ಬ್ರೇಕಿಂಗ್ : ಭಾರತದ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ಪಾಕ್..!

ನವದೆಹಲಿ, ಫೆ.26- ಗಡಿಭಾಗದಲ್ಲಿ ತಂಟೆ ತಕರಾರು ಮುಂದುವರೆಸಿರುವ ಪಾಕಿಸ್ತಾನ ಇದೇ ಮೊದಲ ಬಾರಿಗೆ ಭಾರತದತ್ತ ಡ್ರೋಣ್‍ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರವನ್ನು ಎಸೆದಿದೆ.ಉದಯಂಪುರದಲ್ಲಿ ಸುದ್ದಿಗೋಷ್ಠಿಯಲಿ ಮಾತನಾಡಿರುವ ಜಮ್ಮು ಕಾಶ್ಮಿರದ ಪೊಲೀಸ್ ಮಹಾನಿರ್ದೇಶಕ ದಿಲ್ ಬಾಗ್ ಸಿಂಗ್, ಶಾಂತಿ ಕದಡುವ ಸಲುವಾಗಿ ಪಾಕಿಸ್ತಾನದ ಡ್ರೋಣ್ ಗಳ ಮೂಲಕ ಪದೇ ಪದೇ ಗ್ರೆನೆಡ್, ಐಇಡಿ, ಪಿಸ್ತೂಲ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಎಸೆಯಲಾಗುತ್ತಿದೆ.ಇದೇ ಮೊದಲ ಬಾರಿಗೆ ರಾಸಾಯನಿಕ ಮಿಶ್ರಿತ ದ್ರವ ಮಾದರಿಯ ಶಸ್ತ್ರಾಸ್ತ್ರವನ್ನು ಎಸೆಯಲಾಗಿದೆ ಎಂದು ಹೇಳಿದ್ದಾರೆ.ಪಾಕಿಸ್ತಾನಿಯರು ಹಲವು ದಿನಗಳಿಂದಲೂ ಜಮ್ಮು-ಕಾಶ್ಮಿರದಲ್ಲಿ ಹಲವು ದಿನಗಳಿಂದ ಶಾಂತಿ ಕದಡುವ ಪ್ರಯತ್ನ ನಡೆಸುತ್ತಲೇ ಇವೆ. ಹೊಸದಾಗಿ ಬಳಕೆ ಮಾಡಲಾಗಿರುವ ರಾಸಾಯನಿಕ ಆಯುಧದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.ಕಳೆದ ವರ್ಷ 182 ಭಯೊತ್ಪಾದಕರನ್ನು ಹತ್ಯೆ ಮಾಡಲಾಗಿದೆ. 300ಕ್ಕೂ ಹೆಚ್ಚು ಆಯುಧಗಳನ್ನು ಜಪ್ತಿ ಮಾಡಲಾಗಿದೆ. ಅವರು ಪದೇ ಪದೇ ಹೆಚ್ಚು ಆಯುಧಗಳನ್ನು ಹಾಗೂ ಮಿಲಿಟನ್ ಗಳನ್ನು ಕಳುಹಿಸುತ್ತಲೇ ಇದ್ದಾರೆ. ಆದರೆ ನಾವು ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ.ಪಾಕಿಸ್ತಾನದ ಸಂಚನ್ನು ವಿಫಲಗೊಳಿಸುತ್ತಲೇ ಇದ್ದೇವೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಉದಯಂಪುರ್‍ನಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ಇಂದಿನಿಂದ ತಿನ್ನಲು ಪ್ರಾರಂಭಿಸಬೇಕಾದ ಆರೋಗ್ಯಕರ ಆಹಾರಗಳು;

Sat Feb 26 , 2022
ಚಳಿಗಾಲವು ಬಂದಾಗ ನಿಮ್ಮ ಚರ್ಮದ ವಿನ್ಯಾಸವು ಬದಲಾಗುತ್ತದೆ. ತಣ್ಣನೆಯ ಗಾಳಿಯು ನಿಮ್ಮ ಚರ್ಮದ ಟೋನ್ ಅನ್ನು ಒಣಗಲು ಸ್ವಯಂಚಾಲಿತವಾಗಿ ಬದಲಾಯಿಸುತ್ತದೆ, ಇದನ್ನು ಅನೇಕ ಜನರು ಗಮನಿಸಬಹುದು. ಮತ್ತೊಂದೆಡೆ, ಕೆಲವರು ನೈಸರ್ಗಿಕವಾಗಿ ಒಣ ಚರ್ಮವನ್ನು ಹೊಂದಿರಬಹುದು ಮತ್ತು ಅದನ್ನು ಜಯಿಸಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ಜಲಸಂಚಯನವಿಲ್ಲದೆ ಒಣಗುವುದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿಯನ್ನು ನೀಡಬೇಕಾದ ಸಮಯ ಇದು. ಆದ್ದರಿಂದ, ಜಾಗರೂಕರಾಗಿರುವುದು ಮುಖ್ಯ. ವಾಲ್‌ನಟ್ಸ್: ಸ್ವಾಭಾವಿಕವಾಗಿ, ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ವಾಲ್‌ನಟ್‌ಗಳನ್ನು ಹೆಚ್ಚು […]

Advertisement

Wordpress Social Share Plugin powered by Ultimatelysocial