ನಾಪತ್ತೆಯಾದ ತಾಯಿಮಗಳು ಶವವಾಗಿ ಪತ್ತೆ

ನಂಜನಗೂಡು :ಗದ್ದೆಗೆ ಹೋಗಿ ಬರುವುದಾಗಿ ಹೇಳಿ ಹೋದ ತಾಯಿ ಮಗಳು ನೀರಿನ ಹಳ್ಳದಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.ಗ್ರಾಮದ ಇಬ್ಬರು ವ್ಯಕ್ತಿಗಳ ಮೇಲೆ ನಂಜನಗೂಡು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತಳ ಪತಿ ನೀಡಿದ ದೂರಿನ ಆಧಾರದ ಮೇಲೆ ಎಫ್.ಐ.ಆರ್.ದಾಖಲಾಗಿದೆ.ನಂಜನಗೂಡು ತಾಲೂಕು ಬಿಳುಗಲಿ ಗ್ರಾಮದ ಪುಟ್ಟರಂಗಮ್ಮ(52) ಹಾಗೂ ಮಗಳು ಮಣಿ(32)ಮೃತ ದುರ್ದೈವಿಗಳು.ಬಿಳುಗಲಿ ಗ್ರಾಮದ ಯೋಗೇಶ್ ಹಾಗೂ ರಂಗಸ್ವಾಮಿ ಆರೋಪಿಗಳು.

ಜೂನ್ 15 ರಂದು ಗದ್ದೆಗೆ ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಪುಟ್ಟರಂಗಮ್ಮ ಹಾಗೂ ಮಣಿ ವಾಪಸ್ ಬಂದಿಲ್ಲ.ಮರುದಿನ ಪುಟ್ಟರಂಗಮ್ಮ ಪುತ್ರ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ತಾಯಿ ಹಾಗೂ ಸಹೋದರಿ ನಾಪತ್ತೆಯಾದ ಪ್ರಕರಣ ದಾಖಲಿಸಿದ್ದಾರೆ.ಜೂನ್ 19 ರಂದು ತಮ್ಮ ಜಮೀನು ಬಳಿ ಇರುವ ಹಳ್ಳದ ನೀರಿನಲ್ಲಿ ಪುಟ್ಟರಂಗಮ್ಮ ಹಾಗೂ ಮಣಿ ಇಬ್ಬರ ಮೃತದೇಹಗಳು ಕಂಡುಬಂದಿದೆ.ಕಾಲುಗಳನ್ನ ಸೀರೆಯಿಂದ ಕಟ್ಟಿಹಾಕಿ ಪೊದೆಗಳಿಗೆ ಕಟ್ಡಿಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ.ಮೃತದೇಹಗಳು ಪತ್ತೆಯಾದ ಜಾಗದಲ್ಲಿ ಪುಟ್ಟರಂಗಮ್ಮ ಪತಿ ರಂಗಶೆಟ್ಟಿ ಗೋಳಾಡುತ್ತಿದ್ದ ವೇಳೆ ಬಿಳುಗಲಿ ಗ್ರಾಮದ ಯೋಗೇಶ್ ಬಂದು ತಾನೇ ಕೊಲೆ ಮಾಡಿರುವುದಾಗಿ ರಾಜಾರೋಷವಾಗಿ ಕಿರುಚಾಡಿ ತನ್ನನ್ನ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಕಿರುಚಾಡಿದ್ದಾನೆ.ಪತ್ನಿ ಹಾಗೂ ಮಗಳ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಆತ್ಮಹತ್ಯೆಗೆ ಶರಣಾಗಿರಬಹುದೆಂದು ತಿಳಿದಿದ್ದ ರಂಗಶೆಟ್ಟಿ ಇದೀಗ ಯೋಗೇಶ್ ಹಾಗೂ ರಂಗಸ್ವಾಮಿ ಎಂಬುವರ ವಿರುದ್ದ ಕೊಲೆ ಆರೋಪ ಹೊರೆಸಿದ್ದಾರೆ.ರಂಗಶೆಟ್ಟಿ ನೀಡಿದ ದೂರಿನ ಅನ್ವಯ ಬಿಳಿಗೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಯೋಗೇಶ್ ಹಾಗೂ ರಂಗಸ್ವಾಮಿ ಬಂಧನಕ್ಕೆ ಜಾಲ ಬೀಸಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು DC ‌ಹೆಸರಲ್ಲಿ ವಂಚನೆಗೆ ಯತ್ನ, ಅಧಿಕಾರಿಗಳಿಗೆ ಬಂತು ಮೆಸೇಜ್

Wed Jun 29 , 2022
ರಾಯಚೂರು, (ಜೂನ್.28): ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಬಾಗಲಕೋಟೆ ಮತ್ತು ‌ವಿಜಯಪೂರ ಮೂಲದ ಟೀಂ ಒಂದು ಎಸಿಬಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಫೋನ್ ‌ಮಾಡಿ ದಾಳಿ ಮಾಡುತ್ತೇವೆ..ನೀವೂ ನಮ್ಮ ಖಾತೆಗೆ ಹಣ ಜಮಾ ಮಾಡಿದ್ರೆ ದಾಳಿ ಮಾಡಲ್ಲವೆಂದು ಒತ್ತಾಯಿಸಿತು. ಆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶ್ವಸಿಯಾಗಿದ್ರು. ಸೈಬರ್ ಕ್ರೈಂ ಪೊಲೀಸರು ಎಷ್ಟೇ ಪ್ರಕರಣಗಳು ಭೇದಸಿದರು. ಇತ್ತೀಚಿನ ದಿನಗಳಲ್ಲಿ […]

Related posts

Advertisement

Wordpress Social Share Plugin powered by Ultimatelysocial