ಮೆಟ್ರೋದಲ್ಲಿ ಬಿದ್ದ ಕಸವನ್ನ ಸ್ವಚ್ಛಗೊಳಿಸಿದ ಯುವಕ:

ಮ್ಮ ಸುತ್ತಮುತ್ತಲಿನ ವಾತಾವರಣ ಸ್ಚಚ್ಛವಾಗಿಟ್ಟುಕೊಳ್ಳಬೇಕು ಅನ್ನೋದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ. ಎಷ್ಟೋ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಕ್ಕ ಸಿಕ್ಕಲ್ಲಿ ಕಸ ಎಸೆಯುವುದನ್ನ ನಾವು ನೋಡಿರ್ತೆವೆ. ಆದರೆ ಇಲ್ಲೊಬ್ಬ ವ್ಯಕ್ತಿ ನಮ್ಮ ವಾತಾವರಣವನ್ನ ಯಾವ ರೀತಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಅನ್ನೋದನ್ನ ಸ್ವತಃ ತಾನೇ ಮಾಡಿ ತೋರಿಸಿದ್ದಾನೆ.

ಅದು ದೆಹಲಿ ಮೆಟ್ರೋ ರೈಲ್ವೆ. ಅಲ್ಲೊಬ್ಬ ಯುವಕ ಟಿಪ್ ಟಾಪ್ ಆಗಿ ರೆಡಿ ಆಗಿ, ಕುತ್ತಿಗೆಗೆ ಟೈ ಕಟ್ಟಿಕೊಂಡವನು ನಿಂತಿದ್ದ. ಆತ ಒಮ್ಮಿಂದೊಮ್ಮೆ ಕೆಳಗೆ ಬಿದ್ದ ಕಸವನ್ನ ಸ್ವತಃ ತಾನೇ ತೆಗೆಯುವುದಕ್ಕೆ ಶುರು ಮಾಡುತ್ತಾನೆ. ಅದರ ಫೋಟೋವನ್ನು ಆಶು ಸಿಂಗ್ ಅನ್ನುವವರು ತಮ್ಮ ಲಿಂಕ್ಡ್‌ಇನ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಯುವಕ  ಮೆಟ್ರೋ ರೈಲಿನಲ್ಲಿ ತನ್ನ ಟಿಫನ್ ಬಾಕ್ಸ್‌ನಿಂದ ತಿಂಡಿಯನ್ನ ತೆಗೆದು ತಿನ್ನುತ್ತಿದ್ದ. ಆಗ ಬ್ಯಾಗ್ನ್‌ನಲ್ಲಿ ಇದ್ದ ನೀರಿನ ಬಾಟಲ್‌ನ್ನ ತೆಗೆಯೋದಕ್ಕಂತ ಹೋದಾಗ, ಕೈಯಲ್ಲಿದ್ದ ಟಿಫನ್ ಬಾಕ್ಸ್ ಕೆಳಗೆ ಬಿದ್ದು ಬಿಡುತ್ತೆ. ಆಗ ಆ ಯುವಕ ತನ್ನ ನೋಟ್‌ಬುಕ್‌ನಿಂದ ಒಂದು ಪುಟ ಹರಿದು ಕೆಳಗೆ ಬಿದ್ದ ತಿಂಡಿಯನ್ನ ತೆಗೆಯುತ್ತಾನೆ.

ನಂತರ ತನ್ನ ಜೇಬಿನಿಂದ ಕರ್ಚಿಫ್ ತೆಗೆದು ಆ ಜಾಗವನ್ನ ಒರೆಸುತ್ತಾನೆ. ಇದನ್ನ ಆಶು ಸಿಂಗ್ ಅವರು ತಾವು ಪೋಸ್ಟ್ ಮಾಡಿರುವ ಫೋಟೋ ಜೊತೆಗೆ ವಿವರವಾಗಿ ಬರೆದಿದ್ದಾರೆ. ಜೊತೆಗೆ ಶೀರ್ಷಿಕೆಯಲ್ಲಿ “ಸ್ವಚ್ಛ ಭಾರತದ ಅಸಲಿ ಅಂಬಾಸಿಡರ್” ಎಂದಿದ್ದಾರೆ.

ಸಾರ್ವಜನಿಕ ಸ್ಥಳ ಎಂದು ಅಸಡ್ಡೆ ತೋರಿಸದೇ, ಯುವಕ ಶ್ರದ್ಧೆಯಿಂದ ಮಾಡಿರುವ ಈ ಕೆಲಸ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಈ ಯುವಕ ಅನೇಕರಿಗೆ ಮಾದರಿಯಾಗಿದ್ದಾನೆ ಎಂದು ಹೊಗಳಿದ್ಧಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಮಿಳಿಗೆ ಹೊಂಬಾಳೆ ಫಿಲಂಸ್; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’ ಚಿತ್ರದ ನಿರ್ಮಾಣ.

Sun Dec 4 , 2022
ಈ ವರ್ಷ ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಈಗ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಮೊದಲ ತಮಿಳು ಚಿತ್ರದ ಹೆಸರು ‘ರಘುತಥಾ’. ರಾಷ್ಟ್ರ ಮಟ್ಟದಲ್ಲಿ […]

Advertisement

Wordpress Social Share Plugin powered by Ultimatelysocial