ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ, ಅವಾಚ್ಯ ಪದಗಳಿಂದ ನಿಂದನೆ

ಶಿವಸೇನೆಯ ಕಾರ್ಯಕರ್ತರು ನಾವು ಉಳಿದುಕೊಂಡಿರುವ ಮನೆಗೆ ನುಗ್ಗಿ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೀವವನ್ನೇ ತೆಗೆಯೋಕೆ ಮಾರಾಕಾಸ್ತ್ರಗಳಿಂದ ನುಗ್ಗಿದ್ದ ಪುಂಡರು, ಮರಾಠಿಯಲ್ಲೇ ಕ್ಷಮೆ ಕೇಳುವಂತೆ ಕೊರಳ ಪಟ್ಟಿ ಹಿಡಿದ್ರು.. ಕನ್ನಡಿಗರ ತಾಖತ್ತು, ಕನ್ನಡಿಗರ ಸ್ವಾಭಿಮಾನ ಕೆಣಕಿದ್ರೆ ನಾವು ಸುಮ್ನಿರ್ತಿವಾ..? ಹಲ್ಲೆ ಮಾಡಿದ್ರೂ ಕ್ಷಮೆ ಕೇಳಲಿಲ್ಲ ನಾವು.. ಮಹಾರಾಷ್ಟ್ರದಲ್ಲಿರುವ ಬಸವಣ್ಣರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸ್ಥಳೀಯ ಶಾಸಕರು ಹಾಗೂ ಕೇಂದ್ರ ಸಚಿವ ರಾಮದಾಸ್ ಅಟವಾಳೆರನ್ನ ಭೇಟಿ ಮಾಡಿ, ಬೆಳಗಾವಿ ಗಡಿ ವಿಚಾರದಲ್ಲಿ ಗಲಾಟೆ ಬೇಡ. ಭಾರತಾಂಬೆಯ ಮಕ್ಕಳು‌ ನಾವು..ಶಾಂತಿಯಿಂದ ಬದುಕೋಣ..ಈ ವಿಚಾರ ಪ್ರಧಾನಿಗಳ ಗಮನಕ್ಕೆ ತನ್ನಿ ಎಂದು ನಾವು ಮನವಿ ಮಾಡಿದ್ದೆವು. ಕಳೆದ ಬುದುವಾರ ಉದ್ದಾವ್ ಠಾಕ್ರೆಯ ನಿವಾಸಕ್ಕೆ ತೆರಳಿ, ಕನ್ನಡ ಶಾಲನ್ನು ಹಾಕಿಕೊಂಡು ಪ್ರತಿಭಟನೆ ಮಾಡಿ, ಮಸಿ ಬಳಿಯುವ ಎಚ್ಚರಿಕೆಯನ್ನು ಕೊಟ್ಟು, ಕನ್ನಡ ಶಾಲನ್ನ ಹಾಕಿಕೊಂಡೇ ಮಹಾರಾಷ್ಟ್ರದಲ್ಲಿ ಸುತ್ತಾಡಿದ್ವಿ. ಇದ್ರಿಂದ ನಮ್ಮನ್ನ ಗಮನಿಸುತ್ತಲ್ಲೇ, ನಿನ್ನೆ ರಾತ್ರಿ ಏಕಾಏಕಿ 50-100 ಜನ ಹಲ್ಲೆ ಮಾಡಿ ಮರಾಠಿಯಲ್ಲೇ ಕ್ಷಮೆ ಕೇಳುವಂತೆ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಿ, ಧಮ್ಕಿ ಹಾಕಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಸರ್ವ ಸಂಘಟನೆಗಳ ಒಕ್ಕೂಟ ಹೆದರುವುದಿಲ್ಲ.. ಸಮಸ್ತ ಕನ್ನಡಿಗರ ಬೆಂಬಲ, ಪ್ರೋತ್ಸಾಹ ಇರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ..ಮತ್ತೊಮ್ಮೆ ಹೇಳುತ್ತೇವೆ.. ನಾವು ಕನ್ನಡಿಗರು..ಸುಮ್ಮನಿದ್ದರೆ ಶಾಂತಿ…ಇಲ್ಲದಿದ್ದರೆ ಕ್ರಾಂತಿ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

 ಚೀನೀಯರ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಮೌನವು, ಸತ್ಯವಂತನೆಂಬ ಅವರ ಖ್ಯಾತಿಗೆ ಧಕ್ಕೆ ತರುತ್ತದೆ:ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ

Tue Dec 21 , 2021
ಚೀನೀಯರ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಮೌನವು, ಸತ್ಯವಂತನೆಂಬ ಅವರ ಖ್ಯಾತಿಗೆ ಧಕ್ಕೆ ತರುತ್ತದೆ ಎಂದು ರಾಜ್ಯಸಭೆಯ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಅವರು ಸೋಮವಾರ ರಾತ್ರಿ ಪೋಸ್ಟ್‌ ಪ್ರಕಟಿಸಿದ್ದಾರೆ.ಯಾರೂ ಬಂದಿಲ್ಲ  ಎಂದ ನಂತರವೂ, ಗಡಿ ನಿಯಂತ್ರಣಾ ರೇಖೆಯ ಬಳಿ ಹಲವು ಪ್ರದೇಶಗಳನ್ನು ಚೀನಾ ವಶಕ್ಕೆ ಪಡೆದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ ಮತ್ತು ಅರುಣಾಚಲದಲ್ಲಿನ ಆತಿಕ್ರಮಣದ ಬಗ್ಗೆ […]

Advertisement

Wordpress Social Share Plugin powered by Ultimatelysocial