ಭೂಮಿ ಕಬಳಿಸಿಲ್ಲ ಮೋದಿ ಹೇಳಿಕೆಗೆ ರಾಗಾ ಆಕ್ಷೇಪ.

 

ಗಡಿ ಭಾಗದಲ್ಲಿ ಭಾರತ ಭೂಪ್ರದೇಶದ ೨೦೦೦ ಚದರ ಕಿಮೀ ಅನ್ನು ಚೀನಾ ಸೇನಾ ನಿಯಂತ್ರಣದಲ್ಲಿದ್ದೂ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಇಂಚು ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಹೇಳುತ್ತಿರುವುದು ದುರಂತವೇ ಸರಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.ಭಾರತದ ಭೂ ಭಾಗಕ್ಕೆ ಯಾರೂ ನುಗ್ಗಿ ನಮ್ಮನ್ನು ಬೆದರಿಸುವುದನ್ನು ಒಪ್ಪುವುದಿಲ್ಲ. ಚೀನೀಯರು ನಮ್ಮ ಪ್ರದೇಶಕ್ಕೆ ನುಗ್ಗಿ ಸೈನಿಕರನ್ನು ಕೊಂದಿದ್ದಾರೆ,ಅದನ್ನೂ ಆದರೆ ಪ್ರಧಾನಿ ನಿರಾಕರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಸಂಘದ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತದ ಗಡಿಯಲ್ಲಿ ಚೀನಿಯರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಚೀನಿಯರು ಪ್ರತಿಕೂಲ, ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ‘ಚೀನಾ ಬೆದರಿಕೆ’ ಅರ್ಥವಾಗುತ್ತಿಲ್ಲ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.ಭಾರತೀಯ ವಿದೇಶಾಂಗ ನೀತಿ ಕುರಿತು ಬೆಂಬಲಿಸಿದ ಅವರು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವಿಗೆ ಸಂಬಂಧಿಸಿದಂತೆ ದೊಡ್ಡ ಭಿನ್ನಾಭಿಪ್ರಾಯ ಹೊಂದಿಲ್ಲ ಎಂದು ಹೇಳಿದ್ದಾರೆ.ಬಿಬಿಸಿ ಕಚೇರಿಗಳ ಮೇಲೆ ಭಾರತ ದಾಳಿ ನಡೆಸಿರುವುದು ಧ್ವನಿ ಹತ್ತಿಕ್ಕುವ ಕೆಲಸ ಮಾಡಿದೆ ಎಂದು ದೂರಿದ ಅವರು ಪ್ರಧಾನಿ ಮೋದಿ ತಮ್ಮ ‘ನವ ಭಾರತದ ಕಲ್ಪನೆ’ಯಲ್ಲಿ ಎಲ್ಲರೂ ‘ಮೌನವಾಗಿರಲು’ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹ್ಯಾರಿಸ್‌ ಆರ್ಭಟ ಯುಪಿಗೆ ಗೆಲುವು.

Mon Mar 6 , 2023
  ಆಸ್ಟ್ರೇಲಿಯಾದ ಆಲ್‌ರೌಂಡರ್‌ ಅಟಗಾರ್ತಿ ಗ್ರೇಸ್‌ ಹ್ಯಾರಿಸ್‌ ಪ್ರದರ್ಶಿಸಿದ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರರ್ಶನದ ನೆರವಿನಿಂದ ಇಲ್ಲಿ ಡಬ್ಲ್ಯುಪಿಎಲ್‌ನ ಗುಜರಾತ್‌ ಜಾಯಂಟ್ಸ್‌ ವಿರುದ್ದದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಅತ್ತ ಗುಜರಾತ್‌ ಪರ ಕಿಮ್‌ ಗಾರ್ತ್‌ ಐದು ವಿಕೆಟ್‌ಗಳ ಗೊಂಚಲು ಪಡೆದರೂ ತಂಡ ಗೆಲುವು ಸಾಧಿಸಲು ವಿಫಲತೆ ಕಂಡಿತು.ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ಗೆ ಅರಂಭಿಕ ಆಟಗಾರ್ತಿ ಸಬ್ಭಿನೇನಿ ಮೇಘನಾ (೨೪) ಉತ್ತಮ ಆರಂಭವನ್ನೇ ನೀಡಿದರು. ಮಧ್ಯಮ […]

Advertisement

Wordpress Social Share Plugin powered by Ultimatelysocial