ಖರ್ಗೆ ಕುರಿತ ಮೋದಿ ಹೇಳಿಕೆ ಕೀಳು ಮಟ್ಟದ ಪ್ರಚಾರ; ಎಂಬಿ ಪಾಟೀಲ್ ಕಿಡಿ!

ವಿಧಾನಸಭಾ ಚುನಾವಣೆಗೆ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಎಂಬುದೇ ನಮ್ಮ ಮುಖ್ಯ ಘೋಷಣೆಯಾಗಿದೆ. ಈ ಐದು ಅಂಶಗಳೊಂದಿಗೆ ಪ್ರಚಾರ ಆರಂಭಿಸುತ್ತೇವೆ ಎಂದು ಎಂಬಿ ಪಾಟೀಲ್ ತಿಳಿಸಿದರು.ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ತೀಸ್​ಗಢ ಅಧಿವೇಶನದಲ್ಲಿ ಕೊಡೆ ಹಿಡಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿರುವುದು ಕೀಳು ಮಟ್ಟದ ಪ್ರಚಾರದ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಟೀಕಿಸಿದರು.

ಬಿಜೆಪಿ ಹಿರಿಯ ನಾಯಕ ಎಲ್​​ಕೆ ಅಡ್ವಾಣಿ ಅವರು ಕೈ ಮುಗಿದು ನಿಂತಾಗ, ಅವರ ಎದುರಿಗೇ ಹಾದುಹೋದ ಮೋದಿ ಕೈ ಮುಗಿದಿರಲಿಲ್ಲ. ಅಡ್ವಾಣಿ ಅವರಿಗೆ ಅಪಮಾನ ಮಾಡಿದ್ದರು. ಇನ್ನು ಅದೇ ಪರಿಸ್ಥಿತಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬರಲಿದೆ ಎಂದು ಪಾಟೀಲ್ ಹೇಳಿದರು.

‘ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಕಾಂಗ್ರೆಸ್ ಘೋಷಣೆ’

ವಿಧಾನಸಭಾ ಚುನಾವಣೆಗೆ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಎಂಬುದೇ ನಮ್ಮ ಮುಖ್ಯ ಘೋಷಣೆಯಾಗಿದೆ. ಈ ಐದು ಅಂಶಗಳೊಂದಿಗೆ ಪ್ರಚಾರ ಆರಂಭಿಸುತ್ತೇವೆ ಎಂದು ಎಂಬಿ ಪಾಟೀಲ್ ತಿಳಿಸಿದರು. ಉಚಿತ ಘೋಷಣೆಗಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಬಿಜೆಪಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಆದರೆ, ನಾವು ರಾಜ್ಯದ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಸ್ಟಾರ್ ಪ್ರಚಾರಕರ ಕೊರತೆ ಇಲ್ಲ ಎಂದು ಅವರು ಹೇಳಿದರು.​
ಸಿದ್ದರಾಮಯ್ಯ, ಡಿಕೆಶಿ, ‌ಪ್ರಿಯಾಂಕಾ, ರಾಹುಲ್ ಸ್ಟಾರ್‌ ಪ್ರಚಾರಕರೇ. ರಾಜ್ಯ ಬಿಜೆಪಿ ನಾಯಕರಿಗೆ ಅವರು ಸೋಲುತ್ತಾರೆ ಎಂಬುದು ಚೆನ್ನಾಗಿ ಗೊತ್ತಾಗಿದೆ. ಅದೇ ಕಾರಣಕ್ಕೆ ಪದೇಪದೆ ರಾಜ್ಯಕ್ಕೆ ಮೋದಿ, ಅಮಿತ್ ಶಾ ಬರ್ತಿದ್ದಾರೆ. ರಾಜ್ಯದಲ್ಲಿ ನರೇಂದ್ರ ಮೋದಿ ಮ್ಯಾಜಿಕ್ ನಡೆಯಲ್ಲ ಎಂದು ಅವರು ಹೇಳಿದರು.

‘ಮೋದಿ ನಾಟಕ ಎಲ್ಲರಿಗೂ ಅರ್ಥವಾಗಿದೆ’​

ಕಾಂಗ್ರೆಸ್​ ನಾಯಕ, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್​ಗೆ ಕಾಂಗ್ರೆಸ್ ಪಕ್ಷ​ ಅಪಮಾನ ಮಾಡಿತ್ತು ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಎಂಬಿ ಪಾಟೀಲ್, ವೀರೇಂದ್ರ ಪಾಟೀಲ್​​​​ಗೆ ಅನಾರೋಗ್ಯ ಆಗಿತ್ತು. ಆದರೆ ಬಿಎಸ್​ ಯಡಿಯೂರಪ್ಪ ಅವರಿಗೆ ಏನಾಗಿತ್ತು ಎಂದು ಪ್ರಶ್ನಿಸಿದರು. ಸಿಎಂ ಸ್ಥಾನದಿಂದ ಬಿಎಸ್​ವೈಯನ್ನು ಯಾಕೆ ಇಳಿಸಿದರು? ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಇನ್ನೊಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದರು. ತಿರುಗುಬಾಣ ಆಗುತ್ತದೆ ಎಂದು ಲಿಂಗಾಯತರನ್ನು ಸಿಎಂ ಮಾಡಿದರು. ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದರು. ಅಂಥವರು ಈ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎನ್ನುತ್ತಾರೆ. ಲಿಂಗಾಯತರ ಮನವೊಲಿಸಲು ಮೋದಿ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ನಾಟಕ ಎಲ್ಲರಿಗೂ ಅರ್ಥ ಆಗಿದೆ ಎಂದು ಎಂಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಶ್ಚಿತ ಠೇವಣಿಗೆ' ಭರ್ಜರಿ ಬಡ್ಡಿ; ಶೇ. 8 ದಾಟಿದ ಎಫ್ ಡಿ ಬಡ್ಡಿ ದರ

Wed Mar 1 , 2023
  ಮುಂಬಯಿ: ಉಳಿತಾಯಕ್ಕೆ ಇದೇ ಸುಸಮಯ…! ಹಣದುಬ್ಬರ ಪ್ರಭಾವದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರ ಹೆಚ್ಚಳ ಮಾಡಿದ್ದು, ಬ್ಯಾಂಕ್‌ಗಳಿಗೆ ಅನಿವಾರ್ಯವಾಗಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳಕ್ಕೂ ಅನುವು ಮಾಡಿಕೊಟ್ಟಿದೆ. ಹೀಗಾಗಿ, ರಾಷ್ಟ್ರೀಯ ಬ್ಯಾಂಕುಗಳು ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕುಗಳು ನಿಶ್ಚಿತ ಠೇವಣಿ ಬಡ್ಡಿದರವನ್ನು ಸುಮಾರು ಶೇ.8ರ ಆಸುಪಾಸಿಗೆ ತೆಗೆದುಕೊಂಡು ಹೋಗಿವೆ. ವಿಶೇಷವೆಂದರೆ, ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ […]

Advertisement

Wordpress Social Share Plugin powered by Ultimatelysocial