Plugin powered by Ultimatelysocial