ಹಸಿರು ಇಂಧನವುʼ ಕೊನೆಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸದಿಲ್ಲಿ: ಐದು ವರ್ಷಗಳ ನಂತರ ದೇಶದ ವಾಹನಗಳಲ್ಲಿ ಪೆಟ್ರೋಲ್ ಬಳಕೆಯ ಅಗತ್ಯವನ್ನು ʼಹಸಿರು ಇಂಧನವುʼ ಕೊನೆಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಡಾ.ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ತಮ್ಮ ಭಾಷಣದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ಗಡ್ಕರಿ, ಹಸಿರು ಹೈಡ್ರೋಜನ್, ಎಥೆನಾಲ್ ಮತ್ತು ಇತರ ಹಸಿರು ಇಂಧನಗಳ ಬಳಕೆಗೆ ಒತ್ತು ಕೊಡುವಂತೆ ಸಲಹೆ ನೀಡಿದರು.

‘ಐದು ವರ್ಷಗಳ ನಂತರ ದೇಶದಿಂದ ಪೆಟ್ರೋಲ್ ಕಣ್ಮರೆಯಾಗುತ್ತದೆ ಎಂದು ನಾನು ಪೂರ್ಣ ನಂಬಿಕೆಯಿಂದ ಹೇಳಲು ಬಯಸುತ್ತೇನೆ. ನಿಮ್ಮ ಕಾರುಗಳು ಮತ್ತು ಸ್ಕೂಟರ್‌ಗಳು ಹಸಿರು ಹೈಡ್ರೋಜನ್, ಎಥೆನಾಲ್ ಫ್ಲೆಕ್ಸ್-ಇಂಧನ, ಸಿಎನ್‌ಜಿ ಅಥವಾ ಎಲ್‌ಎನ್‌ಜಿಯ ನೆರವಿನಿಂದ ಓಡಲಿದೆ’ ಎಂದು ಅವರು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಕೃಷಿ ಬೆಳವಣಿಗೆಯನ್ನು ಶೇಕಡಾ 12 ರಿಂದ 20 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕೃಷಿ ಸಂಶೋಧಕರು ಮತ್ತು ತಜ್ಞರಿಗೆ ಗಡ್ಕರಿ ಮನವಿ ಮಾಡಿದರು. “ಮಹಾರಾಷ್ಟ್ರದ ರೈತರು ಅತ್ಯಂತ ಪ್ರತಿಭಾವಂತರು, ಹೊಸ ಸಂಶೋಧನೆ ಮತ್ತು ತಂತ್ರಜ್ಞಾನದೊಂದಿಗೆ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಅಗತ್ಯವನ್ನು” ಒತ್ತಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಅಮರನಾಥದಲ್ಲಿ ಕನ್ನಡಿಗರು ಸುರಕ್ಷಿತ, ವಾಪಸ್ ಕರೆತರಲು ಅಧಿಕಾರಿ ನೇಮಕ: ಜ್ಞಾನೇಂದ್ರ

Sat Jul 9 , 2022
ಶಿವಮೊಗ್ಗ: ಅತಿವೃಷ್ಟಿಗೆ ಸಿಲುಕಿರುವ ಅಮರನಾಥದಲ್ಲಿನ ಕರ್ನಾಟಕದ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಅವರನ್ನು ಕರೆತರಲು ರಾಜ್ಯದಿಂದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಈಗಾಗಲೇ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ. ಒಬ್ಬರನ್ನೂ ಬಿಡದೇ ಸುರಕ್ಷಿತವಾಗಿ ಕರೆತರಲಿದ್ದೇವೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತನಾಡಲಿದ್ದೇವೆ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು. ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಖ್ಯಮಂತ್ರಿ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಅವಲೋಕಿಸಬೇಕು […]

Advertisement

Wordpress Social Share Plugin powered by Ultimatelysocial