ನಂಜನಗೂಡು ತಾಲೂಕು24 ಮನೆ ತೆಲುಗು ಶೆಟ್ಟರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಪಟ್ಟಣದ ಗುರು ಭವನದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರ್ಷವರ್ಧನ್ ಹಾಗೂ ವೇದಿಕೆ ಮೇಲಿನ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು

ಬಳಿಕ ಶಾಸಕ ಹರ್ಷವರ್ಧನ್ ಮಾತನಾಡಿ ಚುನಾವಣಾ ಸಮಯದಲ್ಲಿ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳಿಗೆ ಭರವಸೆ ನೀಡಿದಂತೆ ಸ್ಪಂದಿಸಿದ್ದೇನೆ ಕಳಲೆಯಲ್ಲಿ ತಮ್ಮ ಸಮಾಜದವರು ಕುಡಿಯುವ ನೀರಿಗೆ ತೊಂದರೆ ಇದೆ ಎಂದಾಗ ಟ್ಯಾಂಕ್ ನಿರ್ಮಾಣ ಮಾಡಿಕೊಟ್ಟಿದ್ದೇನೆ ಅಲ್ಲದೆ ತಮ್ಮ ಸಮಾಜಕ್ಕೆ ಎಂಟು ಗುಂಟೆ ಜಮೀನು ನೀಡಿ ಅನುದಾನ ನೀಡುವ ಮೂಲಕ ಸುಸಜ್ಜಿತ ಸಮುದಾಯ ಭವನ ಮಾಡಿಕೊಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಂಗನಾಯಕ ಮಾತನಾಡಿ ಸಮಾಜದಲ್ಲಿ ಹಿಂದುಳಿದ ವರ್ಗಗಳು ಬೇರೆ ಯಾವುದೇ ಕ್ಷೇತ್ರದಲ್ಲಿ ಪೈಪೋಟಿ ನೀಡಲು ಸಾಧ್ಯವಿಲ್ಲ ಶಿಕ್ಷಣದಲ್ಲಿ ಮಾತ್ರ ಪೈಪೋಟಿ ನೀಡಲು ಸಾಧ್ಯ ಹಾಗಾಗಿ ಹಿಂದುಳಿದ ಸಮಾಜದವರಾದ ತಾವು ಮಕ್ಕಳಿಗೆ ಹೆಚ್ಚು ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು

ಇದೇ ಸಂದರ್ಭ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರುಗಳಿಗೆ ಸಂಘದ ವತಿಯಿಂದ ಸನ್ಮಾನ ನೀಡಿ ಅಭಿನಂಧಿಸಲಾಯಿತು

ಹಾಗೆಯೇ ವೇದಿಕೆ ಮೇಲಿನ ಗಣ್ಯರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಜಿ ಪಂ ಮಾಜಿ ಸದಸ್ಯ ಮಹದೇವ್ ವಿಶ್ವನಾಥ ಶೆಟ್ಟಿ ತೋಟಪ್ಪ ಉಮೇಶ್ ಬಸವರಾಜ್ ಶೆಟ್ಟಿ ಮಹದೇವಸ್ವಾಮಿ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಒಕ್ಕಲಿಗರ ಬಗ್ಗೆ ಎಚ್ಚರಿಕೆಯಿಂದ ಮಾತಾಡಿ: ಅಶೋಕ್ ವಾರ್ನಿಂಗ್

Sun Jul 24 , 2022
ಬೆಂಗಳೂರು: ಒಕ್ಕಲಿಗರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಿ. ಒಕ್ಕಲಿಗರು ಅಷ್ಟೇನೂ ಚೀಪ್ ಅಲ್ಲ, ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪದೇಪದೇ ಒಕ್ಕಲಿಗ ಜಾತಿ ವಿಚಾರ ಬೀದಿಗೆ ತಂದು ರಂಪಾಟ ಮಾಡಲಾಗುತ್ತಿದೆ. ಇದರಿಂದ ಒಕ್ಕಲಿಗ ಸಮುದಾಯ, ಎಲ್ಲಾ ಸ್ವಾಮೀಜಿಗಳಿಗೆ ನೋವಾಗಿದೆ. ರಾಜಕೀಯಕ್ಕಾಗಿ ಒಕ್ಕಲಿಗ ಸಮುದಾಯ ದುರ್ಬಳಕೆಯಾಗುತ್ತಿದೆ. ಡಿ.ಕೆ. ಶಿವಕುಮಾರ್ ಮತ್ತು ಜಮೀರ್ ಅಹಮದ್ ಖಾನ್ ಗೆ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ. ಒಕ್ಕಲಿಗ ಸಮುದಾಯ […]

Advertisement

Wordpress Social Share Plugin powered by Ultimatelysocial