ಕೇಂದ್ರ ಸರ್ಕಾರ ಜನಸಾಮಾನ್ಯರಿಗೆಂದೇ ಹಲವಾರು ಯೋಜನೆಗಳನ್ನ ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆಂದೇ ಹಲವಾರು ಯೋಜನೆಗಳನ್ನ ಜಾರಿ ಮಾಡಿದೆ. ಅದರಲ್ಲಿ ಎಷ್ಟೋ ಯೋಜನೆಗಳು, ಅದರ ಉಪಯೋಗಗಳು ಜನರಿಗೆ ಗೊತ್ತೇ ಇರುವುದಿಲ್ಲ. ಇತ್ತೀಚೆಗೆ ಆಯುಷ್ಮಾನ್‌ ಯೋಜನೆಯ ಲಾಭ ಪಡೆದು ಸುನಿತಾ ಅನ್ನುವವರು, ಕಳೆದುಕೊಂಡಿರುವ ಶ್ರವಣಶಕ್ತಿಯನ್ನ ಮತ್ತೆ ಮರಳಿ ಪಡೆದಿದ್ದಾರೆ.

ಮಧ್ಯಪ್ರದೇಶದ ಖರಗೋನ್‌ ಜಿಲ್ಲೆಯ ಬಳಿ ಇರುವ, ಝಿರನಯಾ ಜನಪದ ಪಂಚಾಯತ್‌ ಅಡಿಯಲ್ಲಿ ಇರುವ ಪುಟ್ಟ ಕ್ಷೇತ್ರ ಟೊಪಲಿ ನಂದಿಯಾ. ಅಲ್ಲಿ ವಾಸಿಸುವ ಸುನೀತಾ ಕಳೆದ ಏಳು ವರ್ಷಗಳ ಹಿಂದೆಯೇ, ಕೇಳುವ ಶಕ್ತಿಯನ್ನ ಕಳೆದುಕೊಂಡಿದ್ದರು. ಆದರೆ ಈಗ ಅವರು 1.5 ಲಕ್ಷ ವೆಚ್ವದ ಕಿವಿಯ ಶಸ್ತ್ರಚಿಕಿತ್ಸೆಯನ್ನ ಉಚಿತವಾಗಿ ಮಾಡಿಸಿಕೊಂಡು, ಸ್ಪಷ್ಟವಾಗಿ ಕಿವಿ ಕೇಳಿಸುವ ಸಾಮರ್ಥ್ಯವನ್ನ ಹೊಂದಿದ್ದಾರೆ.

ಆಶಾ ಕಾರ್ಯಕರ್ತೆ ಪಿಂಕಿ ಮೂರ, ಸುಮಾರು ಎರಡು ವರ್ಷಗಳ ಹಿಂದೆ ಚುಚ್ಚುಮದ್ದಿನ ಅಭಿಯಾನವೊಂದಕ್ಕಾಗಿ ಸುನೀತಾ ಇದ್ದ ಕ್ಷೇತ್ರಕ್ಕೆ ಹೋಗಿದ್ದರು. ಅಲ್ಲಿ ಸುನೀತಾ ಅವರಿಗೆ, ಕಿವುಡುತನದ ಸಮಸ್ಯೆ ಇದೆ ಅಂತ ಗೊತ್ತಾದ ತಕ್ಷಣ ಪಿಂಕಿಯವರು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸುನೀತಾ ಅವರನ್ನ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ್ದಾರೆ.

ಸುನೀತಾ ಅವರನ್ನ ಪರೀಕ್ಷೆ ಮಾಡಿದ ವೈದ್ಯರು. ಇದು ಚಿಕಿತ್ಸೆಯಿಂದ ಸರಿ ಹೋಗುವುದಿಲ್ಲ, ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಆದರೆ ಶಸ್ತ್ರ ಚಿಕಿತ್ಸೆಯ ವೆಚ್ಚ 1.5 ಲಕ್ಷ ರೂಪಾಯಿ ಆದ್ದರಿಂದ, ಸುನೀತಾ ಅವರು ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕಿದ್ದರು.

ಆದರೆ ಪಿಂಕಿಯವರು, ಭಾರತ ಸರ್ಕಾರವೇ ಈ ರೀತಿಯ ಶಸ್ತ್ರಚಿಕಿತ್ಸೆಯ ವೆಚ್ಚವನ್ನ ಭರಿಸಲಿದೆ. ಆಯುಷ್ಮಾನ್ ಭಾರತ್‌ ಕಾರ್ಡ್‌ ಇದ್ದರೆ ಅದರ ಉಪಯೋಗ ಪಡೆಯಬಹುದು ಎಂದು ಹೇಳಿದ್ದಾರೆ. ತಕ್ಷಣವೇ ಸುನೀತಾ ಅವರ ಕುಟುಂಬದವರು ಸುನೀತಾ ಅವರನ್ನ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಿಕೊಂಡಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸುನೀತಾ ಅವರು ಮತ್ತೆ ಶ್ರವಣಶಕ್ತಿಯನ್ನ ಪಡೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳ್ಳಾವೆ ವೆಂಕಟನಾರಣಪ್ಪನವರು ಕನ್ನಡದ ಮಹಾನ್ ವಿದ್ವಾಂಸರು.

Sat Feb 11 , 2023
ಬೆಳ್ಳಾವೆ ವೆಂಕಟನಾರಣಪ್ಪನವರು ಕನ್ನಡದ ಮಹಾನ್ ವಿದ್ವಾಂಸರು, ಸಾಹಿತಿ, ಅದರಲ್ಲೂ ಕನ್ನಡದ ಪ್ರಥಮ ವಿಜ್ಞಾನ ಬರಹಗಾರರು ಎಂದು ಪ್ರಸಿದ್ಧಿ ಪಡೆದವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣದಲ್ಲಿ ಪ್ರಧಾನ ಪಾತ್ರಧಾರಿಗಳಾಗಿದ್ದವರು.ಬೆಳ್ಳಾವೆ ವೆಂಕಟನಾರಣಪ್ಪನವರು 1872ರ ಫೆಬ್ರವರಿ 10ರಂದು ತುಮಕೂರಿನ ಬಳಿಯ ಬೆಳ್ಳಾವೆಯಲ್ಲಿ ಜನಿಸಿದರು. ತಂದೆ ವೆಂಕಟಕೃಷ್ಣಯ್ಯನವರು ಮತ್ತು ತಾಯಿ ಲಕ್ಷ್ಮೀದೇವಮ್ಮನವರು. ಇವರ ಪೂರ್ವಿಕರ ಮನೆಮಾತು ತೆಲುಗು. ಆದರೂ ತಮ್ಮ ವ್ಯಾವಹಾರಿಕ ಭಾಷೆಯಾದ ಕನ್ನಡದ ಮೇಲೆ ಬೆಳ್ಳಾವೆ ವೆಂಕಟನಾರಣಪ್ಪನವರಿಗೆ ಅಪಾರವಾದ ಪ್ರೀತಿ.ಬೆಳ್ಳಾವೆಯವರ ವಿದ್ಯಾಭ್ಯಾಸ ಪ್ರಾರಂಭವಾದುದು […]

Advertisement

Wordpress Social Share Plugin powered by Ultimatelysocial