ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ.

ವದೆಹಲಿ: ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ರಾಷ್ಟ್ರದ ಮೂಲೆ ಮೂಲೆಗಳಲ್ಲೂ ಪ್ರತಿಭಾವಂತರಿದ್ದಾರೆ. ಆದರೆ, ಅವಕಾಶ ಸೀಮಿತವಾಗಿದೆ. ಹೀಗಾಗಿ ಎಷ್ಟೋ ಪ್ರತಿಭೆಗಳು ಎಲೆಮರೆ ಕಾಯಿಯಂತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದ್ದು, ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ.

ಇದೀಗ ವ್ಯಕ್ತಿಯೊಬ್ಬ ತನ್ನ ಸುಮಧುರ ಗಾಯನದಿಂದ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

24 ವರ್ಷದ ಯುವಕ ಜೈಲಿನಲ್ಲಿದ್ದುಕೊಂಡೇ ಹಾಡಿರುವ ಭೋಜ್‌ಪುರಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ, ಯುವಕನನ್ನು ಕನ್ನಯ್ಯ ಕುಮಾರ್ ಎಂದು ಗುರುತಿಸಲಾಗಿದೆ. ಮದ್ಯ ಸೇವಿಸಿದ್ದಕ್ಕಾಗಿ ಮತ್ತು ಬಿಹಾರದ ಮದ್ಯ ನಿಷೇಧ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಆದರೆ, ಕನ್ನಯ್ಯ, ಜೈಲಿನಲ್ಲಿದ್ದುಕೊಂಡೇ ಭೋಜ್‌ಪುರಿ ಹಾಡನ್ನು ಸುಂದರವಾಗಿ ಹಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ವಿಡಿಯೋವನ್ನು ಡಾ. ಶಲಭ್ ಮಣಿ ತ್ರಿಪಾಠಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಕುಮಾರ್ ಜನಪ್ರಿಯ ಭೋಜ್‌ಪುರಿ ಹಾಡನ್ನು ಹಾಡುವುದನ್ನು ಕೇಳಬಹುದು, ‘ದರೋಗಾಜಿ ಹೋ.. ಸೋಚಿ, ಸೋಚಿ ಜಿಯಾ ಹಮ್ರೋ ಕಹೆ ಘಬ್ರತಾ’ ಎಂಬ ಭೋಜಪುರಿ ಹಾಡನ್ನು ಹಾಡಿದ್ದಾರೆ.

ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕನ್ನಯ್ಯ ಧ್ವನಿಗೆ ಫಿದಾ ಆಗಿದ್ದಾರೆ. ಅನನ್ಯ ಪ್ರತಿಭೆಯು ಅನೇಕ ಸಂಗೀತ ಪ್ರೇಮಿಗಳ ಗಮನವನ್ನು ಸೆಳೆದಿದೆ. ಹಾಡು ಕೇಳಿ ಸಂಗೀತ ಉದ್ಯಮದಿಂದ ಅನೇಕ ಆಫರ್​ಗಳು ಬರುತ್ತಿವೆ. ಆತನನ್ನು ಬಂಧಿಸಿದ ಜೈಲು ಅಧಿಕಾರಿಗಳು ಕೂಡ ಆತನ ಕೌಶಲ್ಯವನ್ನು ಶ್ಲಾಘಿಸಿ, ವಾಹ್ ವಾಹ್ ಎಂದು ಹೇಳುವುದನ್ನು ಕೇಳಬಹುದು.

ವಿಡಿಯೋ ಶೇರ್​ ಮಾಡಿದಾಗಿನಿಂದ ಈವರೆಗೂ 8 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 8 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ ಗಾಯಕ ಅಂಕಿಒತ್​ ತಿವಾರಿ ಕೂಡ ಧ್ವನಿಗೆ ಫಿದಾ ಆಗಿದ್ದು, ತನ್ನ ಮ್ಯೂಸಿಕ್​ ಕಂಪನಿಗೆ ಹಾಡಲು ಆಫರ್​ ನೀಡಿದ್ದಾರೆ. ಅಲ್ಲದೆ, ಜೈಲಿನಿಂದ ಬಿಡುಗಡೆ ಮಾಡಿಸಲು ಕಾನೂನು ನೆರವು ನೀಡುವುದಾಗಿಯೂ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾಣು ಮೊಂಡಲ್ ಅವರು ಲತಾ ಮಂಗೇಶ್ಕರ್ ಅವರ ‘ಯೇ ಪ್ಯಾರ್ ಕಾ ನಗ್ಮಾ ಹೈ’ ಹಾಡಿನ ಮೂಲಕ ರಾತ್ರೋರಾತ್ರಿ ಮನ್ನಣೆ ಗಳಿಸಿದ್ದರು. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡಿದ ವೈರಲ್​ ಆಗಿ, ಬಾಲಿವುಡ್​ನಿಂದ ಆಫರ್​ಗಳು ಬಂದಿದ್ದವು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಕಾಣಿಸಿದ್ದು ಚಿರತೆ ಅಲ್ಲ, ಕಾಡುಬೆಕ್ಕು.

Sat Jan 14 , 2023
ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಜನರ ನಿದ್ದೆಗೆಡಿಸಿದ್ದು,ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿದ್ದು, ವಿದ್ಯಾರ್ಥಿಗಳು ಹೆದರಿದ್ದರು. ಆದರೆ ಇದು ಚಿರತೆಯೇ ಅಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣೆ ಕಾರ್ಯಕತರು ಮಾಹಿತಿ ನೀಡಿದ್ದಾರೆ. ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಡುಬೆಕ್ಕುಗಳು ಕಂಡುಬರುತ್ತವೆ. ಚಿರತೆ ಎಂದು ಹೇಳಲಾದ ಕಾಡುಬೆಕ್ಕಿನ ಸಿಸಿಟಿವಿ ಫೂಟೇಜ್ ಎಲ್ಲೆಡೆ ವೈರಲ್ ಆಗಿದ್ದು, ಕ್ಯಾಂಪಸ್ ನಿವಾಸಿಗಳು ಆತಂಕಕ್ಕೀಡಾಗಿದ್ದರು. ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಜ್ಞರು […]

Advertisement

Wordpress Social Share Plugin powered by Ultimatelysocial