ಮದುವೆ ಬಳಿಕ ಕೆಲಸಕ್ಕೆ ಬಂದಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯ ನಿಗೂಢ ಸಾವು!

ಮೈಸೂರು: ಮದುವೆ ರಜೆ  ಬಳಿಕ ಕೆಲಸಕ್ಕೆ ಬಂದಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯ  ನಿಗೂಢ ಸಾವು ಆಗಿದೆ. ಮಹಿಳೆಯ  ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಮೈಸೂರು ಜಿಲ್ಲೆಯ ಹಣಸೂರು   ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ   ನಡೆದಿದೆ.
25 ವರ್ಷದ ಕೃಷ್ಣಾಬಾಯಿ ತುಕಾರಾಂ ಪಡ್ಕೆ ಮೃತ ಮಹಿಳೆ. ಮೃತ ಕೃಷ್ಣಾಬಾಯಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್​ಗಳ್ಳಿ ಗ್ರಾಮದವರು. ಒಂದು ತಿಂಗಳ ಹಿಂದಷ್ಟೇ ಕೃಷ್ಣಾಬಾಯಿ ಅವರ ಮದುವೆ  ನಡೆದಿತ್ತು. ದೀರ್ಘ ರಜೆಯಲ್ಲಿದ್ದ ಕೃಷ್ಣಾಬಾಯಿ ನಾಲ್ಕು ದಿನಗಳ ಹಿಂದಷ್ಟೇ ಸೇವೆಗೆ ಹಿಂದಿರುಗಿದ್ದರು. ಇದೀಗ ಕೃಷ್ಣಾಬಾಯಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ಕೃಷ್ಣಾಬಾಯಿ ಅವರ ಪತಿ ಸುಬಾಸ್ ಬೋಸ್ಲೆ ಹನೂರಿನ ಅರಣ್ಯ ಇಲಾಖೆಯ  ಫಾರೆಸ್ಟ್ ಗಾರ್ಡ್   ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಳಿಕೆರೆಯಲ್ಲಿ ವಾಸವಾಗಿದ್ದ ಕೃಷ್ಣಾಬಾಯಿ
ಕೃಷ್ಣಾಬಾಯಿ ಸಹೋದ್ಯೋಗಿ ಗ್ರಾಮ ಲೆಕ್ಕಾಧಿಕಾರಿ ಚೈತ್ರ ಮತ್ತು ಅವರ ತಾಯಿಯೊಂದಿಗೆ ಬಿಳಿಕೆರೆಯ ಎಸ್​ಬಿಐ ಹಿಂಬಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಕೃಷ್ಣಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದ್ರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲು
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಹೋದ್ಯೋಗಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಕೃಷ್ಣಾಬಾಯಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೆಳತಿಯ ಕೊಲೆ, ಆರೋಪಿ ಅರೆಸ್ಟ್
ತನ್ನೊಂದಿಗೆ ಗೆಳತಿಯಂತೆ  ಇರಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಕ್ಯಾಬ್ ಚಾಲಕನೋರ್ವ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ಇಂದಿರಾ ನಗರದಲ್ಲಿ  ಕೊಲೆ ಮಾಡಿ ಮಹಿಳೆಯ ಮೃತದೇಹವನ್ನು ನಗರದ ಹೊರ ವಲಯದಲ್ಲಿ ಬಿಸಾಡಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ನಗರದ ಬಾಗಲೂರು ಪೊಲೀಸರು  ಆರೋಪಿ ಭೀಮರಾವ್ ಎಂಬಾತನನ್ನು ಬಂಧನ ಮಾಡಿದ್ದಾರೆ.
ಆರೋಪಿ ಭೀಮರಾವ್​, ದೀಪಾ ಎಂಬ ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದ. ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.
ಪತ್ನಿಯನ್ನ ಕೊಂದ ಗಂಡ?
ಚಿತ್ರದುರ್ಗದ ಬೊಗಳೇರಹಟ್ಟಿಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ. ಪತಿ ಚಂದ್ರಶೇಖರ್, ತನ್ನ ಪತ್ನಿ ಗೌತಮಿಯನ್ನು ಹತ್ಯೆಗೈದು, ನೇಣಿ ಬಿಗಿದು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ಮಾಡಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೊಂದೆಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ ತೋರಿದ್ದಾರಂತೆ. ಆದ್ರಿಂದ ಚಿತ್ರದುರ್ಗ ಎಸ್​​ಪಿ ಕಚೇರಿ ಎದುರು ಸಂಬಂಧಿಕರ ಧರಣಿ ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ

Mon Mar 13 , 2023
      ಧ್ಯಾನ ಪರಿಹಾರ ತರುತ್ತದೆ. ಇಂವು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ನಿಮ್ಮ ಚೈತನ್ಯವನ್ನು ವೃದ್ಧಿಸುತ್ತದೆ. ಹೊಸ ಯೋಜನೆ ಮತ್ತು ವೆಚ್ಚಗಳನ್ನು ಮುಂದೂಡಿ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ […]

Advertisement

Wordpress Social Share Plugin powered by Ultimatelysocial