ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಾದೆಲ್ಲಾ ಮಗ ಝೈನ್‌ ಇನ್ನಿಲ್ಲ

ಬೆಂಗಳೂರು: ಮೈಕ್ರೋಸಾಫ್ಟ್‌ನ ಸಿಇಒ, ಭಾರತೀಯ ಅಮೆರಿಕನ್‌ ಸತ್ಯ ನಾದೆಲ್ಲಾ ಅವರ ಮಗ, 26 ವರ್ಷದ ಝೈನ್‌ ನಾದೆಲ್ಲಾ ಅವರು ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಮೃತರಾಗಿದ್ದಾರೆ. ಝೈನ್‌ ಅವರು ಹುಟ್ಟುವಾಗಲೇ ಸೆರೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿದ್ದರು.

 

 

ಮೈಕ್ರೋಸಾಫ್ಟ್‌ ಕಚೇರಿಯು ತನ್ನ ಸಿಬ್ಬಂದಿ ವರ್ಗಕ್ಕೆ ಝೈನ್‌ ಅವರು ಮೃತಪಟ್ಟಿರುವ ಬಗ್ಗೆ ಮೈಲ್‌ ಕಳುಹಿಸಿದೆ ಎಂದು ‘ಬ್ಲೂಮ್‌ಬರ್ಗ್‌.ಕಾಮ್‌’ ವರದಿ ಮಾಡಿದೆ.

‘ಝೈನ್‌ ಅವರ ಸಂಗೀತದದ ಬಗೆಗಿನ ಅಭಿರುಚಿ, ಮನಸೆಳೆಯುವ ಮುಗುಳ್ನಗು ಸದಾ ನೆನಪಲ್ಲಿ ಉಳಿಯುತ್ತದೆ. ಕುಟುಂಬಸ್ಥರು ಸೇರಿ ತನ್ನನ್ನು ಪ್ರೀತಿಸುವ ಎಲ್ಲರಿಗೂ ಅಗಾಧ ಸಂತಸವನ್ನು ನೀಡುತ್ತಿದ್ದರು’ ಎಂದು ಚಿಲ್ಡ್ರನ್ಸ್‌ ಹಾಸ್ಪಿಟಲ್‌ನ ಸಿಇಒ ಜೆಫ್‌ ಸ್ಪೆರ್ರಿಂಗ್‌ ಹೇಳಿದ್ದಾರೆ. ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ತಮ್ಮ ಹೇಳಿಕೆಯನ್ನು ಜೆಫ್‌ ಹಂಚಿಕೊಂಡಿದ್ದಾರೆ.

ಅಂಗವಿಕಲರಿಗೆ ಸಹಕಾರಿಯಾಗುವ ತಂತ್ರಜ್ಞಾನದ ಅಭಿವೃದ್ಧಿಗೆ ಝೈನ್‌ ಹುಟ್ಟು ಕಾರಣ

ಶಸ್ತ್ರ ಚಿಕಿತ್ಸೆ ಮೂಲಕ ತಾಯಿ ಗರ್ಭದಿಂದ ಹೊರತೆಗೆಯಲ್ಪಟ್ಟ ಮಗು ಝೈನ್‌. ಗರ್ಭದಲ್ಲಿದ್ದಾಗ ಚಲನೆ ನಿಲ್ಲಿಸಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯಬೇಕಾಯಿತು. ಉಸಿರಾಟವಿದ್ದರೂ ಮಗು ಅಳುತ್ತಿರಲಿಲ್ಲ. ಗರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಗುವಿನ ಮಿದುಳಿನ ನರಗಳಲ್ಲಿ ರಕ್ತ ಸಂಚಾರ ವ್ಯತ್ಯಯದಿಂದ ದೇಹದ ಚಲನೆ ದುರ್ಬಲಗೊಂಡಿತ್ತು.

ಆರ್ಕಿಟೆಕ್ಟ್ ಆಗಿದ್ದ ಪತ್ನಿ ಮಗ ಝೈನ್‌ನ ವಿಶೇಷವಾಗಿ ಆರೈಕೆ ಮಾಡುತ್ತಿದ್ದರು.

ಜಗತ್ತಿನ ವಿಶೇಷ ವ್ಯವಸ್ಥೆಯ ಅಗತ್ಯವಿರುವ ಶತಕೋಟಿ ಅಂಗವಿಕಲರಿಗೆ ಸಹಕಾರಿಯಾಗುವ ತಂತ್ರಜ್ಞಾನ ಅಭಿವೃದ್ಧಿಗೆ ಝೈನ್‌ ಹುಟ್ಟು ಮುನ್ನುಡಿಯಾಗಿತ್ತು. ಆಟಿಸಂ ಸೇರಿ ಹಲವು ರೀತಿಯ ಅಂಗವಿಕಲತೆ ಹೊಂದಿರುವ ಸಾಕಷ್ಟು ಜನರಿಗೆ ಉದ್ಯೋಗ ನೀಡಿ ಅವರಿಂದಲೇ ಅಂಗವಿಕಲರ ಹಲವು ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ ಅಭಿವೃದ್ಧಿ ನಡೆಯುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧನುಷ್ ಅಭಿನಯದ 'ಮಾರನ್' ಮಾರ್ಚ್ 11 ರಂದು ಓಟಿಟಿಯಲ್ಲಿ ಬಿಡುಗಡೆ

Tue Mar 1 , 2022
ನಿರ್ದೇಶಕ ಕಾರ್ತಿಕ್ ನರೇನ್ ಅವರ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್, ಧನುಷ್ ಮತ್ತು ಮಾಳವಿಕಾ ಮೋಹನನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ `ಮಾರನ್`, ಮಾರ್ಚ್ 11 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಸೋಮವಾರ, ಚಿತ್ರದ ಟ್ರೇಲರ್ ಅನ್ನು ಅಭಿಮಾನಿಗಳು ಮತ್ತು ಪ್ರೇಕ್ಷಕರು ಟ್ವಿಟರ್‌ನಲ್ಲಿ `ಟ್ವಿಟರ್ ಅನ್‌ಲಾಕ್` ಎಂಬ ವೈಶಿಷ್ಟ್ಯದ ಮೂಲಕ ಅನಾವರಣಗೊಳಿಸಿದ್ದು, ಈ ವೈಶಿಷ್ಟ್ಯವನ್ನು ಅಳವಡಿಸಿಕೊಂಡ ಮೊದಲ ತಮಿಳು ಚಿತ್ರ ಇದಾಗಿದೆ ಎಂದು ತಯಾರಕರು ಹೇಳಿದ್ದಾರೆ.   ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ಪ್ರೇಕ್ಷಕರನ್ನೇ […]

Advertisement

Wordpress Social Share Plugin powered by Ultimatelysocial