ಕನ್ನಡ ಕಿರುತೆರೆಯ ಹೆಸರಾಂತ ನಿರೂಪಕ ನಿರಂಜನ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ನ್ನಡ ಕಿರುತೆರೆಯ ಹೆಸರಾಂತ  ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ರಿಯಾಲಿಟಿ ಶೋಗಳು ಕೂಡ ಹೆಚ್ಚಾಗಿವೆ. ಆದ್ದರಿಂದಲೇ ಈಗ ಒಂದು ಬೆಳವಣಿಗೆ ಆಗಿದೆ. ಒಂದೇ ಚಾನಲ್​ನಲ್ಲಿ ಎರಡು  ಶೋಗಳನ್ನ ಒಬ್ಬರೆ ನಡಿಸಿಕೊಟ್ರೆ ಹೇಗೆ?
ಈ ಒಂದು ಪ್ರಶ್ನೆಗೆ ಉತ್ತರವನ್ನ ಆ ಚಾನಲ್ ಹುಡುಕಿಕೊಂಡಿದೆ. ಅದಕ್ಕೇನೆ ನಮ್ಮಮ್ಮ  ಸೂಪರ್ ಸ್ಟಾರ್ ಸೀಸನ್-2 ನಿರಂಜನ್ ಜಾಗಕ್ಕೆ ನಿರೂಪಕಿ ಜಾಹ್ನವಿ ಈಗ ಬಂದಿದ್ದಾರೆ. ಇದರ ಬಗ್ಗೆ ಸ್ವತಃ ನಿರಂಜನ್  ನ್ಯೂಸ್-18 ಕನ್ನಡ ಡಿಜಿಟಲ್​ಗೂ​ ಮಾತನಾಡಿದ್ದಾರೆ. ಏನ್​ ಹೇಳಿದ್ದಾರೆ? ಆ ಎಲ್ಲ ವಿವರ ಇಲ್ಲಿದೆ .
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಸೂಪರ್ ಆಗಿದೆ. ಇದರ ನಿರೂಪಕ ನಿರಂಜನ್ ಕೂಡ ನೋಡುಗರನ್ನ ಎಂಟರಟೈನ್ ಮಾಡಿದ್ದಾರೆ. ಪ್ರತಿ ಸಂಚಿಕೆಯಲ್ಲೂ ಹೊಸ ರೀತಿಯಲ್ಲಿಯೇ ಜನರನ್ನ ನಗಿಸೋ ಕೆಲಸವನ್ನೂ ಮಾಡಿದ್ದಾರೆ. ನಿರೂಪಣೆ ಮತ್ತು ವಿಡಂಬನೆ ಅಂತೀವಲ್ಲ, ಹಂಗೆ ಎರಡನ್ನ ಮೆಂಟೇನ್ ಮಾಡುತ್ತಲೇ ಜನರನ್ನ ಎಂಟರಟೈನ್​ ಮಾಡೋ ನಿರೂಪಕ ನಿರಂಜನ್. ಕಳೆದ ಎರಡು ತಿಂಗಳಿನಿಂದಲೂ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ನಡೆಸಿಕೊಡ್ತಾಯಿದ್ದರು.
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಆಯಂಕರ್ ಬದಲಾಗಿದ್ದೇಕೆ?
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ನಿರೂಪಕ ನಿರಂಜನ್ ಬದಲಾಗಿರೋದೇಕೆ? ಈ ಒಂದು ಪ್ರಶ್ನೆಯನ್ನ ನಿರೂಪಕ ನಿರಂಜನ್​ಗೆ ಕೇಳಿದ್ರೆ ಏನ್ ಹೇಳ್ತಾರೆ ಗೊತ್ತೇ. ನಿರಂಜನ್ ಮಾತಿನ ಒಟ್ಟು ತಾತ್ಪರ್ಯ ಇಲ್ಲಿದೆ .
ಗಿಚ್ಚಿ ಗಿಲಿಗಿಲಿ ಸೀಸನ್-2 ಶುರು ಆಗಿದೆ. ಇದಕ್ಕೆ ನಾನೇ ಬೇಕು ಅನ್ನೋ ಬೇಡಿಕೆನೂ ಹೆಚ್ಚು ಇತ್ತು. ಈ ಒಂದು ಕಾರಣಕ್ಕೇನೆ ನಾನು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್​-2 ನಿರೂಪಣೆಯಿಂದ ಈಗ ಗಿಚ್ಚಿ ಗಿಲಿಗಿಲಿ ಸೀಸನ್-2ಗೆ ಬಂದಿದ್ದೇನೆ.
ಇದು ನನ್ನ ನಿರ್ಧಾರ ಅಲ್ಲವೇ ಅಲ್ಲ. ನಮ್ಮಮ್ಮ ಸೂಪರ್ ಸ್ಟಾರ್-2 ಹಾಗೂ ಗಿಚ್ಚಿ ಗಿಲಿಗಿಲಿ ಎರಡೂ ಒಂದೇ ಚಾನಲ್​ನಲ್ಲಿಯೇ ಪ್ರಸಾರ ಆಗುತ್ತಿವೆ. ಈ ಒಂದು ಕಾರಣಕ್ಕೇನೆ ಚಾನಲ್​ ನನ್ನನ್ನು ನಮ್ಮಮ್ಮದಿಂದ ಗಿಚ್ಚಿ ಗಿಲಿಗಿಲಿ-2ಗೆ ಬರುವಂತೆ ನಿರ್ಧಾರ ತೆಗೆದಕೊಂಡಿದೆ ಎಂದು ನಿರಂಜನ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.
ಗಿಚ್ಚಿ ಗಿಲಿಗಿಲಿ-2 ಫಸ್ಟ್ ಎಪಿಸೋಡ್ ಸೂಪರ್!
ಗಿಚ್ಚಿ ಗಿಲಿಗಿಲಿ-2 ಮೊದಲ ಎಪಿಸೋಡ್ ಚಿತ್ರೀಕರಣ ಆಗಿದೆ. ಪ್ರೊಮೋ ಕೂಡ ರಿಲೀಸ್ ಆಗಿದೆ. ಸಖತ್ ಆಗಿಯೇ ಈ ಒಂದು ಎಪಿಸೋಡ್ ಬಂದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ ಕುಮಾರ್ ಈ ಒಂದು ಸೀಸನ್​ಗೂ ಬಂದು ಹೋಗಿದ್ದಾರೆ.ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಆಯಂಕರ್ ಬದಲಾಗಿದ್ದೇಕೆ?
ಗಿಚ್ಚಿ ಗಿಲಿಗಿಲಿ ಸೀಸನ್​-1 ನಿರೂಪಣೆಯನ್ನ ಈ ಹಿಂದೆ ನಿರಂಜನ್​ ಅವರೇ ಮಾಡಿದ್ದರು. ಈಗ ಅದೇ ಜರ್ನಿ ಗಿಚ್ಚಿ ಗಿಲಿಗಿಲಿ ಸೀಸನ್-2 ಗೂ ಮುಂದುವರೆದಿದೆ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-1 ಅನ್ನ ಅನೂಪಮ ಗೌಡ ಮಾಡಿದ್ದರು. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್​-2 ಅನ್ನ ನಿರಂಜನ್ ನಿರೂಪಿಸಿದ್ದರು. ಅದೇ ಜಾಗಕ್ಕೆ ಈಗ ನಿರೂಪಕಿ ಜಾಹ್ನವಿ ಬಂದಿದ್ದಾರೆ.
ಒಂದೇ ಚಾನಲ್-ಎರಡು ಪ್ರೊಡಕ್ಷನ್ ಹೌಸ್​ನ ಶೋ​!
ನಮ್ಮಮ್ಮ ಸೂಪರ್ ಸ್ಟಾರ್​-2 ಅನ್ನ ಸೃಜನ್ ಲೋಕೇಶ್ ಪ್ರೋಡಕ್ಷನ್ ಹೌಸ್ ನಿರ್ಮಿಸುತ್ತಿದೆ. ಅದೇ ರೀತಿ ಗಿಚ್ಚಿ ಗಿಲಿಗಿಲಿ ಸೀಸನ್-2 ಅನ್ನ ಶಿವಧ್ವಜ ಪ್ರೋಡಕ್ಷನ್ ಹೌಸ್ ನಿರ್ಮಿಸುತ್ತಿದೆ. ಹೀಗೆ ಎರಡು ಪ್ರೋಡಕ್ಷನ್ ಹೌಸ್​ ಜೊತೆಗೆ ಕೆಲಸ ಮಾಡಿರೋ ನಿರಂಜನ್ ತಮ್ಮ ಬೇಡಿಕೆಯನ್ನ ಎರಡೂ ಕಡೆಗೆ ಉಳಿಸಿಕೊಂಡಿದ್ದಾರೆ.ಆ ಹಿನ್ನೆಲೆಯಲ್ಲಿಯೇ ಈಗ ಅಷ್ಟೇ ಸುಲಭವಾಗಿಯೇ ನಿರಂಜನ್, ಒಂದು ಶೋದಿಂದ ಇನ್ನೊಂದು ಶೋಗೆ ಯಾವುದೇ ತೊಂದರೆ ಇಲ್ಲದೇ ಬಂದಿದ್ದಾರೆ. ತಮ್ಮ ಎಂದಿನ ವಿಶೇಷ ಶೈಲಿಯ ನಿರೂಪಣೆಯನ್ನ ಈಗ ಮುಂದುವರೆಸಿದ್ದಾರೆ.
ಇನ್ನುಳಿದಂತೆ ಗಿಚ್ಚಿ ಗಿಲಿಗಿಲಿ-2 ಇದೇ ಶನಿವಾರ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಹೊಸ ರೀತಿಯಲ್ಲGಯೇ ಮತ್ತೊಮ್ಮೆ ಜನರನ್ನ ರಂಜನಿಸೋಕೂ ಈಗ ಬರ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದು ರಣಜಿಗೆ ಮಾಡಿದ ಅವಮಾನ.

Sat Jan 14 , 2023
        ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾ ಪಡೆಯನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ ನೇತೃತ್ವದ ಈ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಸುದೀರ್ಘ ಕಾಲದಿಂದ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯುವ ಸೂರ್ಯಕುಮಾರ್ ಯಾದವ್ ಕನಸು ನನಸಾಗಿದೆ. ಮತ್ತೊಂದೆಡೆ ರಿಷಭ್ ಪಂತ್ ವಿಶ್ರಾಂತಿಯಲ್ಲಿರುವ ಕಾರಣ […]

Advertisement

Wordpress Social Share Plugin powered by Ultimatelysocial