ಉದ್ಯೋಗ ಮೇಳ ಕಾರ್ಯಕ್ರಮ!

ಬದಲಾದ ಜಾಗತಿಕ ಕಾಲಘಟ್ಟಕ್ಕೆ ಅನುಗುಣವಾಗಿ ಕೌಶಲಗಳು ಬದಲಾಗಬೇಕಾಗಿದೆ. ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ. ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗಾವಕಾಶ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮುನಿಸಿಪಲ್ ಮಹಾವಿದ್ಯಾಲಯದ ಆವರಣದಲ್ಲಿ ಕೌಶಲಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಹಾಗೂ ನಗರ ಪ್ರದೇಶಗಳ ಶಿಕ್ಷಣ ವ್ಯವಸ್ಥೆಯಲ್ಲಿಬಹಳ ವ್ಯತ್ಯಾಸವಿದೆ. ಇಂತಹ ಬದಲಾವಣೆ ಸಂದರ್ಭದಲ್ಲಿಗ್ರಾಮೀಣ ಮಕ್ಕಳಿಗೆ ಪೈಪೋಟಿ ಕಷ್ಟವಾಗಿದೆ ಎಂದು ಹೇಳಿದರು. ದೇಶದಲ್ಲಿಶೇ.45ಕ್ಕೂ ಅಧಿಕ ಪ್ರಮಾಣದಲ್ಲಿ ಯುವಸಮೂಹವಿದೆ. ವೇಗವಾದ ಆರ್ಥಿಕತೆಯ ಬೆಳವಣಿಗೆಗೆ ಅನುಗುಣವಾಗಿ ಯುವ ಶಕ್ತಿಯನ್ನು ಬಳಸಿಕೊಂಡು ದೇಶದ ಆರ್ಥಿಕತೆ ಬಲವರ್ಧನೆಗೊಳಿಸಬೇಕಾಗಿದೆ. ಯುವ ಶಕ್ತಿ ವರ್ತಮಾನದ ಬದುಕು ಕಟ್ಟಿಕೊಳ್ಳಲು ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಹಳೆಯ ಬ್ರಿಟಿಷ್‌ ಮಾದರಿಯ ಆಡಳಿತ ವ್ಯವಸ್ಥೆ ಬದಲಾಗಿದೆ. ಬದಲಾದ ಆಡಳಿತ ವ್ಯವಸ್ಥೆಗೆ ತಕ್ಕಂತೆ ತಾಂತ್ರಿಕ ಜ್ಞಾನವನ್ನು ಯುವಜನಾಂಗ ಗಳಿಸುವುದರ ಮೂಲಕ ಪ್ರಸ್ತುತ ಜಾಗತಿಕ ವ್ಯವಸ್ಥೆಗೆ ತಕ್ಕಂತೆ ಉದ್ಯೋಗ ಅವಕಾಶಗಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇಂದಿನ ಜಾಗತಿಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋರ್ಸ್‌ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ ತಕ್ಕಂತೆ ವೃತ್ತಿ ಕೌಶಲ್ಯ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶ ಪಡೆಯಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನವಿದ್ದರೇ ಯಶಸ್ಸು ಕಟ್ಟಿಟ್ಟಬುತ್ತಿ. ಯಾವುದೇ ಕೆಲಸ ದೊರೆತರೂ ಮನಸ್ಸಿನಿಂದ ಮಾಡಬೇಕು. ಯಾವುದೇ ಕೆಲಸ ಮೇಲು-ಕೀಳು ಎಂಬ ಭಾವನೆ ಇರಬಾರದು. ಇಂದಿನ ಜಾಗತಿಕ ಕಾಲಮಾನಕ್ಕೆ ತಕ್ಕಂತೆ ಉದ್ಯೋಗಾವಕಾಶ ಹೊಂದಲು ಕೌಶಲಧಾರಿತ ಶಿಕ್ಷಣ ಕಲಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕೌಶಲಧಾರಿತ ಹುಟ್ಟಿಸಿಕೊಳ್ಳಬೇಕು ಎಂದು ಹೇಳಿದರು.
ಯಾವುದೇ ಕೆಲಸ ಪಡೆಯಲು ವಿದ್ಯಾರ್ಹತೆಯ ಜತೆಗೆ ಕೌಶಲಾಧಾರಿತ ತರಬೇತಿ ಪಡೆಯಬೇಕು. ಮೊದಲ ಹಂತದಲ್ಲಿಯಾವುದೇ ಕೆಲಸ ಸಿಕ್ಕರೂ ಆ ಕೆಲಸ ಮಾಡಲು ಸಿದ್ಧರಾಗಬೇಕು. ಇದರಿಂದ ವೃತ್ತಿನೈಪುಣ್ಯತೆ ದೊರೆಯುತ್ತದೆ. ಮುಂದಿನ ದಿನಗಳಲ್ಲಿಉನ್ನತ ಉದ್ಯೋಗ ಹೊಂದಲು ನೆರವಾಗುತ್ತದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜನಗರ ಜನತೆಗೆ ಅಭಿನಂದನೆ ಗಳನ್ನು ತಿಳಿಸಿದ ಮುಖ್ಯಮಂತ್ರಿ....

Tue Dec 13 , 2022
ಮೌಢ್ಯಕ್ಕೆ ಸೆಡ್ಡು ಒಡೆದು ಚಾಮರಾಜನಗರಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.ಎಸ್.ಸಿ.ಎಸ್.ಟಿ.ಸಮುದಾಯಗಳ ಅಭಿರುದ್ದಿಗೆ ಹೆಚ್ಚು ಒತ್ತು ನೀಡಲಾಗುವುದು,ರಾಜ್ಯದ ಶೋಷಿತರ ಸಂಕಷ್ಟಕ್ಕೆ ನೇರವಾದ ಸರ್ಕಾರ ನಮ್ಮ ರಾಜ್ಯ ಸರ್ಕಾರ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial