ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ.

ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಪ್ರತಿ ಸಂದರ್ಭದಲ್ಲೂ ಕಿಡಿಗೇಡಿತನ ಮಾಡಲು ಕೋತಿಗಳು ಒಂದಲ್ಲಾ ಒಂದು ಮಾರ್ಗ ಕಂಡುಕೊಳ್ಳುತ್ತವೆ. ಬೇರೆ ಪ್ರಾಣಿಗೆ ತೊಂದರೆ ಕೊಡುವುದು, ಯಾರಿಗಾದರೂ ಕಪಾಳಮೋಕ್ಷ ಮಾಡುವುದು, ಕೋತಿಗಳು ಇಂತಹ ಚೇಷ್ಟೆಯ ಕೆಲಸಗಳನ್ನು ಮಾಡುತ್ತವೆ.

ಕೋತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕೋತಿ ಪಾತ್ರ ತೊಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಬಂದು ಕೋತಿ ಮತ್ತಷ್ಟು ಪಾತ್ರೆಗಳನ್ನು ತೊಳೆಯಲು ನೀಡುತ್ತಾಳೆ. ಮಂಗ ಕೂಡ ಸುಮ್ಮನೆ ಈ ಕೆಲಸ ಮಾಡುತ್ತಿದೆ.

ವೈರಲ್ ಆದ ವಿಡಿಯೋ ನೋಡಿದರೆ ಕೋತಿಯನ್ನು ಇವರು ಸಾಕಿದಂತಿದೆ. ಕೋತಿ ಮಾಡಿದ ಯಾವುದೋ ತಪ್ಪಿಗೆ ಅದು ಶಿಕ್ಷೆಗೆ ಗುರಿಯಾಗಿದೆ ಎಂದು ತಿಳಿದುಬಂದಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಕೋತಿಗೆ ಪಾತ್ರ ತೊಳೆಯುವ ಶಿಕ್ಷೆ ನೀಡಲಾಗಿದೆ. ಮಂಗ ಕೂಡ ಮೌನವಾಗಿ ಪಾತ್ರೆಗಳನ್ನು ಒಂದರ ನಂತರ ಒಂದರಂತೆ ತೊಳೆಯಲು ಪ್ರಾರಂಭಿಸುತ್ತದೆ. ಈ ವಿಡಿಯೋದಲ್ಲಿ, ಕೋತಿಗೆ ತೊಳೆಯಲು ಅನೇಕ ಪಾತ್ರೆಗಳಿದ್ದು, ಒಂದರ ನಂತರ ಒಂದನ್ನು ಅದು ತೊಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯಾ?;

Fri Feb 10 , 2023
ತೀವ್ರವಾದ ಮತ್ತು ದೀರ್ಘಕಾಲದ ಪರೋನಿಕಿಯಾ ಹೆಚ್ಚಾಗಿ ಮಧುಮೇಹ ಹೊಂದಿರುವ ಜನರ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನೇಲ್ ಕಟರ್ ಅನ್ನು ಬೇರೆಯವರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ನೇಲ್ ಕಟ್ ನಂತರ ಅದನ್ನು ತೊಳೆಯಲು ಮರೆಯಬೇಡಿ.ನವದೆಹಲಿ: ನಿಮಗೆ ಪದೇಪದೆ ಉಗುರು (ಕಚ್ಚುವ ಅಭ್ಯಾಸವಿದೆಯಾ? ನಿಮಗೆ ಅದು ಬಹಳ ಸಾಮಾನ್ಯ ವಿಷಯವಾಗಿರಬಹುದು. ಆದರೆ, ಅದರ ಹಿಂದೆ ದೊಡ್ಡ ಸಮಸ್ಯೆಯೇ ಅಡಗಿದೆ ಎಂಬುದು ನೀವು ತಿಳಿದುಕೊಳ್ಳಲೇಬೇಕಾದ ಸಂಗತಿ. ಆಗಾಗ ಉಗುರುಕಚ್ಚುವುದು ಅನೈರ್ಮಲ್ಯ ಮತ್ತು ಸೋಂಕುಗಳಿಗೆ ಕಾರಣವಾಗಬಹುದು. […]

Advertisement

Wordpress Social Share Plugin powered by Ultimatelysocial