‘ನನ್ನ ಸಂಬಳ ಹೆಚ್ಚಾಗಿದೆ’.

ಹೊಸದಿಲ್ಲಿ: ಯಾವುದೇ ಕಂಪೆನಿಯ ಸಿಇಒ(CEO) ತಮಗೆ ದೊರೆಯುತ್ತಿರುವ ವೇತನ ತೀರಾ ಹೆಚ್ಚು ಎಂದು ಹೇಳುವರೇ? ಆದರೆ ಆಯಪಲ್ (Apple) ಕಂಪೆನಿಯ ಸಿಇಒ ಟಿಮ್‌ ಕುಕ್‌ (Tim Cook) ಇದಕ್ಕೊಂದು ಅಪವಾದ. ತಮ್ಮ ವೇತನ ಬಹಳ ಹೆಚ್ಚು ಆದುದರಿಂದ ವೇತನ ಕಡಿತಗೊಳಿಸಿ ಎಂದು ಅವರು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಅವರ ಕಂಪೆನಿ ಅವರ ವೇತನವನ್ನು ಶೇ 50 ರಷ್ಟು ಕಡಿತಗೊಳಿಸಲಿದೆ.

ಇನ್ನು ಮುಂದೆ ಟಿಮ್‌ ಕುಕ್‌ ಅವರ ಪರಿಷ್ಕೃತ ವೇತನ 49 ಮಿಲಿಯನ್‌ ಅಮೆರಿಕನ್‌ ಡಾಲರ್‌ ಆಗಲಿದೆ ಎಂದು ಆಪಲ್‌ ತಿಳಿಸಿದೆ. ಇದರಲ್ಲಿ 3 ಮಿಲಿಯನ್‌ ಮೂಲ ವೇತನವಾಗಿದ್ದರೆ, 6 ಮಿಲಿಯನ್‌ ಬೋನಸ್‌ ಮತ್ತು 40 ಮಿಲಿಯನ್‌ ಅಮೆರಿಕನ್‌ ಡಾಲರ್‌ ಇಕ್ವಿಟಿ ಮೌಲ್ಯವಾಗಿದೆ. ಇದರ ಹೊರತಾಗಿ ಆಪಲ್‌ನ ಕಾರ್ಯನಿರ್ವಹಣೆಗೆ ನಂಟು ಹೊಂದಿರುವ ಸ್ಟಾಕ್‌ಗಳು ಇನ್ನು ಹಿಂದಿನ ಶೇ 50 ರಿಂದ ಶೇ 75 ರಷ್ಟು ಟಿಮ್‌ ಕುಕ್‌ ಬಳಿ ಇರಲಿವೆ.

ಷೇರುದಾರರ ಸಮತೋಲಿತ ಅಭಿಪ್ರಾಯದ ಆಧಾರದಲ್ಲಿ, ಜೊತೆಗೆ ಆಪಲ್‌ನ ಅಭೂತಪೂರ್ವ ನಿರ್ವಹಣೆ ಹಾಗೂ ಕುಕ್‌ ಅವರ ಶಿಫಾರಸಿನನ್ವಯ ಅವರ ವೇತನ ಪರಿಷ್ಕರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

2022 ರಲ್ಲಿ ಕುಕ್‌ ಅವರ ವೇತನ ಪ್ಯಾಕೇಜ್‌ 99.4 ಮಿಲಿಯನ್‌ ಅಮೆರಿಕನ್‌ ಡಾಲರ್ ಆಗಿದ್ದರೆ 2021 ರಲ್ಲಿ ಇದು 98.7 ಮಿಲಿಯನ್‌ ಡಾಲರ್‌ ಆಗಿತ್ತು.

ಆದರೆ 2022 ರಲ್ಲಿ ಷೇರುದಾರರು ಟಿಮ್‌ ಕುಕ್‌ ಅವರ ದೊಡ್ಡ ವೇತನ ಪ್ಯಾಕೇಜ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಮ್‌ ಕುಕ್‌ ಅವರ ವೇತನ ಪ್ಯಾಕೇಜ್‌ ವಿರುದ್ಧ ಮತ ಚಲಾಯಿಸುವಂತೆಯೂ ಕಳೆದ ವಾರ್ಷಿಕ ಸಭೆಯಲ್ಲಿ ಇನಸ್ಟಿಟ್ಯೂಶನಲ್‌ ಶೇರ್‌ಹೋಲ್ಡರ್‌ ಸರ್ವಿಸಸ್‌ ತನ್ನ ಸದಸ್ಯರಿಗೆ ಸೂಚಿಸಿತ್ತು. ಆದರೂ ಹೆಚ್ಚಿನ ಷೇರುದಾರರು ಕುಕ್‌ ಅವರ ವೇತನ ಪ್ಯಾಕೇಜ್‌ ಪರ ಮತ ಚಲಾಯಿಸಿದ್ದರಿಂದ ಕಳೆದ ವರ್ಷ ಅವರ ವೇತನದಲ್ಲಿ ಬದಲಾವಣೆಯಾಗಿರಲಿಲ್ಲ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಜಿ. ಎನ್. ರಂಗನಾಥರಾವ್ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರು.

Fri Jan 13 , 2023
ಜಿ. ಎನ್. ರಂಗನಾಥರಾವ್ 1942ರ ಜನವರಿ 12ರಂದು ಹಾರೋಹಳ್ಳಿಯಲ್ಲಿ ಜನಿಸಿದರು. ಹಾರೋಹಳ್ಳಿ, ತಾವರೇಕೆರೆ, ಕೃಷ್ಣರಾಜಪುರ, ಮಂಚನಬೆಲೆ, ಅಣೆಕೆಂಪಯ್ಯನದೊಡ್ಡಿ, ಚಿಕ್ಕಸೂಲಿಕೆರೆ, ಲಕ್ಷ್ಮೀಪುರ, ಮಾಗಡಿ, ಜಡಿಗೇನಹಳ್ಳಿ, ಹೊಸಕೋಟೆ ಇತ್ಯಾದಿ ಕಡೆ ಇವರ ಬಾಲ್ಯ ಕಳೆಯಿತು. ಸ್ಕೂಲಿದ್ದಲ್ಲಿ ಓದು, ಇಲ್ಲದಿದ್ದಲ್ಲಿ ದನಕಾಯುವುದು, ಹಿಟ್ಟಿಗೆ ಅಂಬಲಿಗೆ ಹೊನ್ನೆಸೊಪ್ಪು ಕಿತ್ತು ತರುವುದು, ಸುಗ್ಗಿ ಕಣದಲ್ಲಿ ಒಂದು ಮೊರ ರಾಗಿಗಾಗಿ, ಬ್ರಾಹ್ಮಣನಾಗಿ ‘ಐನೋರ ಕಾಣಿಕೆ’ಗೆ ಕಾಯುತ್ತ ನಿಲ್ಲುವುದು ಹೀಗೆ ತಂದೆಗೆ ವರ್ಗವಾದ ಹಳ್ಳಿಗಾಡಲ್ಲೆಲ್ಲ ಬಾಲ್ಯದ ಇವರ ಪಯಣ ಸಾಗಿತ್ತು. […]

Advertisement

Wordpress Social Share Plugin powered by Ultimatelysocial