ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ ‘ಗೋಧಿ’ ಚರ್ಚೆ!

ಟೋಕಿಯೋ, ಮೇ 23: ಜಪಾನ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತದಿಂದ ಗೋಧಿ ರಫ್ತಿಗೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಉಕ್ರೇನ್ ವಿರುದ್ಧದ ರಷ್ಯಾದ ನಡೆಯುತ್ತಿರುವ ಯುದ್ಧದ ಕುರಿತು ಪ್ರಧಾನಿ ಮೋದಿ ಜೊತೆಗೆ ಜೋ ಬೈಡನ್ “ರಚನಾತ್ಮಕ ಮತ್ತು ನೇರ” ಚರ್ಚೆ ನಡೆಸುವ ಸಾಧ್ಯತೆಯಿದೆ. ಏಕೆಂದರೆ ಪೂರ್ವ ಯೂರೋಪಿಯನ್ ದೇಶದ ವಿರುದ್ಧ ಮಿಲಿಟರಿ ಆಕ್ರಮಣಗಳನ್ನು ಪ್ರಾರಂಭಿಸಲು ಆದೇಶಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಖಂಡಿಸುವಲ್ಲಿ ಭಾರತವು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಸೇರಿಕೊಳ್ಳುವುದರಲ್ಲಿ ಕೊಂಚ ಹಿಂದೇಟು ಹಾಕುತ್ತಿದೆ.

ಉಕ್ರೇನ್‌ನಲ್ಲಿ ರಷ್ಯಾದ ಸೇನಾ ಕಾರ್ಯಾಚರಣೆಗಳ ಪರಿಣಾಮವಾಗಿ ಜಾಗತಿಕ ಆಹಾರ ಭದ್ರತೆಯ ಮತ್ತು ಪೂರೈಕೆಗೆ ಪೆಟ್ಟುಕೊಟ್ಟಿದೆ. ಟೋಕಿಯೊದಲ್ಲಿ ನಡೆಯಲಿರುವ ‘ಕ್ವಾಡ್’ ಶೃಂಗಸಭೆಯಲ್ಲಿ ಈ ವಿಷಯವೂ ಸಹ ಪ್ರಸ್ತಾಪವಾಗುವ ಸಾಧ್ಯತೆಯಿದೆ. “ಕ್ವಾಡ್‌ನಲ್ಲಿ ಆಹಾರ ಭದ್ರತೆಯು ಚರ್ಚೆಯ ವಿಷಯವಾಗಿದೆ,” ಎಂದು ಬೈಡೆನ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.

ಬೈಡನ್ ಜೊತೆಗೆ ಟೋಕಿಯೋಗೆ ಸುಲ್ಲಿವಾನ್: ಯುಎಸ್ ಅಧ್ಯಕ್ಷ ಜೋ ಬೈಡನ್ ಜೊತೆಗೆ ಟೋಕಿಯೋ ಪ್ರವಾಸದಲ್ಲಿ ಜೊತೆಯಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸಹ ಶೃಂಗಸಭೆಯ ಭಾಗವಾಗಲಿದ್ದಾರೆ.

ಈ ಬಾರಿ ಟೋಕಿಯೋದಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಯುಎಸ್, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಈ ವೇಳೆ ಭಾರತದಿಂದ ಗೋಧಿ ರಫ್ತಿನ ಮೇಲಿನ ನಿರ್ಬಂಧಗಳನ್ನು ಸರಾಗಗೊಳಿಸುವಂತೆ ಬೈಡೆನ್ ಮೋದಿಯನ್ನು ಒತ್ತಾಯಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಭಾರತವು “ಜಗತ್ತಿನಾದ್ಯಂತ ನೆರೆಹೊರೆಯವರು ಮತ್ತು ಸ್ನೇಹಿತರಿಗೆ “ಗೋಧಿಯನ್ನು ರಫ್ತು ಮಾಡಲು ನಿರ್ಬಂಧ ವಿಧಿಸಿದೆ. ಕೆಲವು ಮಾನದಂಡಗಳ ಆಧಾರದ ಮೇಲೆ ವಿನಾಯಿತಿಗಳನ್ನು” ನೀಡುವುದಾಗಿ ಹೇಳಿದೆ. ಈ ಮಧ್ಯೆ ಈಜಿಪ್ಟ್‌ಗೆ 61500 ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ.

ಜಪಾನ್ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿಡಾ ಆಹ್ವಾನದ ಮೇರೆಗೆ 2022ರ ಮೇ 24ರಂದು ಟೋಕಿಯೋದಲ್ಲಿ ನಡೆಯಲಿರುವ 3ನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ.

2021ರ ಮಾರ್ಚ್ ನಲ್ಲಿ ಮೊದಲ ವರ್ಚುವಲ್ ಸಭೆ ನಡೆದಿತ್ತು. ಆನಂತರ ಇದೀಗ ಟೋಕಿಯೋದಲ್ಲಿ ನಡೆಯುತ್ತಿರುವುದು ಕ್ವಾಡ್ ನಾಯಕರ 4ನೇ ಸಂವಾದವಾಗಿದೆ. 2021ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ 2ನೇ ಮುಖಾಮುಖಿ ಶೃಂಗಸಭೆ ಹಾಗೂ 2022ರ ಮಾರ್ಚ್ ನಲ್ಲಿ 3ನೇ ವರ್ಚುವಲ್ ಶೃಂಗಸಭೆ ನಡೆದಿತ್ತು.

ನಾಲ್ಕನೇ ಶೃಂಗಸಭೆ ವಿಷಯವಸ್ತು:

ಈ ಬಾರಿ ನಡೆಯುತ್ತಿರುವ 4ನೇ ಕ್ವಾಡ್ ಶೃಂಗಸಭೆ, ಭಾರತ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಸಮಕಾಲೀನ ಜಾಗತಿಕ ವಿಷಯಗಳ ಬಗ್ಗೆ ನಾಯಕರ ವಿಚಾರ ವಿನಿಮಯಕ್ಕೆ ಅವಕಾಶ ಒದಗಿಸಲಿದೆ. ನಾಯಕರು ಕ್ವಾಡ್ ಉಪಕ್ರಮಗಳು ಮತ್ತು ಕಾರ್ಯಕಾರಿ ಗುಂಪಿನ ಪ್ರಗತಿಯನ್ನು ಪರಾಮರ್ಶಿಸುವರು, ಸಹಕಾರ ಸಂಬಂಧದ ಹೊಸ ಅವಕಾಶಗಳನ್ನು ಗುರುತಿಸುವುದು ಮತ್ತು ಭವಿಷ್ಯದ ಸಹಭಾಗಿತ್ವಕ್ಕೆ ಕಾರ್ಯತಾಂತ್ರಿಕ ಮಾರ್ಗದರ್ಶನ ಮತ್ತು ದೂರದೃಷ್ಟಿಯನ್ನು ಒದಗಿಸುವರು.

ಜಪಾನ್ ಪ್ರಧಾನಿ ಜೊತೆಗೆ ಮೋದಿ ಮಾತುಕತೆ:

ಜಪಾನ್ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿಡಾ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 24ರಂದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರ ಮಾತುಕತೆಯು ಇಬ್ಬರೂ ನಾಯಕರಿಗೆ ಪ್ರಧಾನಮಂತ್ರಿ ಕಿಶಿಡಾ ಭಾರತಕ್ಕೆ ಭೇಟಿ ನೀಡಿದ್ದಾಗ 2022ರ ಮಾರ್ಚ್ ನಲ್ಲಿ ನಡೆದ 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಸಮಾಲೋಚನೆಗಳನ್ನು ಮುಂದುವರಿಸಲು ಅವಕಾಶ ನೀಡಿತ್ತು.

ಜೋ ಬೈಡನ್ ಜೊತೆಗೂ ಪ್ರಧಾನಿ ಮೋದಿ ಚರ್ಚೆ

ಪ್ರಧಾನಮಂತ್ರಿ ನರೇಂದ್ರ ಮೋದಿ 2022ರ ಮೇ 24 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಭೆ ಇತ್ತೀಚೆಗೆ 2022ರ ಏಪ್ರಿಲ್ 11ರಂದು ವರ್ಚುವಲ್ ರೂಪದಲ್ಲಿ ನಡೆಸಿದ ಮಾತುಕತೆ ಮುಂದುವರಿಸಲು ಸಹಾಯಕವಾಗಲಿದೆ. ಉಭಯ ನಾಯಕರು ಭಾರತ-ಅಮೆರಿಕ ಕಾರ್ಯತಾಂತ್ರಿಕ ಪಾಲುದಾರಿಕೆ ಪರಾಮರ್ಶೆ ಮತ್ತು 2021ರ ಸೆಪ್ಟೆಂಬರ್ ನಲ್ಲಿ ಅಧ್ಯಕ್ಷ ಬೈಡೆನ್ ಅವರೊಂದಿಗೆ ಪ್ರಧಾನಮಂತ್ರಿ ನಡೆಸಿದ ದ್ವಿಪಕ್ಷೀಯ ಮಾತುಕತೆ ಮುಂದುವರಿಸುವ ಬಗ್ಗೆ ಸಮಾಲೋಚಿಸುವ ಸಾಧ್ಯತೆ ಇದೆ. ಅಲ್ಲದೆ ಅವರು, ಸಮಾನ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ನಡೆಸುವರು.

ಆಸ್ಟ್ರೇಲಿಯಾ ಮತ್ತು ಭಾರತದ ಮಧ್ಯೆ ಮಾತುಕತೆ:

ಆಸ್ಟ್ರೇಲಿಯಾದ ಪ್ರಧಾನಿ ಜೊತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ. ಉಭಯ ನಾಯಕರು ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಕುರಿತು ಪರಾಮರ್ಶೆ ನಡೆಸಲಿದ್ದು, ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ನಡೆಸುತ್ತಾರೆ. ಇಬ್ಬರೂ ಪ್ರಧಾನಮಂತ್ರಿಗಳ ನಡುವೆ 2022ರ ಮಾರ್ಚ್ 21ರಂದು ವರ್ಚುವಲ್ ರೂಪದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ಆನಂತರ 2022ರ ಏಪ್ರಿಲ್ 2 ರಂದು ಭಾರತ – ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ(ಇಸಿಟಿಎ)ಗೆ ಸಹಿ ಹಾಕಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆ ದಿಬ್ಬಣದ ವಾಹನ , ಕಾರಿ ನಡುವೆ ಭೀಕರ ಅಪಘಾತ: ಕಾಂಗ್ರೆಸ್‌ ಮುಖಂಡನ ದುರ್ಮರಣ

Mon May 23 , 2022
ಸಿದ್ದಾಪುರ : ಮದುವೆ ದಿಬ್ಬಣದ ಜನರನ್ನು ಕೊಂಡೊಯ್ಯುತ್ತಿದ್ದ ಮಾರುತಿ ಇಕೊ ಮತ್ತು ಎದುರುಗಡೆಯಿಂದ ಬಂದ ಕಾರು ಢಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟು 8ಕ್ಕೂ  ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಿದ್ಧಾಪುರ ತಾಲ್ಲೂಕಿನ ಶಿರೂರು ಬಳಿ ನಡೆದಿದೆ. ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ ಗೌಡ ಕಬ್ಬಿನ್ಮನೆ ಮೃತಪಟ್ಟ ದುರ್ದೈವಿ. ಮದುವೆ ಮುಗಿಸಿ ದಿಬ್ಬಣದ ಜನರನ್ನು ಇಕೋ ವಾಹನದಲ್ಲಿ ಕರೆದುಕೊಂಡು […]

Advertisement

Wordpress Social Share Plugin powered by Ultimatelysocial