ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ.

 

 

 

 

ನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಬೇಡಿಕೆ ಇರುವ ನಟಿಯಾಗಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯಳಾಗಿರುವ ರಶ್ಮಿಕಾ ಮಂದಣ್ಣ ತನ್ನೆಲ್ಲಾ ಅಪ್‌ಡೇಟ್‌ಗಳನ್ನು ಅಲ್ಲಿ ತಿಳಿಸುತ್ತಾ ಇರುತ್ತಾರೆ.

ಮೊನ್ನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶುಭಾಶಯವನ್ನು ಕೋರಿ ಫೋಟೊ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ ಬಹಳ ದಿನಗಳ ಬಳಿಕ ಪೋಸ್ಟ್‌ನಲ್ಲಿ ಕನ್ನಡ ಬಳಸಿದ್ದಕ್ಕೆ ಸುದ್ದಿಯಾಗಿದ್ದರು. ಈ ಫೋಸ್ಟ್ ಮಾಡಿದ ಮರುದಿನವೇ ರಶ್ಮಿಕಾ ಮಂದಣ್ಣ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಇತ್ತೀಚೆಗಿನ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡು ‘ಐ ವಾಂಟ್ ಟು ಗೋ ಬ್ಯಾಕ್’ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ನಾನು ಹಿಂದಿರುಗಿ ಹೋಗಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದು, ಸದ್ಯ ಈ ಪೋಸ್ಟ್‌ಗೆ ಭಿನ್ನ ವಿಭಿನ್ನ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ಯಾವ ವಿಷಯದಲ್ಲಿ ಹಿಂದಿರುಗಿ ಹೋಗಬೇಕೆಂದು ಬಯಸುತ್ತಿದ್ದೀರ ಎಂದು ರಶ್ಮಿಕಾಗೆ ಪ್ರಶ್ನೆ ಹಾಕುತ್ತಿದ್ದರೆ, ಕೆಲ ನೆಟ್ಟಿಗರು ವಾಪಸ್ ಕರ್ನಾಟಕಕ್ಕೆ ಬರುವ ಆಸೆಯಾ, ಮತ್ತೆ ಪರಮ್‌ವಃ ಸ್ಟುಡಿಯೊಸ್ ಸೇರುವ ಆಸೆಯಾ ಎಂದು ಕಾಲೆಳೆಯುತ್ತಿದ್ದಾರೆ.

ಹೌದು, ರಶ್ಮಿಕಾ ತಾನು ನೀಡಿದ ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವುದು ನಿಮಗೆ ಗೊತ್ತೇ ಇದೆ. ಹೀಗಾಗಿ ಈಕೆ ಏನೇ ಪೋಸ್ಟ್ ಹಂಚಿಕೊಂಡರೂ ಅದರಿಂದ ಟ್ರೋಲ್ ಆಗುವುದು ಸಹಜ. ಅದೇ ರೀತಿ ಈ ಪೋಸ್ಟ್ ಮೂಲಕವೂ ಸಹ ರಶ್ಮಿಕಾ ಟ್ರೋಲ್‌ಗೆ ಒಳಗಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

KKRDB ಸದರಿ ಅಧಿಕಾರಿಗಳು ಗುತ್ತಿಗೆದಾರ.

Tue Jan 17 , 2023
ಕಲಬುರ್ಗಿಯಲ್ಲಿ KKRDB ಸದರಿ ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಸೇರಿ ದರ ಪಟ್ಟಿಯಲ್ಲಿ ಭಾರಿ ಮೊತ್ತದ ಗೋಲ್ ಮಾಲ್ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಸೈಬಣ್ಣ ಜಮಾದಾರ್ಟೆಂಡರ್‌ನ ಮೇಲ್ಚಾವಣಿ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ಕಲಬುರ್ಗಿ ಅವರಿಗೆ ನೀಡಿದ್ದುಟೆಂಡರ್ ಅನ್ನು ನೀಡುವ ಮುಂಚೆನೆ ಪ್ರೆಸೆಂಟೇಶನ್ ಸರ್ಟಿಫಿಕೇಟ್ ಇದ್ದವರು ಮಾತ್ರ ಈ ಕಾಮಗಾರಿ ಟೆಂಡರ್ ಚಲಿಸಬಹುದು ಎಂದು ಷರತ್ತು ನೀಡಿ ತಮಗೆ […]

Advertisement

Wordpress Social Share Plugin powered by Ultimatelysocial