ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಶುಕ್ರವಾರ (ಡಿಸೆಂಬರ್ 30) ನಸುಕಿನ ವೇಳೆ ಅಹಮದಾಬಾದ್ ಮೆಹ್ತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.ಹೀರಾಬೆನ್ ಮೋದಿ ಅವರ ನಿಧನಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಾಲ್ ದಹಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೀತಿಯ ತಾಯಿಯ ನಿಧನಕ್ಕೆ ಹೃದಯಾಂತರಾಳದ ಸಂತಾಪ ಸಲ್ಲಿಸುವುದಾಗಿ ತಿಳಿಸಿದ್ದಾರೆ.ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಪ್ರಧಾನಿ ಮೋದಿ ಅವರ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನ್ ಪ್ರಧಾನಿ ಶೆಹಬಾಝ್ ಷರೀಫ್ ಸಂತಾಪ ವ್ಯಕ್ತಪಡಿಸಿದ್ದು, ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ ಎಂದು ತಿಳಿಸಿದ್ದಾರೆ.ಇಂದು ಮುಂಜಾನೆಯೇ ಗುಜರಾತ್ ನ ಗಾಂಧಿನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್ ಮೋದಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು, ಬಳಿಕ ಕರ್ತವ್ಯಕ್ಕೆ ತೆರಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಕ್‌ ಏರಿಸಿಕೊಂಡು ಕಿರಿಕ್‌ ಮಾಡಿದವನಿಗೆ ಚಪ್ಪಲಿ ಸೇವೆ

Fri Dec 30 , 2022
  ಮದ್ಯವ್ಯಸನಿಯೊಬ್ಬ ನಡುರಸ್ತೆಯಲ್ಲಿ ಕಿರಿಕ್‌ ಮಾಡಿದ್ದಕ್ಕೆ ಮಹಿಳೆಯರೆಲ್ಲ ಸೇರಿ (Vulgar Behavior) ಧರ್ಮದೇಟು ನೀಡಿದ್ದಾರೆ. ಮಹಿಳೆಯರ‌ ಜತೆ ಅಸಭ್ಯ‌ ವರ್ತನೆ ಮಾಡಿದವನಿಗೆ ಚಪ್ಪಲಿ ಏಟು ನೀಡಿರುವ ಘಟನೆ ನಗರದ ಸುಭಾಸ್‌ ರಸ್ತೆಯಲ್ಲಿ ನಡೆದಿದೆ.ರಸ್ತೆ ಬದಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯರಿಗೆ ಹಾಗೂ ರಸ್ತೆ ಮೇಲೆ‌ ಓಡಾಡುವವರ ಬಳಿ ಕುಡುಕನೊಬ್ಬ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಮೊದಮೊದಲು ಸುಮ್ಮನಿದ್ದ ಮಹಿಳೆಯರಿಗೆ ಈತನ ವರ್ತನೆ ಅತಿರೇಕ ಅನ್ನಿಸಿದಾಗ ಸಿಟ್ಟಿಗೆದ್ದಿದ್ದಾರೆ. ಆಗ ಹಣ್ಣು ಮಾರಾಟ ಮಾಡುವ […]

Advertisement

Wordpress Social Share Plugin powered by Ultimatelysocial