ಕ್ರಿಸ್ಮಸ್ – ಹೊಸ ವರ್ಷ ಆಚರಣೆಗೆ ಕ್ರಮ ಪಾಲನೆ

ಕೋವಿಡ್ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆ ಸಂದರ್ಭ ಜನರು ಪಾಲಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಡಿ.30ರಿಂದ 2021ರ ಜ.2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಸೇರಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಸಾಮೂಹಿಕ ಕೂಟಗಳನ್ನು ನಿಷೇಧಿಸಿ ಆದೇಶ ಹೊರಡಿ ಸಿದೆ. ಆಚರಣೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಲಾಗಿದ್ದು, ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. .65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ..

 

 

ಇದನ್ನೂ ಓದಿ  :  ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ – ನಳಿನ್ ಕುಮಾರ್ ಕಟೀಲ್ ಆಕ್ರೋಶ

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ

Fri Dec 18 , 2020
ಕೊರೊನಾ ಸೋಂಕಿತರ ಪ್ರಕರಣ ಅಮೆರಿಕದಲ್ಲಿ ವ್ಯಾಪಕಗೊಂಡಿದೆ.ಒಂದೇ ದಿನದಲ್ಲಿ 2,45,000 ಪ್ರಕರಣ ದೃಢ ಮೃತಪಡುತ್ತಿರುವವರ ಸಂಖ್ಯೆ3 ಪಟ್ಟು ಹೆಚ್ಚು. ಹೊಸ ಸೋಂಕಿತರ ಸಂಖ್ಯೆ 6 ಪಟ್ಟು ಹೆಚ್ಚು.ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಅಮೆರಿಕದಲ್ಲಿ ಒಂದೇ ದಿನ 2 ಲಕ್ಷದ 45 ಸಾವಿರ ಪ್ರಕರಣಗಳು ದೃಢಪಟ್ಟಿದ್ದು, 3,600 ಮಂದಿ ಮೃತಪಟ್ಟಿದ್ದಾರೆ . 3 ತಿಂಗಳ ಹಿಂದೆ ಸೋಂಕಿನಿಂದಾಗಿ ಸಾವಿಗೀಡಾಗುತ್ತಿದ್ದವರಿಗಿಂತ ಈಗ ಮೃತಪಡುತ್ತಿರುವವರ ಸಂಖ್ಯೆ ಮೂರು […]

Advertisement

Wordpress Social Share Plugin powered by Ultimatelysocial