‘ನನ್ನ ಪತಿ ಅತ್ಯಾಚಾರ ಮಾಡಿದ್ದಾರೆ’;

 

ವಾಜುದ್ದೀನ್ ಹಾಗೂ ಆಲಿಯಾ ಮಧ್ಯೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ.

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮನೆ ಜಗಳ ಬೀದಿಗೆ ಬಂದು ಸಾಕಷ್ಟು ಸಮಯ ಕಳೆದಿದೆ.

ಅವರ ಪತ್ನಿ ಆಲಿಯಾ ಸಿದ್ದಿಕಿ ಅವರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಪತಿಯಿಂದ, ಪತಿಯ ಕುಟುಂಬದಿಂದ ಸಾಕಷ್ಟು ಕಿರುಕುಳ ಆಗುತ್ತಿದೆ ಎಂದು ಅವರು ಆರೋಪ ಮಾಡುತ್ತಿದ್ದಾರೆ. ಹೀಗಿರುವಾಗಲೇ ಪತಿಯ ವಿರುದ್ಧ ಆಲಿಯಾ  ಅವರು ಅತ್ಯಾಚಾರ ದೂರು ದಾಖಲು ಮಾಡಿದ್ದಾರೆ. 2009ರಲ್ಲಿ ನಡೆದ ಇವರ ವಿವಾಹ ಈಗ ವಿವಾದದ ಗೂಡಾಗಿದೆ.

ನವಾಜುದ್ದೀನ್ ಹಾಗೂ ಆಲಿಯಾ ಮಧ್ಯೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮಧ್ಯೆ ನವಾಜುದ್ದೀನ್ ವಿರುದ್ಧ ಆಲಿಯಾ ಅವರು ಅತ್ಯಾಚಾರ ಕೇಸ್ ದಾಖಲು ಮಾಡಿದ್ದಾರೆ. ವರ್ಸೋವಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹಲವು ಬಗೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ‘ಮಹಾನ್ ವ್ಯಕ್ತಿಯಾಗಲು ಪ್ರಯತ್ನಿಸಿದ ಮಹಾನ್ ನಟ. ಈಗ ಆ ನಟನ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು (ಪುರಾವೆಯೊಂದಿಗೆ) ದಾಖಲಾಗಿದೆ’ ಎಂದು ಆಲಿಯಾ ಹೇಳಿದ್ದಾರೆ.

ಮಕ್ಕಳನ್ನು ತಮ್ಮ ಹಸ್ತಾಂತರಕ್ಕೆ ನೀಡಬೇಕು ಎನ್ನುವ ವಿಚಾರದಲ್ಲಿ ಆಲಿಯಾ ಪರ ವಕೀಲರು ವಾದ ಮಂಡನೆ ಮಾಡುತ್ತಿದ್ದಾರೆ. ‘ಅವರು (ನವಾಜುದ್ದೀನ್​) ಮಕ್ಕಳನ್ನು ತಮಗೆ ನೀಡಬೇಕು ಎಂದು ಕೋರಿದ್ದಾರೆ. ಅವರಿಗೆ ಡೈಪರ್ ಅನ್ನು ಹೇಗೆ ಬದಲಿಸಬೇಕು ಎಂಬುದು ತಿಳಿದಿಲ್ಲ. ಇಂದು ನನ್ನಿಂದ ಮಕ್ಕಳನ್ನು ಕದ್ದು ಅವರು ಒಳ್ಳೆಯ ತಂದೆ ಎಂದು ತೋರಿಸಲು ಬಯಸುತ್ತಿದ್ದಾರೆ. ಹೇಡಿ ತಂದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಾಯಿಯಿಂದ ಮಕ್ಕಳನ್ನು ಕದಿಯುತ್ತಿದ್ದಾರೆ. ಆದರೆ ಸರ್ವಶಕ್ತನಿಗೆ ದೊಡ್ಡ ಶಕ್ತಿ ಇದೆ ಎಂದು ಅವರಿಗೆ ತಿಳಿದಿಲ್ಲ’ ಎಂದು ಆಲಿಯಾ ಹೇಳಿದ್ದಾರೆ.

ಈ ವಿಚಾರದಲ್ಲಿ ನವಾಜುದ್ದೀನ್ ಅವರು ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ‘ನನಗೆ ನನ್ನ ಮಕ್ಕಳು ಬೇಕು ಅಷ್ಟೇ. ಯಾರು ಏನೇ ಹೇಳಿದರೂ ತೊಂದರೆ ಇಲ್ಲ’ ಎಂದಷ್ಟೇ ನವಾಜುದ್ದೀನ್ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಂಕ್ ಲೈನ್ ಸುರಂಗ ಕೊರೆಯುವ ಕಾಮಗಾರಿ ಪೂರ್ಣ

Sat Feb 25 , 2023
ಬೆಂಗಳೂರು, ಫೆಬ್ರವರಿ 25: ಬೆಂಗಳೂರಿನ ಮೆಟ್ರೋದ 21.38 ಕಿಮೀ ಉದ್ದದ ಪಿಂಕ್ ಲೈನ್‌ನ ಅತಿ ಉದ್ದದ ಭೂಗತ ವಿಭಾಗವನ್ನು 13.9 ಕಿಮೀ ಹೊಂದಿದ್ದು, ಶುಕ್ರವಾರ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ) ವಿಂಧ್ಯಾ ಟ್ಯಾನರಿ ರಸ್ತೆಯ ಶಾದಿ ಮಹಲ್ ಶಾಫ್ಟ್ ಅನ್ನು ಭೇದಿಸಿ ತನ್ನ ಕೆಲಸ ಮುಗಿಸಿದೆ.ವಿಂಧ್ಯಾ ತನ್ನ ಗೊತ್ತುಪಡಿಸಿದ ಉದ್ದದ ಸುರಂಗವನ್ನು ಕೊರೆದು ಪೂರ್ಣಗೊಳಿಸಿದ ಐದನೇ ಟಿಬಿಎಂ ಆಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಪ್ರಕಾರ ಉರ್ಜಾ, […]

Advertisement

Wordpress Social Share Plugin powered by Ultimatelysocial