Mysuru Dasara 2023: ಮೈಸೂರಿಗೆ 300 ಹೆಚ್ಚುವರಿ ಬಸ್‌ಗಾಗಿ ಮನವಿ

ಮೈಸೂರು, ಸೆಪ್ಟೆಂಬರ್‌ 13: ಈ ಬಾರಿ ಶಕ್ತಿ ಯೋಜನೆ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾವವರ ಸಂಖ್ಯೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ. ಹಾಗಾಗಿ ದಸರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ನೀಡುವಂತೆ ಸಾರಿಗೆ ಇಲಾಖೆ ಜೊತೆ ಮಾತುಕತೆ ನಡೆಯುತ್ತಿದೆ.

 

ಶಕ್ತಿ ಯೋಜನೆಯಿಂದ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಮುಂದಿನ ತಿಂಗಳು ದಸರಾ ಮಹೋತ್ಸವ ಇರುವುದರಿಂದ ಹೆಚ್ಚಿನ ಸಂಖ್ಯೆ ಈ ಬಾರಿ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಚಾಮುಂಡಿಬೆಟ್ಟಕ್ಕೆ ಉತ್ತರ ಕರ್ನಾಟಕದಿಂದಲೂ ಮಹಿಳೆಯರು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ಸಾರಿಗೆ ಇಲಾಖೆಗೆ ಈ ಬಾರಿ ದಸರಾಗೆ 300 ಬಸ್‌ಗಳನ್ನು ನೀಡುವಂತೆ ಮನವಿ ಮಾಡಿದೆ.

ಸದ್ಯ ಮೈಸೂರು‌ ಜಿಲ್ಲೆಯಲ್ಲಿ 980 ಬಸ್ ಗಳು ಓಡಾಡುತ್ತಿವೆ. ನಿತ್ಯ 3.75 ಲಕ್ಷ‌ಜನ ಪ್ರಯಾಣಿಸುತ್ತಿದ್ದಾರೆ. ಪ್ರತಿದಿನ 1.63 ಕೋಟಿ ಆದಾಯ ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 9 ಡಿಪೋ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಬಿಎಂಟಿಸಿಯಿಂದಲೂ ಬಸ್ ನೀಡುವಂತೆ ಮೈಸೂರು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಶ್ರಾವಣ ಮಾಸದ ಜೊತೆಗೆ ಅಕ್ಟೋಬರ್‌ನಲ್ಲಿ ದಸರಾ ನಂತರ ಹಬ್ಬಗಳು ಮತ್ತು ಮದುವೆ ಸೀಸನ್‌ಗಳು ಆರಂಭವಾಗಲಿದೆ. ಇದರೊಂದಿಗೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ.

ದಸರಾಕ್ಕೆ ಇನ್ನೂ ಸಮಯ ಇರುವುದರಿಂದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯು ಹೆಚ್ಚುವರಿ 300 ಬಸ್‌ಗಳನ್ನು ಬಿಡುವ ಬಗ್ಗೆ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ. ನಾವು ನೆರೆಯ ವಿಭಾಗಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಕ ಜಿ. ಶ್ರೀನಿವಾಸ್ ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಆದಾಯ ದ್ವಿಗುಣಗೊಂಡಿದೆ. ಮೈಸೂರು ವಿಭಾಗದಲ್ಲಿ ಈ ಮೊದಲು ಸತ್ಯ 1.30 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ, ಶಕ್ತಿ ಯೋಜನೆ ಬಳಿಕ ನಿತ್ಯ 1.6.4 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ಚಾಮುಂಡಿಬೆಟ್ಟ ಮಹದೇಶ್ವರ ಬೆಟ್ಟ ನಂಜನಗೂಡಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

ಮೈಸೂರು ವಿಭಾಗವು ಮಂಡ್ಯ ಮತ್ತು ಚಾಮರಾಜನಗರ ವಿಭಾಗಗಳಿಂದ 240 ಹೆಚ್ಚುವರಿ ಬಸ್ ಗಳನ್ನು ಪಡೆಯಲಾಗುತ್ತಿತ್ತು. ಇವು ಆಯ್ದ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಈ ವರ್ಷ, ಶಕ್ತಿ ಯೋಜನೆ ಪ್ರಾರಂಭವಾದ ಕಾರಣ ನಿರೀಕ್ಷೆಗಿಂತ ಹೆಚ್ಚಿನ ರಶ್ ಇರುತ್ತದೆ. ಹಾಗಾಗಿ ವಿಭಾಗ 300 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಯೋಚಿಸುತ್ತಿದ್ದು, ಬೆಂಗಳೂರಿಗೆ ಅಧಿಕ ಟ್ರಿಪ್ ಅವಶ್ಯಕತೆ ಇದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಚಂದ್ರಬಾಬು ನಾಯ್ಡುಗೆ ಬಿಗ್ ರಿಲೀಫ್: ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಆಂಧ್ರ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

Wed Sep 13 , 2023
  ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಹೈದರಾಬಾದ್: ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. […]

Advertisement

Wordpress Social Share Plugin powered by Ultimatelysocial