ಮೇಘನಾ ರಾಜ್​ಗೆ ಮತ್ತೆ ಕಾಡುತ್ತಿದೆ ಆ ಭಯ; ಓಪನ್​ ಆಗಿಯೇ ಹೇಳಿಕೊಂಡ ನಟಿ

ಪಿ.ಬಿ. ಸ್ಟುಡಿಯೋಸ್​ ಲಾಂಛನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ವಿಶಾಲ್​ ಹೆಸರಿನ ಹೊಸ ಪ್ರತಿಭೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ.ಮೇಘನಾ ರಾಜ್​ ಅವರು ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ. ಅವರಿಗೆ ಎರಡೂ ಕಡೆಗಳಲ್ಲಿ ಬೇಡಿಕೆ ಇದೆ. ಆದರೆ ಕಾರಣಾಂತರಗಳಿಂದ ನಟನೆಯಿಂದ ದೂರ ಉಳಿಯುವ ಪರಿಸ್ಥಿತಿ ಬಂದೊದಗಿತ್ತು. ಈಗ ಅವರು ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಪನ್ನಗ ಭರಣ ನಿರ್ಮಾಣದ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡುವಾಗ ಅವರು ತಮಗೆ ಆಗುತ್ತಿರುವ ಭಯದ ಬಗ್ಗೆ ಹೇಳಿಕೊಂಡಿದ್ದಾರೆ.

ಪಿ.ಬಿ. ಸ್ಟುಡಿಯೋಸ್​ ಲಾಂಛನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ವಿಶಾಲ್​ ಹೆಸರಿನ ಹೊಸ ಪ್ರತಿಭೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದ ಮೂಲಕ ಮೇಘನಾ ರಾಜ್​ ಕಂಬ್ಯಾಕ್​ ಮಾಡುತ್ತಿದ್ದಾರೆ. ಇಂದು (ಅಕ್ಟೋಬರ್​ 17) ಚಿರಂಜೀವಿ ಸರ್ಜಾ ಅವರ ಜನ್ಮದಿನ. ಈ ವಿಶೇಷ ದಿನದಂದು ಚಿತ್ರತಂಡ ಮಾಧ್ಯಮದ ಎದುರು ಬಂದಿತ್ತು. ಈ ವೇಳೆ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ. ಮೇಘನಾ ಅವರು ತಮ್ಮ ವೃತ್ತಿಜೀವನದಲ್ಲಿ ಈ ರೀತಿಯ ಸಿನಿಮಾ ಮಾಡುತ್ತಿರುವುದು ಇದೇ ಮೊದಲಂತೆ. ಶೀಘ್ರವೇ ಸಿನಿಮಾ ಸೆಟ್ಟೇರಲಿದೆ. ಮೇಘನಾ ಮತ್ತೆ ಕ್ಯಾಮೆರಾ ಎದುರಿಸುತ್ತಿದ್ದು, ಒಂದು ಸಣ್ಣ ಭಯ ಕಾಡುತ್ತಿದೆ.

ಮಗುವನ್ನು ಪಡೆಯಬೇಕು ಎನ್ನುವ ನಿರ್ಧಾರಕ್ಕೆ ಬಂದ ನಂತರ ಮೇಘನಾ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡರು. ಇದಾದ ನಂತರ ಪತಿಯನ್ನು ಕಳೆದುಕೊಂಡರು. ಆ ನಂತರ ರಾಯನ್​ ಜನಿಸಿದ. ಅವನ ಆರೈಕೆಯಲ್ಲಿ ಮೇಘನಾ ಬ್ಯುಸಿ ಆದರು. ಈಗ ಒಂದು ಸಣ್ಣ ಗ್ಯಾಪ್​ನ ನಂತರ ಮೇಘನಾ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಸಾಮಾನ್ಯವಾಗಿ ಹೊಸದಾಗಿ ಕ್ಯಾಮೆರಾ ಎದುರಿಸಬೇಕಾದರೆ ಭಯ ಉಂಟಾಗುತ್ತದೆ. ಅದೇ ರೀತಿಯ ತಳಮಳ ಅವರಿಗೆ ಆಗುತ್ತಿದೆ.

‘ಈ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡುತ್ತಿದ್ದೇನೆ. ಆ ಖುಷಿ ನನಗಿದೆ. ಆದರೆ, ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ಆಗುತ್ತಿದ್ದ ಭಯವೇ ಈಗಲೂ ಆಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದಲ್ಲಿ ನಟಿಸುತ್ತಿರುವುದೇ ಒಂದು ಜವಾಬ್ದಾರಿ’ ಎಂದರು ಮೇಘನಾ.

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ : ವಿಕ್ಕಿ ಕೌಶಲ್

Mon Oct 18 , 2021
ಮುಂಬೈ: ತಮ್ಮ ಹಾಗೂ ಕತ್ರಿನಾ ಕೈಫ್ ಅವರ ನಿಶ್ಚಿತಾರ್ಥದ ವದಂತಿಗೆ ನಟ ವಿಕ್ಕಿ ಕೌಶಲ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ “ನೀವು ಮತ್ತು ಕತ್ರಿನಾ ಕೈಫ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ವಿಷಯ ನಿಮ್ಮ ಸ್ನೇಹಿತರಿಂದ ಹೊರ ಬಿದ್ದಿದೆ” ಎನ್ನುವ ಪ್ರಶ್ನೆಗೆ ನಗುಮುಖದಲ್ಲಿಯೇ ಉತ್ತರಿಸಿದ ಅವರು ನಾವು ಶೀಘ್ರದಲ್ಲಿಯೇ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತೇವೆ..ಸಾಕಾ ? ಎಂದು ಉತ್ತರಿಸಿದ್ದಾರೆ. ಬಾಲಿವುಡ್ ಕ್ಯಾಟ್ ಕತ್ರಿನಾ ಈ ಹಿಂದೆ ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ನಲ್ಲಿದ್ದರು. ಆದಾದ ಬಳಿಕ […]

Advertisement

Wordpress Social Share Plugin powered by Ultimatelysocial