ಲಯಸ್ಮಿತಾ ಕೊಲೆ- ಭದ್ರತಾ ವೈಫಲ್ಯದ ವಿರುದ್ಧ ಪ್ರೆಸಿಡೆನ್ಸಿ ಕಾಲೇಜ್ ಬಳಿ ಪ್ರತಿಭಟನೆ.

ಜನವರಿ 2ಕ್ಕೆ ಯಲಹಂಕದ ಪ್ರೆಸಿಡೆನ್ಸಿ ಕಾಲೇಜ್ ವಿದ್ಯಾರ್ಥಿನಿ ಲಯಸ್ಮಿತಾಳನ್ನ ಪಾಗಲ್ ಪ್ರೇಮಿ ಪವನ್ ಕಾಲೇಜ್ ಕ್ಯಾಂಪಸ್ ಒಳಗಡೆ ನುಗ್ಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಭಾರಿ ಭದ್ರತೆ ನಡುವೆ ಕಾಲೇಜಿನೊಳಗೆ ನಡೆದ ಕೊಲೆ ವಿರುದ್ದ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇದುವರೆಗೂ ರಾಜಾನುಕುಂಟೆ ಪೊಲೀಸರು ಪ್ರೆಸಿಡೆನ್ಸಿ ಕಾಲೇಜ್ ಆಡಳಿತ ಮಂಡಳಿ ಯಾರೋಬ್ಬರನ್ನು ಕರೆದು ವಿಚಾರಣೆ ನಡೆಸಿಲ್ಲ, ಬಂಧನ ಸಹ ಮಾಡಿಲ್ಲ ಎಂದು ಸ್ಥಳೀಯರು ಪ್ರೆಸಿಡೆನ್ಸಿ ಕಾಲೇಜ್ ವಿರುದ್ಧ ಕಿಡಿಕಾರಿದರು.ಪ್ರೆಸಿಡೆನ್ಸಿ ಕಾಲೇಜಿನ ಆಡಳಿತ ಮಂಡಳಿ ವೈಫಲ್ಯಗಳನ್ನು ಖಂಡಿಸಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಕಾಲೇಜ್ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಲೇಜ್ ವಿರುದ್ದ ದಿಕ್ಕಾರ ಕೂಗಿ, ಕೊಲೆಯಾದ ಲಯಾಸ್ಮಿತಾ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಮ್ಯಾನೇಜ್ಮೆಂಟ್ ನ ಬೇಜವಾಬ್ದಾರಿ ನಡೆಗಳಿಂದ ಸುತ್ತಮುತ್ತಲ ಹತ್ತಾರು ಹಳ್ಳಿ ಜನ ತೀವ್ರ ತೊಂದರೆ ಅನುಭವಿಸಿತ್ತಿದ್ದಾರೆ. ಕಾಲೇಜ್ ಅಕ್ರಮಗಳಿಗೆ ಬ್ರೇಕ್ ಹಾಕಬೇಕು, ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಕರವೇ ಎಚ್ಚರಿಕೆ ನೀಡಿದೆ. ಲಯ ಕೊಲೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಾಲೇಜು, ಸ್ಪಷ್ಟ ಉತ್ತರ ನೀಡದಿರುವುದು ಬೇಸರದ ಮೂಡಿಸಿದೆ.ಕೊಲೆಗೆ ಕಾರಣವಾದ ಪವನ್ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗುಣಮುಖರಾದ ನಂತರ ಬಂಧನ ಎನ್ನಲಾಗ್ತಿದೆ. ಒಟ್ಟಾರೆ ಪ್ರೆಸಿಡೆನ್ಸಿ ಕಾಲೇಜಿನ ಭದ್ರತಾ ವೈಫಲ್ಯಕ್ಕೆ ಯುವತಿ ಕೊಲೆಯಾಗಿದ್ದಾಳೆ. ಇನ್ನಾದರು ಕಾಲೇಜು ಆಡಳಿತ ಎಚ್ಚೆತ್ತುಕೊಳ್ಳಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜನವರಿ 6ಕ್ಕೆ "MR ಬ್ಯಾಚುಲರ್" ಆಗಮನ.

Thu Jan 5 , 2023
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “Mr ಬ್ಯಾಚುಲರ್” ಚಿತ್ರ ಜನವರಿ 6 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಿತು. ನಾನು ಮೊದಲೇ ಹೇಳಿದ ಹಾಗೆ ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ. ಏಕೆಂದರೆ ನಾನು ಈ ಚಿತ್ರ ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ “ಲವ್ ಮಾಕ್ಟೇಲ್” ಚಿತ್ರ ಮಾಡಿದ್ದು. ಇನ್ನು ಚಿತ್ರದ ಬಗ್ಗೆ ‌ಹೇಳಬೇಕೆಂದರೆ ನಿರ್ದೇಶಕ ನಾಯ್ಡು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರು […]

Advertisement

Wordpress Social Share Plugin powered by Ultimatelysocial