Naga Chaitanya: ಎರಡನೇ ಮದುವೆಗೆ ರೆಡಿಯಾದ ನಾಗ ಚೈತನ್ಯ! ವಧು ಶೋಭಿತಾ ಅಲ್ಲ

ಕ್ಕಿನೇನಿ ಕುಟುಂಬದಲ್ಲಿ (Akkineni Family) ಎರಡನೇ ಮದುವೆ (Marriage) ಕಾಮನ್. ಇನ್ನು ಮದುವೆ ಆದ ನಂತರ ಅಕ್ಕಿನೇನಿ ಫ್ಯಾಮಿಲಿಯಲ್ಲಿ ಸೊಸೆಯಂದಿರು ಕೆಲಸಕ್ಕೆ ಹೋಗುವುದು ಕೂಡಾ ಅಷ್ಟಕ್ಕಷ್ಟೆ. ನಟಿಯಾಗಿದ್ದರೂ (Actress) ಸಿನಿಮಾ ಬಿಟ್ಟು ಹೌಸ್​ವೈಫ್ ಆಗಿ ಬ್ಯುಸಿನೆಸ್ ಮಾಡುತ್ತಾರೆ ಅಕ್ಕಿನೇನಿ ಕುಟುಂಬದ ಸೊಸೆಯರು.
ತೆಲುಗು ಸ್ಟಾರ್ ನಟ ನಾಗರ್ಜುನ (Nagarjuna) ಅವರ ಮಗ ನಾಗ ಚೈತನ್ಯ (Naga Chaitanya) ಅವರು ಸಮಂತಾ (Samantha Ruth Prabhu) ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮೂರು ವರ್ಷದಲ್ಲಿಯೇ ಅವರ ದಾಂಪತ್ಯ ಜೀವನ ಕೊನೆಯಾಗಿದೆ. ಇಬ್ಬರೂ ಪರಸ್ಪರ ಸಹಮತದಿಂದ ವಿಚ್ಛೇದನೆ ಪಡೆದುಕೊಂಡು ಬೇರೆಯಾಗಿದ್ದಾರೆ. ಇಬ್ಬರೂ ತಮ್ಮ ಲೈಫ್​ನಲ್ಲಿ ಮೂವ್ ಆನ್ ಕೂಡಾ ಆಗಿದ್ದಾರೆ.

ಮತ್ತೆ ಮದುವೆಯಾಗ್ತಿದ್ದಾರೆ ಮಜಿಲಿ ಸ್ಟಾರ್

ಈಗ ಮಜಿಲಿ ಸಿನಿಮಾದ ಸ್ಟಾರ್ ನಾಗ ಚೈತನ್ಯ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಡೇಟಿಂಗ್ ವಿಚಾರಕ್ಕಲ್ಲ. ಬದಲಾಗಿ ಅವರ ಎರಡನೇ ಮದುವೆ ವಿಚಾರವಾಗಿ. 2021ರಲ್ಲಿ ಸಮಂತಾ ಜೊತೆಗಿನ ಹೈಪ್ರೊಫೈಲ್ ಡಿವೋರ್ಸ್ ನಂತರ ನಾಗ ಚೈತನ್ಯ ನಟಿ ಶೋಭಿತಾ ಧೂಳೀಪಾಲ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಈಗ ಅವರ ಮದುವೆ ಮಾತುಕತೆ ಕೇಳಿ ಬಂದಿದ್ದು ಬ್ರೈಡ್ ಶೋಭಿತಾ ಅಲ್ಲ ಅನ್ನುವುದು ಅಚ್ಚರಿಯ ಸಂಗತಿ.

ಲವ್ ಮ್ಯಾರೇಜ್ & ಡಿವೋರ್ಸ್

ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಅವರ ಲವ್​ಸ್ಟೋರಿ ಯೇ ಮಾಯ ಚೇಸಾವೆ ಸಿನಿಮಾದ ಮೂಲಕ ಶುರುವಾಗಿತ್ತು. ಈ ಜೋಡಿ 2017ರಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಅವರ ರೊಮ್ಯಾನ್ಸ್ ಆನ್​ಸ್ಕ್ರೀನ್ ಹಾಗೂ ಆಫ್​ಸ್ಕ್ರೀನ್ ತೆಲುಗು ಸಿನಿಮಾ ಮಂದಿಗೆ ಅತ್ಯಂತ ಫೇವರಿಟ್ ಆಗಿತ್ತು.

ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು ಈ ಕ್ಯೂಟ್ ಜೋಡಿ. ಆದರೆ 4 ವರ್ಷಗಳ ದಾಂಪತ್ಯ ಜೀವನದ ನಂತರ ಈ ಜೋಡಿ ಪರಸ್ಪರ ಹೊಂದಿಕೊಳ್ಳಲಾಗದೆ ದೂರವಾದರು. ಇದು ಎಲ್ಲರಿಗೂ ದೊಡ್ಡ ಶಾಕ್ ಆಗಿತ್ತು.

ಹೊಸ ಚಾಪ್ಟರ್​ಗೆ ನಾಗ ಚೈತನ್ಯ ಎಂಟ್ರಿ

ಈಗ ನಾಗಚೈತನ್ಯ ತಮ್ಮ ಜೀವನದಲ್ಲಿ ಮತ್ತೊಂದು ಪುಟ ತಿರುಗಿಸಲು ರೆಡಿಯಾಗಿದ್ದಾರೆ. ನಟ ತಮ್ಮ ಜೀವನದಲ್ಲಿ ಹೊಸ ಚಾಪ್ಟರ್ ಒಂದಕ್ಕೆ ಕಾಲಿಡೋಕೆ ರೆಡಿಯಾಗಿದ್ದಾರೆ. ಹೊಸ ಜೀವನವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರಂತೆ ನಾಗ ಚೈತನ್ಯ.

ತೆಲುಗು ಚಿತ್ರರಂಗದ ಸ್ಟಾರ್ ನಟ ನಾಗಾರ್ಜುನ ಅವರು ತಮ್ಮ ಮಗ ನಾಗಚೈತನ್ಯನ ಮದುವೆ ವಿಚಾರವಾಗಿ ಬ್ಯುಸಿಯಾಗಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ಮಗನ ಎರಡನೇ ಮದುವೆ ಓಡಾಟದಲ್ಲಿ ಅಕ್ಕಿನೇನಿ ನಾಗಾರ್ಜುನ ಬ್ಯುಸಿಯಾಗಿದ್ದಾರಂತೆ.

Urfi Javed: ನೆಟ್​ ಡ್ರೆಸ್ ಧರಿಸಿದ ಉರ್ಫಿ! ಮಾಸ್ಕ್ ನೋಡಿ ರಾಜ್ ಕುಂದ್ರಾ ತಂಗಿಯಾ ಎಂದ ನೆಟ್ಟಿಗರು

ಅಧಿಕೃತ ಹೇಳಿಕೆ ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ. ನಾಗ ಚೈತನ್ಯ ಅವರನ್ನು ಮದುವೆಯಾಗಲಿರುವ ಯುವತಿ ಬ್ಯುಸಿನೆಸ್ ಕುಟುಂಬಕ್ಕೆ ಸೇರಿದ್ದಾರೆ ಎನ್ನಲಾಗಿದೆ. ಇವರಿಗೆ ಚಿತ್ರರಂಗದ ಜೊತೆಗೆ ಯಾವುದೇ ಸಂಬಂಧ ಕೂಡಾ ಇಲ್ಲ ಎನ್ನಲಾಗಿದ್ದು ವಧು ಯಾರೆನ್ನುವುದು ಇನ್ನೂ ರಿವೀಲ್ ಆಗಿಲ್ಲ. ಆದರೆ ಈ ಮದುವೆ ವಿಚಾರವಾಗಿ ಅಕ್ಕಿನೇನಿ ಕುಟುಂಬ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಶೋಭಿತಾ ಜೊತೆ ಡೇಟಿಂಗ್

ನಾಗ ಚೈತನ್ಯ ಅವರು ನಟಿ ಶೋಭಿತಾ ಧೂಳೀಪಾಲ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇವರಿಬ್ಬರೂ ವಿದೇಶದಲ್ಲಿ ಸುತ್ತಾಡಿದ್ದರು ಕೂಡಾ. ಅವರ ವೆಕೇಷನ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶೋಭಿತಾ ಅವರು ನಾಗ ಚೈತನ್ಯ ಅವರ ಹೊಸ ಮನೆಗೂ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಅವರ ಡೇಟಿಂಗ್ ವಿಚಾರವನ್ನು ಇಬ್ಬರು ಸೆಲೆಬ್ರಿಟಿಗಳೂ ಖಚಿತಪಡಿಸಿರಲಿಲ್ಲ. ಈಗ ಅವರ ಮದುವೆ ಸುದ್ದಿ ವೈರಲ್ ಆಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಗಡಿಯಲ್ಲಿ ಪಾಕ್‌ ಉಗ್ರರ ಅಟ್ಟಹಾಸ, ಯೋಧ ಕರ್ನಲ್ ಮನ್‌ಪ್ರೀತ್ ಸಿಂಗ್ ಮರಣ..!

Fri Sep 15 , 2023
  ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿರುವ ಭಾರತೀಯ ಯೋಧರ ಮೃತದೇಹಗಳನ್ನು ಅವರ ಹುಟ್ಟೂರಿಗೆ ತಲುಪಿಸಲಾಗಿದ್ದು ಕುಟುಂಬಸ್ಥರು, ಬಂಧು-ಬಳಗಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಭಾರತ್ ಮಾತ ಕೀ ಎನ್ನುತ್ತ ತ್ರಿವರ್ಣ ಧ್ವಜವನ್ನಿಡಿದು ನೆಚ್ಚಿನ ತಮ್ಮೂರಿನ ಯೋಧನಿಗೆ ಗೌರವ ನಮನ ಸಮರ್ಪಣೆ ಮಾಡುತ್ತಿದ್ದಾರೆ. ತಂದೆಯ ಮೃತದೇಹಕ್ಕೆ 6 ವರ್ಷದ ಮಗ, 2 ವರ್ಷದ ಮಗಳು ಸೆಲ್ಯೂಟ್ ಮಾಡುತ್ತಿರೋ ದೃಶ್ಯ ನೋಡುವವರಿಗೆ ಕಣ್ಣೀರು […]

Advertisement

Wordpress Social Share Plugin powered by Ultimatelysocial