ಹೊಸ ವರ್ಷದಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಿವು…!!??

ಸ್ಯಾಂಡಲ್​​ವುಡ್​ ನಲ್ಲಿ 2022 ರಲ್ಲಿ 180 ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಕಟ್ಟಕಡೆಯದಾಗಿ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ. ಜಮಾಲಿಗುಡ್ಡ, ಪದವಿ ಪೂರ್ವ, ಮೇಡ್ ಇನ್ ಬೆಂಗಳೂರು, ಜೋರ್ಡನ್ ಅನ್ನೋ ಸಿನಿಮಾ ತೆರೆಗೆ ಬರ್ತಿವೆ.ಆದರೆ ಮುಂದಿನ ವರ್ಷ 2023 ರಲ್ಲಿ ಕನ್ನಡದ ಯಾವ ಸಿನಿಮಾ ರಿಲೀಸ್ ಆಗುತ್ತಿವೆ. ಅದರಲ್ಲಿ ಬಹು ನಿರೀಕ್ಷಿತ ಸಿನಿಮಾಗಳಾವವು. ಕಿಚ್ಚ ಸುದೀಪ್ ಸಿನಿಮಾ ಅನೌನ್ಸ್ ಆಗುತ್ತದೆಯೇ? ರಾಕಿಂಗ್ ಸ್ಟಾರ್ ಯಶ್ ಚಿತ್ರ ಜನವರಿ-8ಕ್ಕೆ ಅನೌನ್ಸ್ ಆಗುತ್ತಾ? ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ರಿಯಲ್ ಸ್ಟಾರ್ ಉಪ್ಪಿಯ  ಎರಡು ಚಿತ್ರಗಳು ಭಾರೀ ನಿರೀಕ್ಷೆ ಮೂಡಿಸಿವೆ. ಈ ಎಲ್ಲ ಮಾಹಿತಿ ಒಂದು ಸ್ಟೋರಿ ಇಲ್ಲಿದೆ.ರಿಯಲ್ ಸ್ಟಾರ್ ಉಪೇಂದ್ರ 2 ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆ…!!!ಹಾಗೇ ತಯಾರಾದ ಸಿನಿಮಾಗಳ ಲೆಕ್ಕ ಸಾಕಷ್ಟಿರುತ್ತವೆ. ಆದರೆ ರಿಲೀಸ್ ಲೆಕ್ಕವನ್ನಷ್ಟೇ ಹೇಳೋದಾದ್ರೆ, ಇಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬಂದು ಸದ್ದು ಮಾಡುವ ಪ್ರಯತ್ನ ಮಾಡುತ್ತವೆ. ಅವುಗಳಲ್ಲಿ ಕೆಲವು ಮಾತ್ರ ನಿರೀಕ್ಷಿತ ಚಿತ್ರಗಳೇ ಆಗಿರುತ್ತವೆ.2023 ರ ಕನ್ನಡದ ಬಹು ನೀರಿಕ್ಷಿತ ಚಿತ್ರಗಳು ಇಲ್ಲಿವೆ ನೋಡಿ….!!!

ಕನ್ನಡದಲ್ಲಿ ಕಳೆದ ವರ್ಷ ನಿರೀಕ್ಷಿತ ಚಿತ್ರಗಳು ತುಂಬಾನೇ ಇದ್ದವು. ವಿಕ್ರಾಂತ್ ರೋಣ, ಚಾರ್ಲಿ, ಗಂದಧ ಗುಡಿ, ಕೆಜಿಎಫ್-2, ಡೊಳ್ಳು, ವೇದ ಸಿನಿಮಾಗಳಿದ್ದವು. ಇವುಗಳಲ್ಲಿ ಅನಿರೀಕ್ಷಿತ ಹಿಟ್ ಅನಿಸಿರೋದು ಕಾಂತಾರ ಸಿನಿಮಾ ಒಂದೇ ಅಂತಲೇ ಹೇಳಬಹುದು.ಶಿವಣ್ಣನ ಬಹು ನಿರೀಕ್ಷಿತ “ಘೋಸ್ಟ್” ಸಿನಿಮಾ..!!ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ “ಘೋಸ್ಟ್” ಚಿತ್ರ ಕೂಡ ನಿರೀಕ್ಷೆ ಹುಟ್ಟುಹಾಕಿದೆ. ಶ್ರೀನಿ ನಿರ್ದೇಶನದ ಈ ಚಿತ್ರದ ಕಥೆ ಕೂಡ ವಿಭಿನ್ನವಾಗಿಯೇ ಇದೆ.ಇಡೀ ಚಿತ್ರ ಜೈಲ್ ಅಲ್ಲಿಯೇ ಚಿತ್ರೀಕರಣ ಆಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ಈಗಲೇ ನಿರೀಕ್ಷೆ ಹುಟ್ಟುಹಾಕಿದೆ.ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ಬಹು ನಿರೀಕ್ಷಿತ ಚಿತ್ರ..!!ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಇಂಡಸ್ಟ್ರೀಯಲ್ಲಿ ಈ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಈಗಲೇ ಹುಟ್ಟಿಕೊಂಡಿದೆ.ಹೊಂಬಾಳೆ ಪ್ರೋಡಕ್ಷನ್ ಹೌಸ್​ನಿಂದ ಬರ್ತಿರೋ ಈ ಚಿತ್ರವೂ ಚೆನ್ನಾಗಿರುತ್ತದೆ ಅನ್ನೋ ನಂಬಿಕೆ ಮೂಡಿದೆ. ಡಾಕ್ಟರ್ ಸೂರಿ ನಿರ್ದೇಶನ ಈ ಚಿತ್ರದಲ್ಲಿ ಶ್ರೀಮುರಳಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.ಕಿಚ್ಚನ ಚಿತ್ರ ಅನೌನ್ಸ್ ಆಗ್ಬೇಕು-ಯಶ್ ಚಿತ್ರವೂ ಪ್ರಕಟಗೊಳ್ಳಬೇಕು..!!ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕನ್ನಡ ಇನ್ನೂ ಯಾವುದೂ ಸಿನಿಮಾ ಅನೌನ್ಸ್ ಆಗಿಲ್ಲ. ರಾಕಿಂಗ್ ಸ್ಟಾರ್​ ಯಶ್ ಚಿತ್ರ ಕೂಡ ಇನ್ನೂ ಅನೌನ್ಸ್ ಆಗಿಲ್ಲ. ಜನವರಿ-8 ರಂದು ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನ ಇದೆ. ಈ ದಿನವೇ ಚಿತ್ರ ಅನೌನ್ಸ್ ಆಗೋ ಸುದ್ದಿ ಕೂಡ ಇದೆ.ಕಾಂತಾರ ಚಿತ್ರ ಕೊಟ್ಟ ರಿಷಬ್ ಶೆಟ್ರು, 2023 ರಲ್ಲಿಯೇ ಕಾಂತಾರ-2 ಚಿತ್ರ ಕೊಡ್ತಾರೆ ಅನ್ನೋ ನಿರೀಕ್ಷೆನೂ ಇದೆ. ಇನ್ನುಳಿದಂತೆ ಈಗಾಗಲೇ 2022 ರಲ್ಲಿಯೇ ಒಂದಷ್ಟು ಸಿನಿಮಾಗಳು ಹೊಸ ವರ್ಷದಲ್ಲಿ ರಿಲೀಸ್ ಆಗುತ್ತಿವೆ ಅಷ್ಟೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣಾ ಅಖಾಡ ಸಜ್ಜುಗೊಳಿಸುತ್ತಿರುವ ಬಿಜೆಪಿ

Sat Dec 31 , 2022
ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಖಾಡವನ್ನು ನಾಯಕ ಅಮಿತ್‌ ಶಾ ಮಾರ್ಗದರ್ಶನದಲ್ಲಿ ಸಜ್ಜುಗೊಳಿಸುತ್ತಿದೆ. ಸಕಲ ರೀತಿಯಲ್ಲಿ ಕಾರ್ಯಕರ್ತರ ಪಡೆ ಸಿದ್ಧವಾಗುತ್ತಿದೆ. ಚುನಾವಣೆಗೆ ತಳಮಟ್ಟದ ಕಾರ್ಯಕರ್ತರನ್ನು ಗಟ್ಟಿಗೊಳಿಸಲು ಬಿಜೆಪಿ ಪ್ಲಾನ್ ಮಾಡಿದೆ.ಈ ಹಿನ್ನೆಲೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ 2.30 ಕ್ಕೆ ಅರಮನೆ ಮೈದಾನದಲ್ಲಿ ಬಿಜೆಪಿಯ ಮೆಗಾ ಸಂಕಲ್ಪ ಸಮಾವೇಶ ನಡೆಯಲಿದೆ.ಬೂತ್ ಮಟ್ಟದ ನಾಯಕರ ಜೊತೆ ಬಿಜೆಪಿ ವರಿಷ್ಠ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಬೂತ್ ವಿಜಯ ಕಾರ್ಯಕ್ರಮದಲ್ಲಿ […]

Advertisement

Wordpress Social Share Plugin powered by Ultimatelysocial