ಮಿರ್ಜಾ ಗಾಲಿಬ್ ಓರ್ವ ಮಹಾಕವಿ.

1797 ಡಿಸೆಂಬರ್ 27ರಂದು ಆಗ್ರಾದಲ್ಲಿ ಜನಿಸಿ 1869ರ ಫೆಬ್ರವರಿ 15ರಂದು ದಿಲ್ಲಿಯಲ್ಲಿ ಕೊನೆಯ ಉಸಿರೆಳೆದ ಮಿರ್ಜಾಗಾಲಿಬರು ಬದುಕಿದುದು ಭಾರತದ ಸಂಕಷ್ಟಮಯ ಸಂಕ್ರಮಣ ಕಾಲದಲ್ಲಿ! ಭಾರತದಲ್ಲಿ ಸ್ವಾತಂತ್ರ್ಯಯುಗ ಮುಗಿದು ಪಾರತಂತ್ರ್ಯಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು; ಜಗತ್ತಿನಲ್ಲಿ ಕೃಷಿಯುಗ ಮುಗಿದು ಉದ್ಯಮಯುಗ, ಯಂತ್ರಯುಗ, ವಿಜ್ಞಾನಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು. ಭಾರತೀಯನಾಗಿ ಪಾರತಂತ್ರ್ಯದ ಯಾತನೆಗಳನ್ನು ಅನುಭವಿಸಿದ ಗಾಲಿಬನೇ ವಿಶ್ವಮಾನವನಾಗಿ ವಿಜ್ಞಾನಯುಗವನ್ನು ಸ್ವಾಗತಿಸಿದುದು ಅವನ ಮುಂಗಾಣ್ಕೆಯ ಕುರುಹು. ಇದು ಅವನಲ್ಲಿ ಇದ್ದಿತೆಂದೇ ಈ ವಿಷಮ ಪರಿಸ್ಥಿತಿಯಲ್ಲಿಯೂ ಅವನು ಭಾರತೀಯ ಸಾಹಿತ್ಯದ ಮರುಹುಟ್ಟಿನ ಮೊದಲಿಗರಲ್ಲಿ ಒಬ್ಬನಾಗಿ ಮೆರೆದನು.
ಗಾಲಿಬ್ ಮೂಲತಃ ತೂರಾನ್ ದೇಶದ ಆಫ್ರಾಸಿಯಾಬನ ವಂಶದವನಾದರೂ ಅವನ ತಾತ ಈ ದೇಶಕ್ಕೆ ಬಂದುದು ಜೀವನೋಪಾಯಕ್ಕಾಗಿ. ಅವನು ದಿಲ್ಲಿಗೆ ಬಂದು ಎರಡನೆಯ ಷಾಹ್ ಆಲಮ್ ಅವರ ಸೈನ್ಯದಲ್ಲಿ ದೊಡ್ಡ ಅಧಿಕಾರಿಯಾಗಿ ಸೇರಿದ. ಅವರ ಮಗ-ಗಾಲಿಬರ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ಖಾನರು ಮೊದಲು ಔದ್ ಸಂಸ್ಥಾನದ ನವಾಬರಲ್ಲಿಯೂ, ಆಮೇಲೆ ಹೈದರಾಬಾದಿನ ನಿಜಾಮರಲ್ಲಿಯೂ ಸೇವೆ ಸಲ್ಲಿಸಿ ಕೊನೆಗೆ ಆಲ್ವಾರ್ ಸಂಸ್ಥಾನಿಕನ ಸೇವೆ ಕೈಗೊಂಡರು. ಆ ಸಂಸ್ಥಾನದ ಅವಿಧೇಯ ಸಾಮಂತನೊಬ್ಬನನ್ನು ಬಗ್ಗು ಬಡಿಯಲು ಆಜ್ಞೆಯಾದುದರಿಂದ ಮಿರ್ಜಾ ಅಬ್ದುಲ್ಲಾ ಬೇಗ್ ಖಾನರು ಆ ಸಾಮಂತನ ಕೋಟೆಯ ಮೇಲೆ ಲಗ್ಗೆಯಿಟ್ಟರು. ಅದರಲ್ಲಿಯೇ ಅವರು 1802ರಲ್ಲಿ ಮಡಿದು ಹೋದರು. ಆಗ ಮಿರ್ಜಾ ಗಾಲಿಬ್ ಇನ್ನೂ ಐದು ವರ್ಷಗಳ ಬಾಲಕ! ತಂದೆಯು ತೀರಿದ ಮೇಲೆ ತಮ್ಮ ಚಿಕ್ಕಪ್ಪ ನಸರುಲ್ಲಾ ಬೇಗ್ ಖಾನರ ಪಾಲನೆಯಲ್ಲಿ ಬೆಳೆದ ಬಾಲಕ ಗಾಲಿಬ್; ಅವನು 9 ವರ್ಷದವನಿದ್ದಾಗ ಆ ಕಕ್ಕನೂ ಆನೆಯಿಂದ ಬಿದ್ದು ಅಸು ನೀಗಿದ. ಮಿರ್ಜಾ ಅಬ್ದುಲ್ಲಾ ಬೇಗ್ ಖಾನರ ಹೆಂಡತಿ ಆಗ್ರಾ ನಗರದ ಗೌರವಾನ್ವಿತ ಪೌರನೂ, ಸೈನ್ಯಾಧಿಕಾರಿಯೂ ಆಗಿದ್ದ ಖ್ವಾಜಾ ಗುಲಾಮ್ ಹುಸೇನ್ ಖಾನರ ಮಗಳು. ಈಗ ಅವರು ಮಿರ್ಜಾ ಗಾಲಿಬನ ಪಾಲನೆ ಪೋಷಣೆಗೆ ಮಂದಾದರು. ಗಾಲಿಬ್ ಆಗ್ರಾ ನಿವಾಸಿಯಾದ.
ಗಾಲಿಬನ ದಿನಗಳು ಆದಷ್ಟು ಸುಖಮಯವಾಗುವಂತೆ, ಅವನು ಆದಷ್ಟು ಕಲಿತು ಜಾಣನಾಗುವಂತೆ ಅವನ ಈ ಕರುಳಿನ ಅಜ್ಜ ಎಚ್ಚರಿಕೆ, ಆಸ್ಥೆ, ಮಮತೆಗಳೊಡನೆ ಅವನನ್ನು ಬೆಳೆಸಿದ. ಅವನ ಜೀವನದ ಈ ಅವಧಿಯೇ ಅವನ ವಸಂತಕಾಲವೆಂದು ಹೇಳಬಹುದು. ಅವನಿಗೆ ಆಗ ಆಗ್ರಾದ ಪ್ರಸಿದ್ಧ ವಿದ್ವಾಂಸರೆನಿಸಿದ್ದ ಷೇಖ ಮಅಜಮ್ ಅವರಲ್ಲಿ ವಿದ್ಯಾಭ್ಯಾಸವಾಯಿತೆಂದೂ, ಅವನು 14 ವರ್ಷದವನಾದಾಗ ಅವನಿಗೆ ಎರಡು ವರ್ಷಗಳವರೆಗೆ ಮುಲ್ಲಾ ಅಬ್ದುಲ್ ಸಮದ್ ಎಂಬ ಪ್ರಖ್ಯಾತ ಫಾರಸೀ ಅರಬ್ಬೀ ಪಂಡಿತರಿಂದ ಈ ಭಾಷೆಗಳಲ್ಲಿ, ವಿಶೇಷವಾಗಿ, ಫಾರಸೀ ಭಾಷೆಯಲ್ಲಿ ಪರಿಣತಿ ದೊರೆಯಿತೆಂದೂ ಹೇಳುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಪ್ರಾಪರ್ಟಿಗೆ ಸಾಲ ನೀಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಕೋಟ್ಯಂತರ ರೂಪಾಯಿ ವಂಚನೆ!

Wed Dec 28 , 2022
ತಮಿಳು ನಾಡಿನ ಚೈನ್ನೈ ಮೂಲದ ಸಾಮಿನಾಥ್ ಸುಬ್ಬಯ್ಯಚೆಟ್ಟಿ ಮತ್ತು ಗ್ಯಾಂಗ್ ನಿಂದ ವಂಚನೆ ಸಾಮಿನಾಥ್ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನಲ್ಲಿ ಕಚೇರಿ ವೈಯ್ಯಾಲಿಕಾವಲ್ ವಿನಾಯಕ ಸರ್ಕಲ್ ಬಳಿ ಕಚೇರಿ ತೆರೆದು ವಂಚನೆ ನೂರಾರು ಗ್ರಾಹಕರಿಗೆ ವಂಚನೆ ಹಿನ್ನಲೆ ಆರು ಜನ ಆರೋಪಿಗಳ ವಿರುದ್ದ ಎಫ್ಐಆರ್ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಸಿಬಿಲ್ ಸ್ಕೋರ್ ಕಡಿಮೆ ಇದ್ದರು ಲೋನ್ ಕೊಡುವುದಾಗಿ ಆಮಿಷ ಲೋನ್ ಮಂಜೂರು ಮಾಡುವ ಹಣಕ್ಕೆ ಇನ್ಯೂರೆನ್ಸ್, ಲೀಗಲ್ ವ್ಯಾಲ್ಯೂವೇಷನ್, […]

Advertisement

Wordpress Social Share Plugin powered by Ultimatelysocial