ಭರ್ಜರಿ ರೋಡ್​ ಶೋ, ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ ಪ್ರಧಾನಿ?

ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸಿರುವ ಕಾಂಗ್ರೆಸ್ ನಿನ್ನೆಯಷ್ಟೇ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಇತ್ತ ಜೆಡಿಎಸ್ ಕೂಡ ಅಧಿಕಾರಕ್ಕೆ ಬಂದರೇ ಪ್ರತಿ ಮನೆಗೊಂದು ​ ಉದ್ಯೋಗದ ನೀಡುವುದಾಗಿ ಭರವಸೆ ನೀಡಿತ್ತು.ಹಾಗಿದ್ರೆ ರಾಜ್ಯ ಬಿಜೆಪಿ ನಾಯಕರು ಏನ್​ ಕೊಡ್ತಾರೆ? ಏನ್​ ಘೋಷಣೆ ಮಾಡ್ತಾರೆ? ಎಂಬ ಕುತೂಹಲ ಹಲವರನ್ನು ಕಾಡುತ್ತಿದೆ. ಈ ನಡುವೆ ಇಂದು ಪ್ರಧಾನಿ ನರೇಂದ್ರ ಮೋದು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್​ಶೋ ಮಾಡುವುದು ಫೈನಲ್​ ಆಗಿದೆ. ಅವಳಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದೆ. 5 ದಿನಗಳ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನೆಹರೂ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹುಬ್ಬಳ್ಳಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.ಮೋದಿ ಕಾರ್ಯಕ್ರಮದಿಂದ ಶೆಟ್ಟರ್​​ ಔಟ್​, ತಪ್ಪಿನ ಅರಿವಾಗಿ ಕೊನೇ ಕ್ಷಣದಲ್ಲಿ ಆಹ್ವಾನಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರನ್ನು ವೇದಿಕೆ ಮೇಲೆ ಕೈಬಿಟ್ಟ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗಿಯಾಗೋಕೆ ಅಂತಿಮ ಕ್ಷಣದಲ್ಲಿ ಜಗದೀಶ್​ ಶೆಟ್ಟರ್​ಗೆ ಆಹ್ವಾನ ಹೋಗಿದೆ. ಶೆಟ್ಟರ್​ಗೆ ಆಹ್ವಾನ ಕೊಟ್ಟಿಲ್ಲ ಅನ್ನೋದು ಅಧಿಕಾರಿಗಳ ಎಡವಟ್ಟು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದ್ದರು2023 ಅಜೆಂಡಾ ಹುಬ್ಬಳ್ಳಿಯಲ್ಲಿ ಮೋದಿ ರೋಡ್​ಶೋ2023ರ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ ಬಿಜೆಪಿ. ಹಾಗಾಗಿ ಪ್ರಧಾನಿ ಮೋದಿ ಎಂಬ ಮ್ಯಾಜಿಕ್​ಮೆನ್​​ರನ್ನ ಕರೆಸಿ ಸಮಾವೇಶ ನಡೆಸುತ್ತಿದೆ. ಬರೀ ಸಮಾವೇಶ ಅಲ್ಲ, ಇಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಯವ್ರ ರೋಡ್​ಶೋ ಕೂಡ ನಡೆಯೋದು ಖಚಿತವಾಗಿದೆ.ಪ್ರಧಾನಿ ಮೋದಿ ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸ್ತಾರೆ. ಏರ್​ಪೋರ್ಟ್​​ನಿಂದ ನೆಹರೂ ಮೈದಾನದವರೆಗೆ ಅಂದ್ರೆ ಬರೋಬ್ಬರಿ ಏಳುವರೆ ಕಿಲೋಮೀಟರ್​ ರೋಡ್​​ಶೋನಲ್ಲಿ ಪ್ರಧಾನಿ ಮೋದಿ ಭಾಗಿಯಾಗುತ್ತಾರೆ.ಸಂಜೆ 4 ಗಂಟೆಗೆ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ರೋಡ್ ಶೋ ನಡೆಯೋ ಮಾರ್ಗದುದ್ದಕ್ಕೂ ಪೊಲೀಸ್ ನಿಗಾವಹಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಹುಬ್ಬಳ್ಳಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯುವ ಜನೋತ್ಸವದಲ್ಲಿ 25,000+ ಯುವಕರಿಗೆ ಸ್ಥಳಾವಕಾಶ ಇದ್ದು ಸಮಾವೇಶದಲ್ಲಿ ಅಂದಾಜು 2 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ.ಇನ್ನು, ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸ್ವಾಮಿ ವಿವೇಕಾನಂದರ ಜಯಂತಿಯಂದು ನಾನು ಹುಬ್ಬಳ್ಳಿಯಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಕರ್ನಾಟಕಕ್ಕೆ ಬರುತ್ತೇನೆ. ಸ್ವಾಮಿ ವಿವೇಕಾನಂದರ ಆದರ್ಶಗಳು ನಮ್ಮ ಯುವಕರಿಗೆ ಮಾರ್ಗದರ್ಶನ ನೀಡುತ್ತಿರಲಿ ಮತ್ತು ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸಲಿ ಎಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆಮೋದಿಯವರನ್ನ ಸ್ವಾಗತಿಸೋಕೆ ಸಿಎಂ ಬೊಮ್ಮಾಯಿ ಸೇರಿದಂತೆ ಇಡೀ ಸರ್ಕಾರವೇ ಹುಬ್ಬಳ್ಳಿಗೆ ಆಗಮಿಸುತ್ತಿದೆ. ಮೋದಿ ಆಗಮನ ಹುಬ್ಬಳ್ಳಿ ಧಾರವಾಡದ ಜೊತೆ ಉತ್ತರ ಕರ್ನಾಟಕದಲ್ಲೂ ಬಿಜೆಪಿಗೆ ಭರ್ಜರಿ ತಂದುಕೊಡುವ ನಿರೀಕ್ಷೆ ಕಮಲ ಕಲಿಗಳದ್ದಾಗಿದೆ. ಇತ್ತ ಇತ್ತೀಚೆಗಷ್ಟೇ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ್ದರು. ಇಂದಿನ ಕಾರ್ಯಕ್ರಮ ಹೊರತು ಪಡಿಸಿದರೆ ಮುಂದಿನ ತಿಂಗಳಿನಲ್ಲೂ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಈ ಹಿಂದೆ ತಾವೇ ಶಂಕು ಸ್ಥಾಪನೆ ಮಾಡಿದ್ದ ತುಮಕೂರಿನ ಎಚ್‌ಎಎಲ್‌ ಹೆಲಿಕಾಪ್ಟರ್‌ ಘಟಕವನ್ನು ಫೆಬ್ರವರಿ 12ರಂದು ಉದ್ಘಾಟನ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ನಾಯಿ ಮರಿ ಕೊಟ್ಟು ಹರಿಪ್ರಿಯಾರನ್ನು ಪಟಾಯಿಸಿಕೊಂಡಿಲ್ಲ.

Thu Jan 12 , 2023
ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ವೈವಾಹಿಕಿ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. 2023ರ ಮೊದಲ ತಿಂಗಳಲ್ಲಿ ಶುಭ ಕಾರ್ಯ ನಡೆಯಲಿದೆ. ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಡೇಟಿಂಗ್ ವಿಷಯ ಹೊರಬಿದ್ದಿತ್ತು. ಬಳಿಕ ನಿಶ್ಚಿತಾರ್ಥದ ವಿಷಯ ಕೂಡ ರಿವೀಲ್ ಆಗಿತ್ತು. ನಂತ್ರ ಇಬ್ಬರು ಮದುವೆ ಆಗುತ್ತಿರೋ ಮ್ಯಾಟರ್ ಕೂಡ ಹೊರಬಿದ್ದಿತ್ತು. ಆದರೂ ಈ ಜೋಡಿ ಮಾತ್ರ ನೇರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ […]

Advertisement

Wordpress Social Share Plugin powered by Ultimatelysocial