ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜೂನೇಜ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜೂನೇಜ(Sandalwood actor Mohan Juneja) ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಇತ್ತೀಚೆಗೆ ತೆರೆಕಂಡು ಭಾರೀ ಯಶಸ್ಸು ಗಳಿಸಿದ ಕೆಜಿಎಫ್-1 ಒಂದು ಮತ್ತು ಕೆಜಿಎಫ್-2, ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವದಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಹಲವು ಧಾರವಾಹಿಗಳಲ್ಲಿ ಕೂಡ ನಟಿಸಿ ಹೆಸರು ಗಳಿಸಿದ್ದ ನಟ ಮೋಹನ್ ಜೂನೇಜ ಹಲವು ಪ್ರಮುಖ ನಾಯಕ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಇವರು ಬೆಂಗಳೂರಿನ ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲ ಸಮಯಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮೋಹನ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗು ಆಕಾಶದಲ್ಲಿ ಹುಟ್ಟಿದ್ರೆ ಯಾವ ದೇಶದ ಪೌರತ್ವ ಸಿಗುತ್ತೆ ಗೊತ್ತಾ..?

Sat May 7 , 2022
  ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಕ್ಕೆ ಹೆಚ್ಚು ಆದ್ಯತೆಯನ್ನು ನೀಡಲಾಗ್ತಿದೆ. ಬಹುಬೇಗ ಗಮ್ಯಸ್ಥಾನ ತಲುಪಬಹುದು ಎಂಬ ಕಾರಣಕ್ಕೆ ಬಸ್,ರೈಲಿ ಗಿಂತ ಸ್ವಲ್ಪ ಖರ್ಚು ಹೆಚ್ಚಿದ್ದರೂ ವಿಮಾನ ಪ್ರಯಾಣ ಬೆಳೆಸುತ್ತಿದ್ದಾರೆ. ವಿಮಾನದಲ್ಲಿ ಮಗು ಜನಿಸಿದ ಕೆಲ ಪ್ರಕರಣಗಳೂ ವರದಿಯಾಗಿವೆ. ಮಗು ಜನಿಸಿದ ದೇಶದ ಪೌರತ್ವ ಮಗುವಿಗೆ ನೀಡಲಾಗುತ್ತದೆ. ಮಗು ಭಾರತದಲ್ಲಿ ಜನಿಸಿದರೆ ಭಾರತದ ಪೌರತ್ವ ಸಿಗುತ್ತದೆ. ವಿದೇಶದಲ್ಲಿ ಜನಿಸಿದರೆ ವಿದೇಶ ದ ಪೌರತ್ವ ಪಡೆಯಬಹುದು. ಹಾಗಿರುವಾಗ, ಅಂತರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ […]

Advertisement

Wordpress Social Share Plugin powered by Ultimatelysocial