ಮೆಂತ್ಯೆ ಸೊಪ್ಪನ್ನ ಯಾಕೆ ತಿನ್ನಬೇಕು..? ಇದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಮನುಷ್ಯನಿಗೆ ಶಕ್ತಿ ನೀಡುವ ಆಹಾರಗಳಲ್ಲಿ ಸೊಪ್ಪು ಕೂಡಾ ಒಂದು. ಹರಿವೆ ಸೊಪ್ಪು, ಬಸಳೆ, ಪಾಲಕ್, ನುಗ್ಗೆಕಾಯಿ ಸೊಪ್ಪು, ಸಬ್ಬಸಿಗೆ ಸೊಪ್ಪು ಹೀಗೆ ಸುಮಾರು ಸೊಪ್ಪುಗಳಿಂದ ಮಾಡಿದ ಆಹಾರವನ್ನ ನಾವು ಸೇವನೆ ಮಾಡ್ತೀವಿ. ಆ ಸೊಪ್ಪುಗಳಲ್ಲಿ ಮೆಂತ್ಯೆ ಸೊಪ್ಪು ಕೂಡ ಒಂದು.

ಇಂದು ನಾವು ಮೆಂತ್ಯೆ ಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಡಿಮೆ ಎಣ್ಣೆ ಬಳಸಿ ಮೆಂತ್ಯೆ ಸೊಪ್ಪನ್ನ ಹುರಿದು ಅದರ ಪದಾರ್ಥ ಮಾಡಿ ತಿನ್ನಬೇಕು. ಹೀಗೆ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಸೊಪ್ಪಿನ ಕಹಿಯೂ ಕಡಿಮೆಯಾಗುತ್ತದೆ. ನೀವು ತೂಕ ಇಳಿಸಿಕೊಳ್ಳಬೇಕು ಎಂದಲ್ಲಿ ಮೆಂತ್ಯೆ ಸೊಪ್ಪಿನ ಸೇವನೆ ಮಾಡಿ. ಈ ಸೊಪ್ಪು ತೂಕ ಇಳಿಸೋಕ್ಕೆ ಸಹಾಯ ಮಾಡುತ್ತೆ. ಸೊಪ್ಪು ಸೇವಿಸಿದ ಕೆಲವೇ ದಿನಗಳಲ್ಲಿ ಇದರ ರಿಸಲ್ಟ್ ನೀವು ಕಂಡುಕೊಳ್ಳಬಹುದು. ಮೆಂತ್ಯೆ ಸೊಪ್ಪನ್ನ ಹುರಿದೇ ತಿನ್ನಬೇಕು ಎಂದಿಲ್ಲ. ಹಸಿ ಎಲೆಯನ್ನೂ ಸೇವಿಸಬಹುದು. ಇದು ಆರೋಗ್ಯಕ್ಕೆ ಇನ್ನೂ ಉತ್ತಮ. ಉತ್ತರ ಕರ್ನಾಟಕದ ಜನ ರೊಟ್ಟಿಯೊಟ್ಟಿಗೆ, ಈರುಳ್ಳಿ, ಸೌತೇಕಾಯಿ ಮತ್ತು ಮೆಂತ್ಯೆ ಸೊಪ್ಪಿನ 5ರಿಂದ 6 ಎಲೆಯನ್ನ ಹಸಿಯಾಗೇ ತಿನ್ನುತ್ತಾರೆ.

ಇನ್ನು ನೀವು ಶುಗರ್ ಪೇಶಂಟ್ ಆಗಿದ್ದಲ್ಲಿ, ಅಥವಾ ನಿಮ್ಮ ಮನೆಯಲ್ಲಿ ಯಾರಾದ್ರೂ ಶುಗರ್ ಪೇಷಂಟ್ ಇದ್ದಲ್ಲಿ, ವಾರದಲ್ಲಿ ನಾಲ್ಕು ದಿನವಾದ್ರೂ ನೀವು ಮೆಂತ್ಯೆ ಸೊಪ್ಪನ್ನ ಸೇವನೆ ಮಾಡಲೇಬೇಕು. ಯಾಕಂದ್ರೆ ಈ ಸೊಪ್ಪು ಶುಗರ್ ಕಂಟ್ರೋಲ್ ಮಾಡುವ ಗುಣವನ್ನ ಹೊಂದಿದೆ. ರುಚಿಯಲ್ಲಿ ಕಹಿಯಾಗಿರುವ ಈ ಸೊಪ್ಪಿಗೆ ಶುಗರ್ ಬರದಂತೆ ತಡೆಗಟ್ಟುವ ಶಕ್ತಿಯೂ ಇದೆ. ಮೆಂತ್ಯೆ ಸೊಪ್ಪು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಮತ್ತು ಹೃದಯ ರೋಗ ಬರದಂತೆ ತಡೆಯುತ್ತದೆ. ಪ್ರತಿಯೊಬ್ಬರು ತಮ್ಮ ಕೊಲೆಸ್ಟ್ರಾಲ್ ಲೆವಲ್‌ನ್ನು ಚೆಕ್ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗಲೇ ಹಾರ್ಟ್‌ ಅಟ್ಯಾಕ್‌ನಂಥ ಸಮಸ್ಯೆ ಕಂಡು ಬರುತ್ತದೆ.

ಮೆಂತ್ಯೆ ಸೊಪ್ಪಿನ ಸೇವನೆಯಿಂದ ಬರೀ ಆರೋಗ್ಯವನ್ನಷ್ಟೇ ಅಲ್ಲ, ಸೌಂದರ್ಯವನ್ನ ಕೂಡ ಹೆಚ್ಚಿಸಬಹುದು. ಮೆಂತ್ಯೆ ಸೇವನೆ ಮಾಡಿದ್ರೆ, ತ್ವಚೆ ಕ್ಲೀನ್ ಆಗತ್ತೆ. ಮುಖ ಕಾಂತಿಯುತವಾಗಿ ಕಾಣತ್ತೆ. ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗತ್ತೆ. ಗರ್ಭಿಣಿಯರಿಗೆ ಮೆಂತ್ಯೆ ಸೊಪ್ಪಿನ ಪದಾರ್ಥ ತಿನ್ನಲು ವೈದ್ಯರು ಹೇಳುತ್ತಾರೆ. ಯಾಕಂದ್ರೆ ಆ ಸಂದರ್ಭದಲ್ಲಿ ದೇಹದಲ್ಲಿ ಹಿಮೋಗ್ಲೊಬಿನ್ ಪ್ರಮಾಣ ಕರೆಕ್ಟ್ ಆಗಿರಬೇಕು. ಅದಕ್ಕಾಗಿ ಸೊಪ್ಪುಗಳನ್ನ ಸೇವಿಸಬೇಕು. ಗರ್ಭಾವಸ್ಥೆಯಲ್ಲಿದ್ದಾಗ ಶುಗರ್, ಬಿಪಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅದೆಲ್ಲ ಬರಬಾರದು ಅಂದ್ರೆ ಗರ್ಭಿಣಿಯರು ವಾರದಲ್ಲಿ ನಾಲ್ಕು ದಿನವಾದ್ರೂ ಮೆಂತ್ಯೆ ಸೊಪ್ಪಿನ ಸೇವನೆ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

FORTUNE SOYS OIL:ಖಾದ್ಯ ತೈಲ ಬೆಲೆ 30-40 ರೂ ಇಳಿಕೆ;

Fri Dec 31 , 2021
ಖಾದ್ಯ ತೈಲ ಬೆಲೆ 30-40 ರೂ ಇಳಿಕೆ, ದರ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ ಅಡುಗೆ ಎಣ್ಣೆ ಬೆಲೆ 30-40 ರೂ.ಗಳಷ್ಟು ಕಡಿಮೆಯಾದ ನಂತರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಡಾ. ಸುಧಾಂಶು ಪಾಂಡೆ ಅವರು ತಮ್ಮ ರಾಜ್ಯಗಳಲ್ಲಿ ಸರಿಯಾದ MRP ದರದಲ್ಲಿ ಮಾರಾಟ ಮಾಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ. ಸರ್ಕಾರವು ಅಡುಗೆ ಎಣ್ಣೆಯ ಆಮದು ಸುಂಕವನ್ನು ಬಹುತೇಕ ಶೂನ್ಯಕ್ಕೆ […]

Advertisement

Wordpress Social Share Plugin powered by Ultimatelysocial