ಕರ್ನಾಟಕದಲ್ಲಿ ಮತ್ತೆ ಮುಂಗಾರು ಆರ್ಭಟಿಸವು ಮನ್ಸೂಚನೆ

 

ಬೆಂಗಳೂರು ಜುಲೈ 28: ಕರ್ನಾಟಕದಲ್ಲಿ ಮತ್ತೆ ಮುಂಗಾರು ಆರ್ಭಟಿಸವು ಮನ್ಸೂಚನೆ ನೀಡಿದ್ದು, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಜನರಲ್ಲಿ ಮಳೆ ಆತಂಕ ಎದುರಾಗಿದೆ.

ಹವಾಮಾನಗಳಲ್ಲಿ ಉಂಟಾದ ವೈಪರಿತ್ಯಗಳ ಪರಿಣಾಮವಾಗಿ ಮುಂದಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿಯಿಂದ ಅತೀ ಬಾರಿ ಮಳೆ ಬೀಳಲಿದೆ.

ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆ ಆಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಜೂನ್ ಅಂತ್ಯಕ್ಕೆ ಮುಂಗಾರಿನ ಅಬ್ಬರ ಆರಂಭವಾಗಿ ಸುಮಾರು 15-20ದಿನ ಕರಾವಳಿ, ಮಲೆನಾಡು, ಉತ್ತರ ಒಳನಾಡಿನಾದ್ಯಂತ ಧಾರವಾಕಾವಾಗಿ ಸುರಿದಿತ್ತು. ಪ್ರವಾಹ, ನೆರೆ ಭೀತಿ ಸೃಷ್ಟಿಸಿ ಕೆಲವು ದಿನಗಳಿಂದ ಮಳೆ ಕ್ಷಿಣಿಸಿತ್ತು. ಇದೀಗ ಮತ್ತೆ ಮುಂದಿನ ಐದು ದಿನ (ಆಗಸ್ಟ್ 2ರವರೆಗೆ) ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಕರಾವಳಿ-ಮಲೆನಾಡಿಗೆ ಅತಿ ಭಾರಿ ಮಳೆಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 29ರಂದು ಒಂದು ಅತೀ ಭಾರಿ ಮಳೆ ಸುರಿಯಲಿದ್ದು, ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಈ ಭಾಗದಲ್ಲಿ ಈ ವೇಳೆ 11.5ಸೆಂ.ಮೀ.ನಿಂದ 20ಸೆಂ.ಮೀ.ಮಷ್ಟು ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.

ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ

ಜುಲೈ 29ರ ನಂತರ ದಿನಗಳಲ್ಲಿ ಮಲೆನಾಡಿನ ಮಡಿಕೇರಿ, ಹಾಸನ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಜೋರು ಮಳೆ ಆಗುವ ನಿರೀಕ್ಷೆ ಇದು ನಾಲ್ಕು ದಿನ (ಆಗಸ್ಟ್ 2) ‘ಯೆಲ್ಲೋ ಅಲರ್ಟ್’ ಮತ್ತುಕರಾವಳಿ ಮೂರು ಜಿಲ್ಲೆಗಳಿಗೆ ಜುಲೈ 30ರಂದು ಒಂದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಕರಾವಳಿಯಲ್ಲಿ ಗಾಳಿಯ ವೇಗೆ ಹೆಚ್ಚಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ-ಉತ್ತರ ಒಳನಾಡಿಗೂ ಭಾರಿ ಮಳೆ

ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಬಹುತೇಕ ಈಭಾಗದ ಎಲ್ಲ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ನಿರೀಕ್ಷೆ ಇದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಆಗಸ್ಟ್ 2ರವರೆಗೆ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಜುಲೈ 29ರಂದು ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿಗೆ ಉತ್ತಮ ಮಳೆ ನಿರೀಕ್ಷೆ ಇದೆ ಎನ್ನಲಾಗಿದೆ.

ಹವಾಮಾನ ವೈಪರಿತ್ಯದಿಂದ ಮತ್ತೆ ಮಳೆ ಆತಂಕ

ಉತ್ತರ ಒಳನಾಡಿನಿಂದ ಕನ್ಯಾಕುಮಾರಿವರೆಗೆ ಭೂಮಿ ಮೇಲ್ಮೈನಲ್ಲಿ ಗಾಳಿ ತೀವ್ರಗೆ (ಸ್ಟ್ರಫ್) ಹೆಚ್ಚಾಗಿದ್ದು, ಇದು ಸಮುದ್ರ ಮಟ್ಟದಿಂದ ಸುಮಾರು 900ಮೀಟರ್ ಎದತ್ತದಲ್ಲಿದೆ. ಅಲ್ಲದೇ ತಮಿಳುನಾಡು ರಾಜ್ಯದ ಒಳನಾಡಿನ ಭಾಗದಲ್ಲಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ತೀವ್ರಗೊಂಡಿದೆ. ಇದು ಸಮುದ್ರ ಮಟ್ಟದಿಂದ 1.5ಕಿ.ಮೀ.ಇರಲಿದೆ.

ಇವುಗಳ ಪ್ರಭಾವ ಮುಂದಿನ ಐದು ದಿನಗಳವರೆಗೆ ಇರಲಿದೆ. ಅಲ್ಲಿವರೆಗೆ ರಾಜ್ಯದ ಅನೇಕ ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಮತ್ತು ಅತೀ ಭಾರಿ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿ ಮತ್ತು ವಿಜ್ಞಾನಿ ಪ್ರಸಾದ್ ಅವರು ಮಾಹಿತಿ ನೀಡಿದರು.

ಈಗಾಗಲೇ ಕಳೆದ ಬಾರಿ ಬಂದ ಮಳೆಯಿಂದಾಗಿ ಕರ್ನಾಟಕ ಕರಾವಳಿ ಹಾಗೂ ಮಲೆನಾಡಿ ಜಿಲ್ಲೆಗಳ ಅಕ್ಷರಶಃ ತತ್ತರಿಸಿದ್ದವು. ಕೆಲವು ಪ್ರದೇಶಗಳು ದ್ವೀಪದಂತಾಗಿದ್ದವು. ರಸ್ತೆ, ಗುಡ್ಡಗಳು, ಮನೆ ಹಾಗೂ ಸೇತುವೆಗಳು ಕುಸಿದು ಜನ ಜೀವನವೇ ಅಸ್ತವೆಸ್ತವಾಗಿತ್ತು. ಉತ್ತರ ಒಳನಾಡಿನ ನದಿ ತೀರದ ಪ್ರದೇಶ ಗ್ರಾಮವಾಸಿಗಳು ನೆರೆ ಭೀತಿ ಅನುಭವಿಸಿದ್ದರು. ಈ ಭಾರಿಯ ಮಳೆ ಮನ್ಸೂಚನೆ ಮತ್ತೆ ಆತಂಕ ಮೂಡಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಖ್ಯಮಂತ್ರಿಗಳೇ ರಾಜಧರ್ಮ ಪಾಲಿಸಿ.‌ ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಅಯೋಗ್ಯರಾಗಿ ಬಿಡುತ್ತೀರಿ. ಮುನೀರ್ ಕಾಟಿಪಳ್ಳ ಆಗ್ರಹ

Thu Jul 28 , 2022
  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಲಿದ್ದು, ಇದೇ ವೇಳೆ ಅದೇ ಗ್ರಾಮದಲ್ಲಿ ವಾರದ ಹಿಂದಷ್ಟೇ ಹತ್ಯೆಗೀಡಾಗಿರುವ ಮಹಮ್ಮದ್ ಮಸೂದ್ ಮನೆಗೂ ಭೇಟಿ ನೀಡಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. ‘ಬೊಮ್ಮಾಯಿಯವರು ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ. ಆರು ಕೋಟಿ ಕನ್ನಡಿಗರಿಗೂ ಅವರೇ ಮುಖ್ಯಮಂತ್ರಿ. ಬಿಜೆಪಿ ಪಕ್ಷದವರಿಗೆ, ಒಂದು ಮತ ಧರ್ಮಕ್ಕೆ ಮಾತ್ರ ಮುಖ್ಯಮಂತ್ರಿ […]

Advertisement

Wordpress Social Share Plugin powered by Ultimatelysocial