ಆಧುನಿಕ ಭಗೀರಥ ಎಂಬಿ ಪಾಟೀಲ್ ಕಂಚಿನ ಪ್ರತಿಮೆ !

ಬರದನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಆಧುನಿಕ ಭಗೀರಥ ಎಂದು ಖ್ಯಾತಿ ಪಡೆದಿದ್ದಾರೆ. ಸಂಗಾಪುರ ಎಸ್ ಎಚ್ ಗ್ರಾಮಸ್ಥರು 7ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಚಿನ ಮೂರ್ತಿ ತಯಾರಿಸಿ ಮಾರ್ಚ್ 17ರಂದು ಅನಾವರಣಗೊಳಿಸಲಿದ್ದಾರೆ.

ಎಂಬಿ ಪಾಟೀಲ್ 2013ರಿಂದ 2018ವರೆಗೆ ಜಲಸಂಪನ್ಮೂಲ ಸಚಿವರಾಗಿ ತಾವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಅದರಲ್ಲಿ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್.ಗ್ರಾಮದಲ್ಲಿ ರೈತರು ಕೊಳವೆಬಾವಿಯನ್ನೇ ಅವಲಂಬಿಸಿ ಅತ್ಯಲ್ಪ ಬೆಳೆ ತೆಗೆಯುತ್ತಿದ್ದರು. ಎಂಬಿ ಪಾಟೀಲ್ ನೀರಾವರಿ ಯೋಜನೆ ಜಾರಿ ಮಾಡಿದ ಮೇಲೆ ಸಂಗಾಪುರ ಎಸ್ ಎಚ್ ಗ್ರಾಮದಲ್ಲಿ ರೈತರು ಕಬ್ಬು, ದ್ರಾಕ್ಷಿ, ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ‌. ಹೀಗಾಗಿ ಗ್ರಾಮಸ್ಥರು ಪಕ್ಷಾತೀತವಾಗಿ ಎಂಬಿ ಪಾಟೀಲ್ ಅವರ ಕಂಚಿನ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ಎಂಬಿ ಪಾಟೀಲ್ ಅವರಿಗೆ ತಿಳಿಸಿದ್ರೆ ಬೇಡಾ ಅನ್ನುತ್ತಾರೆ ಎಂದು ಗ್ರಾಮಸ್ಥರು ಅವರಿಗೆ ತಿಳಿಸದೇ 7ಲಕ್ಷರೂಪಾಯಿ ದೇಣಿಗೆ ಸಂಗ್ರಹಿಸಿ ಜೈಪುರದಲ್ಲಿ ಕಂಚಿನ ಮೂರ್ತಿ ತಯಾರಿಸಲು ಆರ್ಡರ್ ಕೊಟ್ಪಿದ್ದರು. ಮಾರ್ಚ್ 17ರಂದು ಗ್ರಾಮದಲ್ಲಿ ಪಕ್ಷಾತೀತವಾಗಿ ಜನರು ಸೇರಿ ಎಂಬಿ ಪಾಟೀಲ್ ಅವರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ. ಜೈಪುರದಿಂದ ಪ್ರತಿಮೆ ಮಾರ್ಚ್ 11ಕ್ಕೆ ಗ್ರಾಮಕ್ಕೆ ಬಂದು ತಲುಪಿದ್ದು.ಮೂರ್ತಿ ಅನಾವರಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಗ್ರಾಮದಲ್ಲಿ ಭರದಿಂದ ಸಿದ್ಧತೆ ನಡೆದಿವೆ.ಪಕ್ಷಾತೀತವಾಗಿ ಕಾರ್ಯಕ್ರಮ ಮಾಡುತ್ತಿದ್ದು , ಯಾವುದೇ ರಾಜಕೀಯ ನಾಯಕರಿಗೆ ಆಹ್ವಾನ ನೀಡಿಲ್ಲ.ಐವರು ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡಲಿದ್ದು, ಎಂಬಿ ಪಾಟೀಲ್ ಹಾಗೂ ಸುನೀಲ್ ಗೌಡ ಪಾಟೀಲ್ ದಂಪತಿಗಳಿಗೆ ಸನ್ಮಾನಿಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಡಬ್ಬಲ್ ಇಂಜಿನ್ ಸರ್ಕಾರ ವಿರುದ್ಧ ಪತ್ರಿಕಾ ಗೋಷ್ಠಿ !

Mon Mar 13 , 2023
ನೆಲ ಕಚ್ಚಿದ ಕೊಬ್ಬರಿ ಬೆಲೆ ಕನಿಷ್ಠ ಕ್ವಿಟಂಲ್ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನಿಡುವಂತೆ ಸರ್ಕಾರಕ್ಕೆ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಒತ್ತಾಯ.ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕ್ವಿಟಂಲ್ ಕೊಬ್ಬರಿಗೆ 5 ‌ಸಾವಿರ ರೂಪಾಯಿ ಸಹಾಯಧನ ನಿಡಬೇಕು.  ಕೊಬ್ಬರಿಗೆ ಸರಿಯಾದ ಗುಣಮಟ್ಟ ನಿಗಧಿ (ಎಫ್ ಎಕ್ಯೂ) ನಿಯಮದಂತೆಯೇ ಕೊಬ್ಬರಿ ಖರೀದಿ ಮಾಡಿದ 72 ಗಂಟೆಯೊಳಗೆ ರೈತರ ಖಾತೆಗೆ ಹಣವನ್ನು ವರ್ಗಾಯಿಸಬೇಕು ತಪ್ಪಿದಲ್ಲಿ ತಿಂಗಳಿಗೆ […]

Advertisement

Wordpress Social Share Plugin powered by Ultimatelysocial