ತಿಂಗಳ ಮೊದಲ ದಿನ: ಇಂದಿನಿಂದ ಏನೇನು ಬದಲಾವಣೆ?

 

ಹೊಸದಿಲ್ಲಿ: 2022-23ರ ಆರ್ಥಿಕ ವರ್ಷದ ಒಂದು ತಿಂಗಳನ್ನು ಪೂರ್ಣಗೊಳಿಸಿ ಎರಡನೇ ತಿಂಗಳಿಗೆ ಕಾಲಿಟ್ಟಾಗಿದೆ. ಕಾರ್ಮಿಕರ ದಿನಾಚರಣೆಯೂ ಆಗಿರುವ ಇಂದು ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಅವು ಈ ಕೆಳಗಿನಂತಿವೆ.

ಆರೋಗ್ಯ ಸಂಜೀವಿನಿ ದುಪ್ಪಟ್ಟು

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ “ಆರೋಗ್ಯ ಸಂಜೀವಿನಿ ವಿಮೆ’ಯ ಕವರೇಜ್‌ನ್ನು 10 ಲಕ್ಷ ರೂ.ಗೆ ಏರಿಸಲಾಗಿದೆ. ಈವರೆಗೆ ಈ ವಿಮೆಯ ಕವರೇಜ್‌ ಮೊತ್ತ ಕೇವಲ 5 ಲಕ್ಷ ರೂ. ಇತ್ತು.

ಆಯಕಿಸ್‌ ಬ್ಯಾಂಕ್‌ ಸೇವೆ ದುಬಾರಿ

ಆಯಕ್ಸಿಸ್‌ ಬ್ಯಾಂಕ್‌ ತನ್ನ ಎಲ್ಲ ಸೇವೆಗಳ ಶುಲ್ಕಗಳನ್ನು ದುಬಾರಿ ಮಾಡಿದೆ. ಹಾಗೆಯೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ 10,000 ರೂ. ಇದ್ದ ಕನಿಷ್ಠ ಠೇವಣಿಯನ್ನು ಇಂದಿನಿಂದ 15,000 ರೂ.ಗೆ ಏರಿಸಲಾಗಿದೆ. ಕನಿಷ್ಠ ಠೇವಣಿ ಇಡದವರಿಗೆ ದಂಡ ವಿಧಿಸಲಾಗುತ್ತದೆ.

ಐಪಿಒ-ಯುಪಿಐ ಸಿಹಿ

ಷೇರು ಮಾರುಕಟ್ಟೆ ಪ್ರಿಯರಿಗೆ ಯುಪಿಐ ಸಿಹಿ ಸುದ್ದಿ ಕೊಟ್ಟಿದೆ. ಯುಪಿಐ ಮೂಲಕ ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡುವವರಿಗೆ ಗರಿಷ್ಠ ಬಿಡ್‌ ಮೊತ್ತವನ್ನು 2 ಲಕ್ಷ ರೂ. ಇಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

ಗ್ಯಾಸ್‌ ಬೆಲೆ ಏರಿಕೆ

ಭಾರತದ ಎಲ್ಲ ಗ್ಯಾಸ್‌ ಸಿಲಿಂಡರ್‌ ಸಂಸ್ಥೆಗಳು ತಿಂಗಳ ಮೊದಲ ದಿನದಂದು ಬೆಲೆಗಳಲ್ಲಿ ಬದಲಾವಣೆ ತರುತ್ತವೆ. ಹಾಗಾಗಿ ಇಂದು ಭಾರತದಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರಿಂದ "ರೈತ" ಚಿತ್ರದ ಪೋಸ್ಟರ್ ಬಿಡುಗಡೆ.

Sun May 1 , 2022
ನಾವೆಲ್ಲಾ ಇಂದು ನೆಮ್ಮದಿಯ ಜೀವನ ನಡೆಸಿತ್ತಿರಲು ಮುಖ್ಯ ಕಾರಣ ರೈತ. ಆತ ಬೆಳೆದ ಆಹಾರ ತಿಂದು ನಾವು ಸುಖವಾಗಿದ್ದೇವೆ. ಅಂತಹ “ರೈತ” ನ ಕುರಿತು ಬರುತ್ತಿರುವ ಚಿತ್ರ “ರೈತ”. ಇತ್ತೀಚೆಗೆ ಈ ಚಿತ್ರದ ಪೋಸ್ಟರನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಬಿಡುಗಡೆ ಮಾಡಿ ಶುಭ ಕೋರಿದರು. ಕುಮುದ ಆರ್ಟ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಅಮರನಾಥ ರೆಡ್ಡಿ ವಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೈತ ಬೇರೆ ಯಾರಿಂದಲೂ ಬಡ್ಡಿಗಾಗಿ ಹಣ ಪಡೆದು ಕಷ್ಟ ಪಡಬಾರದು. […]

Advertisement

Wordpress Social Share Plugin powered by Ultimatelysocial