ಹೊಸ ತೊಡಕಿಗೆ ಸ್ಪೆಷಲ್ ರೆಸಿಪಿ!

ಹತ್ತು ಹಲವು ಪದಾರ್ಥಗಳನ್ನು ನೀವು ಸೇವಿಸಿರಬಹುದು.
ಆದರೆ ನಾವು ಇಂದು ಹೇಳಲು ಹೊರಟಿರುವ ಮಟನ್ ಡ್ರೈ ರೋಸ್ಟ್ ನಿಮ್ಮ ಮನೆ ಮಂದಿಗೆ ಎಲ್ಲರಿಗೂ ಇಷ್ಟವಾಗುತ್ತದೆ. ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ.

ಹಾಗಿದ್ದರೆ ಇನ್ಯಾಕೆ ತಡ ಬನ್ನಿ ಮನೆಯಲ್ಲಿ ಸರಳವಾಗಿ ಮಟನ್ ಡ್ರೈ ರೋಸ್ಟ್ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ..

ಬೇಕಾಗುವ ಸಾಮಗ್ರಿಗಳು

* ಮಟನ್- 1 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಚಮಚ
* ಮೆಣಸಿನ ಪೌಡರ್-1 ಚಮಚ
* ಅರಿಶಿಣ -1 ಚಮಚ
* ತೆಂಗಿನೆಣ್ಣೆ- ಅರ್ಧ ಕಪ್
* ಕರಿಬೇವು ಸೊಪ್ಪು- ಸ್ವಲ್ಪ
* ತೆಂಗಿನಕಾಯಿ -ಸ್ವಲ್ಪ
* ಹಸಿಮೆಣಸಿನ ಕಾಯಿ-2
* ಈರುಳ್ಳಿ -1
* ದನಿಯಾ ಪೌಡರ್-1 ಚಮಚ
* ಸೋಂಪು- 1 ಚಮಚ
* ಗರಂ ಮಸಾಲ-1 ಚಮಚ
* ಕಾಳುಮೆಣಸಿನ ಪೌಡರ್-1 ಚಮಚ

ಮಾಡುವ ವಿಧಾನ

* ಕುಕ್ಕರ್ಗೆ ಮಟನ್ ಹಾಕಿ ತೆಂಗಿನ ಎಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಪೌಡರ್, ಅರಿಸಿಣ ಬೇಕಾದಷ್ಟು ನೀರು ಹಾಕಿ ಬೇಯಿಸಿಕೊಳ್ಳಬೇಕು

* ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು ಸೊಪ್ಪು, ತೆಂಗಿನಕಾಯಿ, ಹಸಿಮೆಣಸಿನ ಕಾಯಿ, ಇರುಳ್ಳಿ, ಅರಿಶಿಣ, ಮೆಣಸಿನ ಪೌಡರ್, ದನಿಯಾ, ಸೋಂಪುಕಾಳು ಹುಡಿ ಸೇರಿಸಿ ಫ್ರೈ ಮಾಡಿಕೊಳ್ಳಬೇಕು.

* ನಂತರ ಈ ಪಾತ್ರೆಗೆ ಅದಕ್ಕೆ ಬೇಯಿಸಿದ ಮಟನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗರಂ ಮಸಾಲೆ, ಕಾಳುಮೆಣಸಿನ ಪೌಡರ್ ಸೇರಿಸಿ ಮಟನ್ ಬೇಯಿಸಿದರೆ ರುಚಿಯಾದ ಮಟನ್ ಡ್ರೈ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ..!

Sun Apr 3 , 2022
ಬಿರು ಬೇಸಿಗೆ ಆರಂಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಸೌತೆಕಾಯಿ ವ್ಯಾಪಾರ ಈಗ ಜೋರಾಗಿದೆ. ಬೇಸಿಗೆಯಲ್ಲಿ ಹೆಚ್ಹೆಚ್ಚು ಸೌತೆಕಾಯಿ ಸೇವನೆ ಮಾಡುವುದರಿಂದ ಅನೇಕ ರೋಗಗಳನ್ನು ದೂರವಿಡಬಹುದು. ಮೂಳೆಗಳನ್ನು ಬಲಪಡಿಸುವುದರ ಜೊತೆಗೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಸೌತೆಕಾಯಿ ಸಹಾಯ ಮಾಡುತ್ತದೆ. ಈಗ ಬಹುತೇಕ ಎಲ್ಲರಿಗೂ ಮೂಳೆ ನೋವು, ಕೀಲು ನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ನಿಮಗೂ ಆ ಸಮಸ್ಯೆ ಇದ್ದರೆ ಬೇಸಿಗೆಯಲ್ಲಿ ಸಾಕಷ್ಟು ಸೌತೆಕಾಯಿ ತಿನ್ನಿರಿ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇದಲ್ಲದೆ, ಸೌತೆಕಾಯಿ ಚರ್ಮ ಮತ್ತು ಕೂದಲಿನ […]

Advertisement

Wordpress Social Share Plugin powered by Ultimatelysocial