ಮನೆಯಲ್ಲೇ ತೆಂಗಿನಕಾಯಿ ದೋಸೆ ಮಾಡುವುದು ಹೇಗೆ?

 ಬೇಕಾಗುವ ಸಾಮಾಗ್ರಿಗಳು :

  • ಅಕ್ಕಿ- 2 ಬಟ್ಟಲು
  • ಮೆಂತ್ಯೆ- 1 ಚಮಚ
  • ತೆಂಗಿನ ಕಾಯಿ ತುರಿ- 1 ಬಟ್ಟಲು
  • ಅವಲಕ್ಕಿ- 1 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಾಗೂ ಮೆಂತ್ಯೆಯನ್ನು ಹಾಕಿ 4 ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಡಿಹಿಟ್ಟು ರುಬ್ಬಿಕೊಳ್ಳಲು ಸ್ವಲ್ಪ ಸಮಯವಿರುವಾಗಲೇ ಅವಲಕ್ಕಿಯನ್ನು ನೆನೆಸಿಟ್ಟುಕೊಳ್ಳಿ.

ಮಿಕ್ಸಿ ಜಾರ್’ಗೆ ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅವಲಕ್ಕಿ ಹಾಗೂ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 8 ಗಂಟೆಗಳ ಕಾಲ ಮುಚ್ಚಿ ಫರ್ಮೆಂಟ್ ಆಗಲು ಇಡಿ. 8 ಗಂಟೆಗಳ ಫರ್ಮೆಂಟೇಶನ್ ನ ನಂತರ, ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಬಿಸಿ ತವಾ ಮೇಲೆ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಹಾಗೂ ಮೃದುವಾದ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಮಾಡಬಾರದು: ಹೈಕೋರ್ಟ್

Fri Jan 14 , 2022
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರು ಕೂಡ ಕಾಂಗ್ರೆಸ್  ನಾಯಕರು ಕೊರೊನಾ ನಿಮಯಗಳನ್ನು ಗಾಳಿಗೆ ತೂರಿ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದರು. ಈ ನಡುವೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವರಿಗೆ  ಕೊರೊನಾ ಪಾಸಿಟಿವ್​ ಬಂದಿತ್ತು. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸುವಂತೆ ಹೈಕೋರ್ಟ್​ ತಿಳಿಸಿದೆ. ಸದ್ಯ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದು, […]

Advertisement

Wordpress Social Share Plugin powered by Ultimatelysocial