ನಕ್ಸಲ್ ನಿಗ್ರಹ ದಳ, ಪೊಲೀಸ್ ಸಿಬ್ಬಂದಿಯ ವಿಶೇಷ ಆಹಾರ ಭತ್ಯೆ ದರ ಹೆಚ್ಚಳ

ಬೆಂಗಳೂರು: ನಕ್ಸಲ್ ನಿಗ್ರಹ ದಳ(ಎಎನ್‌ಎಫ್) ಯೋಧರು ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿರುವ ವಿಶೇಷ ಆಹಾರ ಭತ್ಯೆ ದರ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.ಈ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ ಸಲ್ಲಿಸಿದ್ದ ಕೋರಿಕೆಗೆ ಸ್ಪಂದಿಸಿದ ಸರ್ಕಾರ, ವಿಶೇಷ ಆಹಾರ ಭತ್ಯೆಯನ್ನು ಪರಿಷ್ಕರಿಸಿದೆ. 130 ರೂಪಾಯಿ ಇದ್ದ ಭತ್ಯೆ ದರವನ್ನ 300 ರೂ.ಗೆ ಹೆಚ್ಚಿಸಿದೆ.ಎಎನ್​ಎಫ್, ಪೊಲೀಸ್ ಸಿಬ್ಬಂದಿ ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಸಿಟಿ ಮತ್ತು ಗರುಡ ಪಡೆಯ ಯೋಧರಿಗೂ ವಿಶೇಷ ಆಹಾರ ಹೆಚ್ಚುವರಿ ಭತ್ಯೆ ಅನ್ವಯವಾಗಲಿದೆ.ಸರ್ಕಾರ ಹೊರಡಿಸಿರುವ ಭತ್ಯೆ ಹೆಚ್ಚಳ ಆದೇಶ, ನಿಮ್ಹಾನ್ಸ್ ಆಸ್ಪತ್ರೆಯ ಆಹಾರ ತಜ್ಞರು ನಿಗದಿಪಡಿಸಿರುವ 5600 kcal ನೀಡುವ ಪೌಷ್ಟಿಕ ಆಹಾರವನ್ನು ಭದ್ರತಾ ಪಡೆಗಳಿಗೆ ಒದಗಿಸಲು ಸಹಾಯಕವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಕದಿನ ಕ್ರಿಕೆಟ್: ಮಹತ್ವದ ಮೈಲುಗಲ್ಲು ತಲುಪಲು ವಿರಾಟ್ ಕೊಹ್ಲಿಗೆ ಆರು ರನ್ ಅಗತ್ಯ

Fri Feb 4 , 2022
  ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ರವಿವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್‌ನ ಮೇಲೆ ಎಲ್ಲರ ಚಿತ್ತ ಹರಿದಿದೆ.ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಸಮಯದಲ್ಲಿ ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ಶತಕದ ಬರವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದ್ದಾರೆ.ಯಾವುದೇ ಸ್ವರೂಪದಲ್ಲಿ ಎರಡು ವರ್ಷಗಳಲ್ಲಿ ಮೂರಂಕ ಅಂಕಿಗಳನ್ನು ತಲುಪಲು ವಿಫಲರಾಗಿದ್ದಾರೆ. 33 ರ ಹರೆಯದ ಕೊಹ್ಲಿ ವಿಂಡೀಸ್ ವಿರುದ್ಧದ ಏಕದಿನ […]

Advertisement

Wordpress Social Share Plugin powered by Ultimatelysocial