ಬಚ್ಚನ್​ ಕುಟುಂಬಕ್ಕೆ ಮತ್ತೊಬ್ಬ ವಾರಸ್ದಾರನ ಎಂಟ್ರಿ!

ಬಾಲಿವುಡ್ ನಟ  ಕುನಾಲ್ ಕಪೂರ್ -ನೈನಾ ಬಚ್ಚನ್  ಮನೆಗೆ ಗಂಡು ಮಗುವಿನ ಆಗಮನವಾಗಿದೆ. ಮದುವೆಯಾಗಿ 6 ಆರು ವರ್ಷಗಳ ನಂತರ ದಂಪತಿಗಳು ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ.ಈ ಖುಷಿ ವಿಚಾರವನ್ನು ಕುನಾಲ್ ಕಪೂರ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುನಾಲ್ -ನೈನಾ ಬಚ್ಚನ್ ದಂಪತಿಗಳಿಗೆ ಅಭಿಮಾನಿಗಳು ಸೇರಿ ಬಾಲಿವುಡ್‌ ನ ಹಲವು ಗಣ್ಯರು ಶುಭ ಕೋರಿದ್ದಾರೆ. ಕುನಾಲ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡದೇ ಯಾವಾಗಲೂ ರಹಸ್ಯ ವನ್ನು ಕಾಪಾಡುತ್ತಾರೆ.ಆದರೆ ಮಗುವಿನ ಆಗಮನದ ಸಂತಸದಲ್ಲಿರುವ ಕುನಾಲ್‌ಈ ಸಂತೋಷದ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಮನಬಿಚ್ಚಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌( ನಲ್ಲಿ ಯಾವಾಗಲೂ ಆಯಕ್ಟೀವ್ ಆಗಿರುತ್ತಿದ್ದ ಕುನಾಲ್ ತಮ್ಮ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ.ಕುನಾಲ್​ ಮನೆಗೆ ಗಂಡು ಮಗು ಆಗಮನ!ನೈನಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ, ನಾವಿಬ್ಬರು ತಂದೆ-ತಾಯಿಯಾಗಿದ್ದೇವೆ ಅಂತ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ರೀತಿ ತೋರಿದ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮತ್ತು ದೇವರಿಗೆ ಕುನಾಲ್ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಳ್ಳುತ್ತಿದ್ದಂಗೆ ಕುನಾಲ್ ಕಪೂರ್ ಮತ್ತು ನೈನಾ ಬಚ್ಚನ್ ದಂಪತಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಬಾಲಿವುಡ್ ನಟರಾದ ಹೃತಿಕ್ ರೋಷನ್, ನೈನಾ ಬಚ್ಚನ್ ಸೋದರ ಸಂಬಂಧಿಗಳಾದ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್, ಸುಸಾನೆ ಖಾನ್, ಡಿನೋ ಮೋರಿಯಾ ಸೇರಿ ಹಲವು ಕಲಾವಿದರು ಕುನಾಲ್ ಮತ್ತು ನೈನಾ ಬಚ್ಚನ್ ದಂಪತಿಗೆ ಶುಭ ಕೋರಿದ್ದಾರೆಹೃತಿಕ್ ರೋಷನ್ ಫ್ರಮ್ ಹೃತಿಕ್ ಮಚ್ಚು ಅಂತ ಕಾಮೆಂಟ್ ಮಾಡಿದರೆ, ಅಭಿಷೇಕ್ ಬಚ್ಚನ್ ಹೃದಯದ ಎಮೋಜಿ ಕಳಿಸಿದ್ದಾರೆ. ಹೀಗೆ ಹಲವು ಸ್ನೇಹಿತರು, ಹಿತೈಷಿಗಳು ಹೊಸ ಪೋಷಕರಿಗೆ ಹೃದಯ ತುಂಬಿ ಅಭಿನಂದನೆ ತಿಳಿಸಿದ್ದಾರೆ. ಮದುವೆಯಾಗಿ 6 ಆರು ವರ್ಷಗಳ ನಂತರ ದಂಪತಿಗಳು ತಂದೆ ತಾಯಿಯಾಗಿ ಪ್ರಮೋಷನ್ ಪಡೆದ ಕುನಾಲ್-ನೈನಾ ಮಗುವಿನ ಆಗಮನದ ನಂತರ ಭಾರಿ ಖುಷಿಯಲ್ಲಿದ್ದಾರೆ. ‘ರಂಗ್ ದೇ ಬಸಂತಿ’ ನಟ ಕುನಾಲ್ ಕಪೂರ್ ಮತ್ತು ನೈನಾ ಎರಡು ವರ್ಷ ಡೇಟಿಂಗ್ ನಡೆಸಿ ಬಳಿಕ ಅವರು 2014ರಲ್ಲಿ ನೈನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಫೆಬ್ರವರಿ 9, 2015ರಲ್ಲಿ ಕುನಾಲ್ ಮತ್ತು ನೈನಾ ಅದ್ದೂರಿಯಾಗಿ ಮದುವೆಯಾಗಿದ್ದರು. ಕುಟುಂಬದ ಸಮ್ಮುಖದಲ್ಲಿ ಸೆಶೆಲ್ಸ್‌ನ ಐಡಿಲಿಕ್ ದ್ವೀಪದಲ್ಲಿ ಖಾಸಗಿ ಸಮಾರಂಭದಲ್ಲಿ ಪರಸ್ಪರ ವಿವಾಹವಾಗಿದ್ದರು. ಅಮಿತಾಭ್ ಬಚ್ಚನ್ ಅವರ ಸಹೋದರ ಅಜಿತಾಭ್ ಮತ್ತು ಅವರ ವಿಚ್ಛೇದಿತ ಪತ್ನಿ ರಾಮೋಲಾ ಅವರ ಪುತ್ರಿ ನೈನಾ ಬಚ್ಚನ್‌ರನ್ನು ಕುನಾಲ್ ಕಪೂರ್ ಮದುವೆಯಾಗುವ ಮೂಲಕ ಬಚ್ಚನ್ ಕುಟುಂಬಕ್ಕೆ ಎಂಟ್ರಿ ನೀಡಿದ್ದರು. ಇನ್ನೂ ಕುನಾಲ್ ಕಿಶೋರ್ ಕಪೂರ್ ಬಾಲಿವುಡ್ ನಟ, ನಿರ್ಮಾಪಕ, ಬರಹಗಾರ ಮತ್ತು ಉದ್ಯಮಿ. ರಂಗ್ ದೇ ಬಸಂತಿ(2006), ಬಚ್ನಾ ಏ ಹಸೀನೋ (2008) ಆಜಾ ನಚ್ಲೆ, ವೀರಮ್, ಕೋಯಿ ಜಾನೆ ನಾ, ಸೇರಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.ಕುನಾಲ್ ಕಪೂರ್ 2021ರಲ್ಲಿ ‘ದಿ ಎಂಪೈರ್‌’ ಎಂಬ ಐತಿಹಾಸಿಕ ಟಿವಿ ಸೀರಿಸ್‌ನಲ್ಲಿ ಶಬಾನಾ ಅಜ್ಮಿ, ಡಿನೋ ಮೋರಿಯಾ ಮತ್ತು ದೃಷ್ಟಿ ಧಾಮಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ಸರಣಿಯು ಬಾಬರ್‌ನಿಂದ ಪ್ರಾರಂಭವಾಗುವ ಮೊಘಲ್ ಸಾಮ್ರಾಜ್ಯದ ಉದಯ ಮತ್ತು ಪತನದ ಮೇಲೆ ಚಿತ್ರಿಸಲಾಗಿತ್ತು. ಈ ಸಿರೀಸ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಈ ಕುರಿತು ಮಾತನಾಡಿದ್ದ ಕುನಾಲ್, ದಿ ಎಂಪೈರ್‌ ಬಿಡುಗಡೆಯಾದಾಗಿನಿಂದ ನನಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಾನು ನಿಜವಾಗಿಯೂ ಖುಷಿಯಾಗಿದ್ದೇನೆ ಎಂದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳವಣಿಗೆ-ಕೇಂದ್ರಿತ ಕೇಂದ್ರ ಬಜೆಟ್ ನಂತರ ಸೆನ್ಸೆಕ್ಸ್, ನಿಫ್ಟಿ ಏರಿಕೆ ಕಂಡಿವೆ

Wed Feb 2 , 2022
ಭಾರತೀಯ ಷೇರುಗಳು ಬುಧವಾರದಂದು ಬಜೆಟ್ ನಂತರದ ರ್ಯಾಲಿಯನ್ನು ವಿಸ್ತರಿಸಿದವು, ಕೆಲವು ಬ್ಲೂ-ಚಿಪ್ ಸಂಸ್ಥೆಗಳಲ್ಲಿ ನಿರಾಶಾದಾಯಕ ಗಳಿಕೆಗಳು ಲಾಭವನ್ನು ಹೊಂದಿದ್ದರೂ, ಸರ್ಕಾರವು ಬೆಳವಣಿಗೆಯನ್ನು ದೃಢವಾದ ತಳಹದಿಯಲ್ಲಿ ಇರಿಸಲು ವೆಚ್ಚವನ್ನು ಹೆಚ್ಚಿಸಿದ ನಂತರ ಹಣಕಾಸಿನ ಷೇರುಗಳು ಪ್ರಮುಖ ಲಾಭಗಳನ್ನು ಗಳಿಸಿದವು.ಬ್ಲೂ-ಚಿಪ್ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು73 ಶೇಕಡಾ ಏರಿಕೆಯಾಗಿ 17,705.85 ಕ್ಕೆ ತಲುಪಿದೆ, ಆದರೆ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಶೇಕಡಾ 0.76 ರಷ್ಟು ಏರಿಕೆ ಕಂಡು 59,311.88 ಕ್ಕೆ ತಲುಪಿದೆ. […]

Advertisement

Wordpress Social Share Plugin powered by Ultimatelysocial