ನಟ ದುನಿಯಾ ವಿಜಯ್ ಇಂದು ( ಜನವರಿ 20 ) 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

 

ಟ ದುನಿಯಾ ವಿಜಯ್ ಇಂದು ( ಜನವರಿ 20 ) 49ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಜತೆ ತಮ್ಮ ಅಪ್ಪ ಅಮ್ಮನ ಸಮಾಧಿ ಇರುವ ಸ್ಥಳದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ತಮ್ಮ ನಿವಾಸದಲ್ಲಿ ಇಷ್ಟು ವರ್ಷಗಳ ಕಾಲ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ದುನಿಯಾ ವಿಜಯ್ ಈ ಬಾರಿ ಆನೆಕಲ್ ತಾಲೂಕಿನಲ್ಲಿರುವ ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

2004ರಲ್ಲಿ ಬಿಡುಗಡೆಗೊಂಡ ಯೋಗರಾಜ್ ಭಟ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ರಂಗ ಎಸ್‌ಎಸ್‌ಎಲ್‌ಸಿ ಚಿತ್ರದ ಮೂಲಕ ನಟನೆ ಆರಂಭಿಸಿದ ದುನಿಯಾ ವಿಜಯ್ ಹಲವು ಚಿತ್ರಗಳಲ್ಲಿ ಪುಟ್ಟ ಖಳನಟನ ಪಾತ್ರಗಳನ್ನು ನಿರ್ವಹಿಸಿದ ನಂತರ 2007ರಲ್ಲಿ ತೆರೆಕಂಡ ಸೂರಿ ನಿರ್ದೇಶನದ ದುನಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಚಿತ್ರದಲ್ಲೇ ಭರ್ಜರಿ ಜಯ ಸಾಧಿಸಿದ ದುನಿಯಾ ವಿಜಯ್ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಈಗ ತಮ್ಮ ಚಿತ್ರಗಳನ್ನು ತಾವೇ ನಿರ್ದೇಶನ ಮಾಡಿಕೊಳ್ಳಲು ಆರಂಭಿಸಿದ್ದಾರೆ.

ಹೌದು, ಸಲಗ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡ ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರದಲ್ಲಿಯೇ ಗೆಲುವು ಸಾಧಿಸಿದರು. ಹೀಗೆ ಸಲಗ ಯಶಸ್ಸಿನಿಂದ ಭೀಮ ಎಂಬ ಮತ್ತೊಂದು ಚಿತ್ರವನ್ನು ತಮಗೆ ತಾವೇ ನಿರ್ದೇಶನ ಮಾಡಿಕೊಳ್ತಿದ್ದಾರೆ ವಿಜಯ್. ಸದ್ಯ ನಿರ್ದೇಶಕನಾಗಿ ಗೆದ್ದಿರುವ ದುನಿಯಾ ವಿಜಯ್ ಮುಂದಿನ ದಿನಗಳಲ್ಲಿ ಕನ್ನಡದ ಯಾವ ಸ್ಟಾರ್ ನಟನಿಗೆ ಚಿತ್ರವನ್ನು ನಿರ್ದೇಶನ ಮಾಡಬಹುದು ಎಂಬ ಕುತೂಹಲ ಹಾಗೂ ಪ್ರಶ್ನೆ ಹಲವು ಸಿನಿ ರಸಿಕರಲ್ಲಿ ಇತ್ತು. ಇದೇ ಪ್ರಶ್ನೆ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಪಾಲ್ಗೊಂಡ ಪತ್ರಿಕಾಗೋಷ್ಠಿಯಲ್ಲೂ ಸಹ ಕೇಳಿಬಂತು. ದುನಿಯಾ ವಿಜಯ್ ಯಾವ ಸ್ಟಾರ್ ಹೆಸರನ್ನು ಹೇಳಬಹುದು ಎಂಬ ಕುತೂಹಲ ಅಲ್ಲಿ ನೆರೆದಿದ್ದವರಲ್ಲಿ ಇತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದುನಿಯಾ ವಿಜಿ ಬರ್ತ್​ಡೇ! ತೆಲುಗು ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

Fri Jan 20 , 2023
ತೆಲುಗಿನ ವೀರಸಿಂಹ ರೆಡ್ಡಿ ಸಿನಿಮಾ ಸಖತ್ ಟ್ರೆಂಡಿಂಗ್ ಆಗಿದೆ. ಈ ಸಿನಿಮಾ ಕರ್ನಾಟಕದಲ್ಲಿಯೂ ಅದ್ಧೂರಿ ಪ್ರೀ ಬುಕ್ಕಿಂಗ್ ದಾಖಲೆ ಮಾಡಿದೆ. ಈಗಲೂ ಸಕ್ಸಸ್​ಫುಲ್ ಆಗಿ ಓಡುತ್ತಿದೆ. ಕಾರಣ ಏನು ಗೊತ್ತಾ? ಇದರಲ್ಲಿ ನಟ ವಿಜಯ್ ನಟಿಸಿದ್ದಾರೆ. ಸ್ಯಾಂಡಲ್​ವುಡ್ ಕರಿಯ, ದುನಿಯಾ ವಿಜಯ್ ಈ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಭಾರೀ ಕ್ರೇಜ್ ಸೃಷ್ಟಿಸಿದ್ದಾರೆ. ಇನ್ನೊಂದು ರೇಂಜ್​ನಲ್ಲಿ ಮಿಂಚಿದ್ದಾರೆ. ಇಂದು ನಟ ದುನಿಯಾ ವಿಜಯ್​​ಗೆ ಬರ್ತ್​ಡೇ ಸಂಭ್ರಮ. ನಟ 49 ವರ್ಷದ […]

Advertisement

Wordpress Social Share Plugin powered by Ultimatelysocial