ಜನವರಿ 6ಕ್ಕೆ “MR ಬ್ಯಾಚುಲರ್” ಆಗಮನ.

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “Mr ಬ್ಯಾಚುಲರ್” ಚಿತ್ರ ಜನವರಿ 6 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಿತು.

ನಾನು ಮೊದಲೇ ಹೇಳಿದ ಹಾಗೆ ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ. ಏಕೆಂದರೆ ನಾನು ಈ ಚಿತ್ರ ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ “ಲವ್ ಮಾಕ್ಟೇಲ್” ಚಿತ್ರ ಮಾಡಿದ್ದು. ಇನ್ನು ಚಿತ್ರದ ಬಗ್ಗೆ ‌ಹೇಳಬೇಕೆಂದರೆ ನಿರ್ದೇಶಕ ನಾಯ್ಡು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಕಥೆ ಹೇಳಲು ಬಂದಾಗಲೆ ಕಥೆ ಕೇಳಿ ಸಾಕಷ್ಟು ಎಂಜಾಯ್ ಮಾಡಿದ್ದೆ. ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ಅದಕ್ಕೆ ನಿರ್ದೇಶಕರೆ ಕಾರಣ. ಅವರಿಗೆ ಸಾಕಷ್ಟು ಅಭಿರುಚಿಯಿದೆ. ಮಿಲನ ನಾಗರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಿಕ ರತ್ನಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ನಾಯ್ಡು ಅವರು ಈ ಚಿತ್ರದ ಕಥೆ ಹೇಳಿದಾಗಲೇ ಇಷ್ಟವಾಯಿತು. ನಾನು ಕೂಡ ಈ ಚಿತ್ರದಲ್ಲಿ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದೇನೆ . ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು ಮಿಲನ ನಾಗರಾಜ್.

ತಮ್ಮ ಪಾತ್ರದ ಬಗ್ಗೆ ಹಾಗೂ ಚಿತ್ರದ ಕುರಿತು ನಿಮಿಕ ರತ್ನಾಕರ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಸಾಕಷ್ಟು ಕಲಾವಿದರು ತಮ್ಮ‌ ಅನುಭವ ಹಂಚಿಕೊಂಡರು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಡಾರ್ಲಿಂಗ್ ಕೃಷ್ಣ ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ದೇಶಕ ನಾಯ್ಡು ತಿಳಿಸಿದರು.

ನಿರ್ಮಾಪಕರಾದ ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಛಾಯಾಗ್ರಾಹಕ – ಸಂಕಲನಕಾರ ಶ್ರೀ ಕ್ರೇಜಿಮೈಂಡ್ಸ್ ಹಾಗೂ ವಿತರಕ ಬೆಂಗಳೂರು ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಿರ್ಮಾಪಕ ಹಾಗೂ ನಿರ್ದೇಶಕ ಗುರು ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅರಸನ ಕೋಟೆ ಇಬ್ಭಾಗ ಆಗುವ ಸಮಯ ಬಂದೇ ಬಿಟ್ಟಿದೆ!

Thu Jan 5 , 2023
  ಹಾಲ್‌ನಲ್ಲಿ ಸೋಫಾ ಮೇಲೆ ಅಖಿಲ ಕುಳಿತಿರುತ್ತಾಳೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ದಾಮಿನಿ ನಾನು ನಿಮ್ಮ ಬಳಿ ಪಾರು ಬಗ್ಗೆ ಕಂಪ್ಲೇಂಟ್ ಮಾಡಲು ಬಂದಿಲ್ಲ, ನೀವು ಹಾಗೆ ಅಂದುಕೊಳ್ಳಬೇಡಿ ಎಂದು ಹೇಳುತ್ತಾಳೆ. ಅದಕ್ಕೆ ಅಖಿಲ ಜಾಸ್ತಿ ರಾಗ ಎಳೆಯಬೇಡ ಎನು ವಿಚಾರ ಹೇಳು ಎಂದು ಹೇಳುತ್ತಾಳೆ.ಇದನ್ನು ಕೇಳಿದ ದಾಮಿನಿ ಕಳೆದ ಬಾರಿ ದೇವಾಸ್ಥಾನದ ಅಧಿಕಾರಿಗಳು ಬಂದಾಗ ಎಷ್ಟು ವಿನಯದಿಂದ ವಿನಮ್ರತೆಯಿಂದ ನಡೆದುಕೊಂಡು ಇದ್ದಳು, ಗೌರವಪೂರ್ವಕವಾಗಿ ಎಷ್ಟು ಜನ ಬಂದಿದ್ದರು […]

Advertisement

Wordpress Social Share Plugin powered by Ultimatelysocial