ಮುಖದ ‘ಸೌಂದರ್ಯಾ ʼ ಹೆಚ್ಚಿಸುತ್ತೆ ಅಕ್ಕಿಹಿಟ್ಟು

ಮುಖದ ಸೌಂದರ್ಯವನ್ನು ಹೆಚ್ಚಿಸಲು, ಕಾಂತಿಯುತ ಮುಖಕ್ಕಾಗಿ ಹಲವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಫೇಷಿಯಲ್, ಫೇಸ್ ಪ್ಯಾಕ್ ಹೀಗೆ ವಿವಿಧ ವಿಧಾನಗಳ ಮೊರೆ ಹೋಗುತ್ತಾರೆ.ಆದರೂ ಮುಖದಲ್ಲಿನ ಎಣ್ಣೆಯ ಅಂಶ, ಕಪ್ಪು ಕಲೆ ಮೊದಲಾದ ಕಾರಣಕ್ಕೆ ಯಾವುದೇ ಪ್ರಯತ್ನಗಳೂ ಪರಿಣಾಮಕಾರಿಯಾಗಿ ಇರಲ್ಲ.ಆದರೆ ಮುಖದಲ್ಲಿನ ಕಾಂತಿ ಹೆಚ್ಚಳಕ್ಕೆ ಸುಲಭ ವಿಧಾನ ಹೊರಗೆಲ್ಲೂ ಇಲ್ಲ. ನಮ್ಮ ಮನೆಯಲ್ಲಿಯೇ ಇದೆ.ಹೌದು. ಮುಖ ಆಕರ್ಷಣೀಯವಾಗಿ ಕಾಣಲು, ಎಣ್ಣೆ ಅಂಶ ಕಡಿಮೆ ಮಾಡಲು ಬ್ಯೂಟಿಷಿಯನ್ ಗಳ ಮೊರೆ ಹೋಗಬೇಕಿಲ್ಲ. ನಮ್ಮ ಅಡುಗೆ ಮನೆಯಲ್ಲಿಯೇ ಇದಕ್ಕೆ ಪರಿಹಾರವಿದೆ. ಅಕ್ಕಿ ಹಿಟ್ಟಿನಿಂದ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.ಒಂದು ಚಮಚ ಅಕ್ಕಿಹಿಟ್ಟಿನಲ್ಲಿ ಸ್ವಲ್ಪ ಹಾಲು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಒಣಗುವ ವರೆಗೆ ಬಿಡಿ. ಬಳಿಕ ನಿಧಾನವಾಗಿ ತಣ್ಣೀರಿನಲ್ಲಿ ಮುಖ ತೊಳೆಯಿರಿ.ನಾಲ್ಕು ಚಮಚ ಅಕ್ಕಿ ಹಿಟ್ಟಿಗೆ ಚಿಟಿಕೆ ಅರಿಷಿಣ, ಮೂರು ಹನಿ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.ಈ ರೀತಿ ಅಕ್ಕಿ ಹಿಟ್ಟಿನ ವಿಧಾನದಿಂದಾಗಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟಿನಲ್ಲಿ ವಿಟಮಿನ್ ಡಿ ಇದ್ದು, ಅದು ಮುಖದಲ್ಲಿ ಹೊಸ ಕೋಶಗಳ ಉತ್ಪತ್ತಿ ಮಾಡುತ್ತದೆ ಮಾತ್ರವಲ್ಲ. ಮುಖ ಸುಕ್ಕಾಗುವುದನ್ನು ತಡೆಯುತ್ತದೆ. ಅಲ್ಲದೇ ಮುಖದಲ್ಲಿನ ಅಧಿಕ ಎಣ್ಣೆ ಅಂಶವನ್ನು ನಿವಾರಿಸಿ, ಕಾಂತಿಯುತ ತ್ವಚೆಯನ್ನಾಗಿ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹೊಸದಿಲ್ಲಿ: ನಿವೃ ತ್ತ ಸೇನಾಧಿಕಾರಿಗೆ ಟ್ವಿಟರ್‌ ಭಾವುಕ ನಮನ!

Tue Feb 1 , 2022
ಹೊಸದಿಲ್ಲಿ: ತಮ್ಮ ಕಡೆಯ ಸೇವಾದಿನದಂದು ಕಟ್ಟಕಡೆಯ ಬಾರಿ ಸೇನಾ ಸಮವಸ್ತ್ರ ಧರಿಸಿದ್ದ ಸೇನಾಧಿಕಾರಿ ಯೊಬ್ಬರ ಬಗ್ಗೆ ಟ್ವಿಟರ್‌ನಲ್ಲಿ ದೊಡ್ಡಮಟ್ಟದ ಅನುಕಂಪ ವ್ಯಕ್ತವಾಗಿದೆ.ರಕ್ಷಣ ಇಲಾಖೆಯ ಗುಪ್ತಚರ ಇಲಾಖೆಯ ಮಹಾ ನಿರ್ದೇಶಕರು ಹಾಗೂ ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್ (ಗುಪ್ತಚರ) ವಿಭಾಗದ ಉಪ ಮುಖ್ಯಸ್ಥ ಲೆ| ಜನರಲ್‌ ಕೆಜೆಎಸ್‌ ಧಿಲ್ಲೋನ್‌ ಅವರು ಜ.31ರಂದು ನಿವೃತ್ತರಾಗಿದ್ದಾರೆ.ತಮ್ಮ ಕಡೆಯ ಸೇವಾದಿನ ದಂದು ಅವರು ತಮ್ಮ ಸೇನಾ ಸಮವಸ್ತ್ರ ಧರಿಸಿ ತಮ್ಮ ನಿವೃತ್ತಿಯ ವಿವರಗಳನ್ನು ಫೋಟೋ ಸಹಿತ ಹಂಚಿಕೊಂಡಿದ್ದರು. […]

Advertisement

Wordpress Social Share Plugin powered by Ultimatelysocial