ಕೊರೊನ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಮಾಡಬಾರದು: ಹೈಕೋರ್ಟ್

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರು ಕೂಡ ಕಾಂಗ್ರೆಸ್  ನಾಯಕರು ಕೊರೊನಾ ನಿಮಯಗಳನ್ನು ಗಾಳಿಗೆ ತೂರಿ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದರು. ಈ ನಡುವೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವರಿಗೆ  ಕೊರೊನಾ ಪಾಸಿಟಿವ್​ ಬಂದಿತ್ತು. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸುವಂತೆ ಹೈಕೋರ್ಟ್​ ತಿಳಿಸಿದೆ. ಸದ್ಯ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದು, ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದಾರೆ.

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಮಾಹಿತಿ ನೀಡಿದ್ದಾರೆ. ಜತೆಗೆ ಬೇರೆ ಪಕ್ಷಗಳ ಕಾರ್ಯಕ್ರಮ ಗಳು ನಡೆಯುತ್ತಿದೆ ಆದರೆ  ಸರ್ಕಾರದ ತಾರತಮ್ಯ ಧೋರಣೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಧರಣಿಗೆ ಅವಕಾಶ ನೀಡಬಾರದು. ಕೊವಿಡ್ ಅವಧಿಯ ಎಸ್ಒಪಿ ಉಲ್ಲಂಘನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿರುವುದ್ದಲ್ಲದೆ ಪಿಐಎಲ್ ಇತ್ಯರ್ಥ ಪಡಿಸಿದೆ.  ಸಮಾರಂಭ ತಡೆಗೆ ಸರ್ಕಾರದ ಕ್ರಮಗಳೇನು? ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಅನ್ವಯವಾಗಬೇಕಲ್ಲವೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆಯನ್ನು ಸಹ ಮಾಡಿದೆ.

ಇದಾದ ಬಳಿಕ ಮಾತನಾಡಿದ ಹೈಕೋರ್ಟ್​ ಸಿಜೆ (ಹಿರಿಯ ನ್ಯಾಯಮೂರ್ತಿ) ರಿತುರಾಜ್ ಅವಸ್ತಿ,  ಎಲ್ಲಾ ರಾಜಕೀಯ ಪಕ್ಷಗಳಿಗೂ ಎಸ್​ಒಪಿ ಅನ್ವಯವಾಗುತ್ತದೆ.‌ ಯಾವ ರಾಜಕೀಯ ಪಕ್ಷಗಳೂ ನಿಯಮ‌ ಮೀರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಗರಂ ಮಸಾಲಾ ಪುಡಿ ಮನೆಯಲ್ಲೇ ಮಾಡುವ ವಿಧಾನ!!!!

Fri Jan 14 , 2022
    ಬೇಕಾಗುವ ಪದಾರ್ಥಗಳು : ದನಿಯಾ- ಮುಕ್ಕಾಲು ಬಟ್ಟಲು ಜೀರಿಗೆ- ಅರ್ಧ ಬಟ್ಟಲು ಕಪ್ಪು ಜೀರಿಗೆ- 1 ಚಮಚ ಕಾಳುಮೆಣಸು-2 ಚಮಚ ಒಣಗಿದ ಮೆಣಸಿನ ಕಾಯಿ-3 ಸ್ಟಾರ್ ಸೋಂಪು-5 ಚಕ್ಕೆ – ಸ್ವಲ್ಪ ಜಾಯಿ ಪತ್ರೆ- 2 ಕಪ್ಪು ಏಲಕ್ಕಿ- 3 ಜಾಯಿಕಾಯಿ – 2 ಏಲಕ್ಕಿ- 3 ಚಮಚ ಲವಂಗ- 1 ಚಮಚ ಜೀರಿಗೆ- 1 ಚಮಚ ಪಲಾವ್ ಎಲೆ- 5-6 ಶುಂಠಿ ಪುಡಿ- 1 ಚಮಚ […]

Advertisement

Wordpress Social Share Plugin powered by Ultimatelysocial