ಹೊಸ ಬಾಂಬ್ ಸಿಡಿಸಿ ಡಿಕೆ ರವಿ ಸಾವಿನ ಸಿಬಿಐ ತನಿಖಾ ವರದಿ ಹಂಚಿಕೊಂಡಿದ್ದಾರೆ.

ಬೆಂಗಳೂರು :ಐಪಿಎಸ್ ಡಿ.ರೂಪ ಮತ್ತು ಐಎಎಸ್ ರೋಹಿಣಿ ನಡುವಿನ ಹಾದಿ ಬೀದಿ ರಂಪಾಟದ ನಡುವೆ 8 ವರ್ಷದಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಡಿಕೆ ರವಿ ಸಾವು ಮತ್ತು ಸುದ್ದಿಯಾಗುತ್ತಿದೆ. ಡಿ. ರೂಪ ಪದೇ ಪದೇ ರವಿ ಹೆಸರನ್ನ‌ ಬಳಸಿರೋದಕ್ಕೆ ಒಂದಷ್ಟು ಪರ ವಿರೋಧದ ಚರ್ಚೆಗಳಾಗುತ್ತಿವೆ.

ಈ ಮಧ್ಯೆ ಕಾಂಗ್ರೆಸ್ ಮುಖಂಡ ವಕೀಲ ಸೂರ್ಯ ಮುಕುಂದರಾಜ್ಹೊಸ ಬಾಂಬ್ ಸಿಡಿಸಿ ಡಿಕೆ ರವಿ ಸಾವಿನ ಸಿಬಿಐ ತನಿಖಾ ವರದಿ ಹಂಚಿಕೊಂಡಿದ್ದಾರೆ.

“ಸಿಂಧೂರಿಯ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿರುವ ಕನ್ನಡ ಮಣ್ಣಿನ ಐಪಿಎಸ್ ಅಧಿಕಾರಿ ರೂಪ ಅವರ ನಡೆಯನ್ನು ಪ್ರಶ್ನೆ ಮಾಡುವವರು ಸಿಬಿಐ ಕೊಟ್ಟಿರುವ ಡಿಕೆ ರವಿ ಸಾವಿಗೆ ಕಾರಣವಾದ ಅಂಶಗಳ ವರದಿಯನ್ನು ಓದಬೇಕು. ಡಿಕೆ ರವಿ ಸಾವನ್ನು ಇಂದಿಗೂ ರಾಜಕೀಯ ಲಾಭಕ್ಕಾಗಿ ಬಿಜೆಪಿಗರು ಬಳಸಿಕೊಳ್ಳುತ್ತಿದ್ದಾರೆ. ಆತನ ಸಾವಿನಿಂದ ಅತಿ ಹೆಚ್ಚು ತೇಜೋವಧೆ, ಅವಮಾನಕ್ಕೀಡಾದವರು ಕುಸುಮ ಹನುಮಂತರಾಯಪ್ಪ ಅವರ ಕುಟುಂಬ ಮತ್ತು ಸಿದ್ದರಾಮಯ್ಯ. ಪೋಸ್ಟ್ ಟ್ರೂಥ್ ಕಾಲಘಟ್ಟದಲ್ಲಿ ರವಿಯ ವೈಯಕ್ತಿಕ ಪ್ರೇಮ ಪ್ರಕರಣ ಮುನ್ನೆಲೆಗೆ ಬರಲೇ ಇಲ್ಲ. ಆತ ಸಾವಿಗೀಡಾದ ನಂತರ ರೋಹಿಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಬೇಕಿತ್ತು. ಆದರೆ ರೋಹಿಣಿಯ ಅದೃಷ್ಟವೋ ಏನೋ ಆಕೆಯ ವಿರುದ್ಧ ಪ್ರಕರಣ ದಾಖಲಾಗಿಲಿಲ್ಲ. ಆ ನೋವನ್ನು ಕುಸುಮಾ ಮತ್ತು ಸಿದ್ದರಾಮಯ್ಯ ಸರ್ಕಾರ ಅನುಭವಿಸಬೇಕಾಯಿತು. ಒಬ್ಬ ಅಧಿಕಾರಿಯ ಸಾವಿನ ನಂತರವೂ ಬದಲಾಗದ ಸಿಂಧೂರಿ, ತನ್ನ ಚೆಲ್ಲಾಟವನ್ನು ಮುಂದುವರೆಸಿದ್ದಾರೆ. ಈಗ ರೂಪ ಅದಕ್ಕೆ ಅಂತ್ಯವಾಡುತ್ತಿದ್ದಾರೆ.”

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಯಾಣ ಕರ್ನಾಟಕ ಪಿಂಚಣಿದಾರರಿಗೆ ಗುಡ್ ನ್ಯೂಸ್!

Tue Feb 21 , 2023
ಬೆಂಗಳೂರು: ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು, ಹೊಸಪೇಟೆ(ವಿಜಯನಗರ) ಮತ್ತು ಕೊಪ್ಪಳ ಜಿಲ್ಲೆಗಳಿಗೆ ಒಳಗೊಂಡಂತೆ ಪಿಂಚಣಿದಾರರ ಕುಂದುಕೊರತೆ ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇದೇ ಫೆಬ್ರವರಿ 22 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಂಚಣಿ ಅದಾಲತ್‍ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯ ಪಿಂಚಣಿದಾರರು ನೇರವಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ […]

Advertisement

Wordpress Social Share Plugin powered by Ultimatelysocial