ಬಾಲಿವುಡ್​ನಲ್ಲಿ ನುಸ್ರತ್​ ಬರುಚಾ ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ!

ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ‘ಸೋನು ಕೆ ಟಿಟ್ಟೂ ಕಿ ಸ್ವೀಟಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ಜನ್​​ಹಿತ್​ ಮೆ ಜಾರಿ’ ಸಿನಿಮಾದಲ್ಲಿ ಕಾಂಡೋಮ್​ ಸೇಲ್ಸ್​ ಎಕ್ಸಿಕ್ಯೂಟಿವ್ ಪಾತ್ರ ಮಾಡಿದ್ದಾರೆ.

ಕಲಾವಿದರು ಮಡಿವಂತಿಕೆ ಬಿಟ್ಟು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಂಡಾಗ ಟೀಕೆಗಳು ಎದುರಾಗುತ್ತವೆ. ಸುಸ್ರತ್ ವಿಚಾರದಲ್ಲೂ ಹೀಗೆಯೇ ಆಗಿದೆ. ಈ ಬಗ್ಗೆ ಅವರು ಬೇಸರ ತೋಡಿಕೊಂಡಿದ್ದಾರೆ.

ಕಥಾ ನಾಯಕಿ ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾಳೆ. ಅವಳಿಗೆ ಕಾಂಡೋಮ್ ಸೇಲ್ಸ್​ ಎಕ್ಸಿಕ್ಯೂಟಿವ್​ ಕೆಲಸ​ ಸಿಗುತ್ತದೆ. ಪ್ರತಿ ಮೆಡಿಕಲ್​ ಸ್ಟೋರ್​ಗೆ ಹೋಗಿ ಕಾಂಡೋಮ್​ ಮಾರುವ ಕೆಲಸ ಕಥಾ ನಾಯಕಿಯದ್ದು. ‘ಜನ್​​ಹಿತ್​ ಮೆ ಜಾರಿ’ ಚಿತ್ರದಲ್ಲಿ ಇದುವೇ ಹೈಲೈಟ್​. ಈ ಪಾತ್ರವನ್ನು ನುಸ್ರತ್ ನಿಭಾಯಿಸಿದ್ದಾರೆ. ಅವರ ಪಾತ್ರಕ್ಕೆ ನೆಗೆಟಿವ್ ಕಮೆಂಟ್​ಗಳು ಬರುತ್ತಿವೆ.

ಕೆಲ ದಿನಗಳ ಹಿಂದೆ ನುಸ್ರುತ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಜೀನ್ಸ್​ ಪ್ಯಾಂಟ್​ನ ಹಿಂದಿನ ಪಾಕೆಟ್​ನಲ್ಲಿ ಕಾಂಡೋಮ್​ ಕಾಣುವ ರೀತಿಯಲ್ಲಿ ಈ ಫೋಟೋ ಇತ್ತು. ಜನ್​​ಹಿತ್​ ಮೆ ಜಾರಿ’ ಸಿನಿಮಾದ ರಿಲೀಸ್ ಡೇಟ್​ ಘೋಷಣೆ ಮಾಡಲು ಈ ರೀತಿಯ ಪೋಸ್ಟರ್ ಸಿದ್ಧಪಡಿಸಲಾಗಿತ್ತು. ಆದರೆ, ಇದನ್ನು ನುಸ್ರತ್ ಫ್ಯಾನ್ಸ್ ಬೇರೆಯದೇ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಈ ಪೋಸ್ಟ್​ಗೆ ಬಂದ ಕೆಟ್ಟ ಕಮೆಂಟ್​ಗಳನ್ನು ಪಟ್ಟಿ ಮಾಡಿ ತೋರಿಸಿದ್ದಾರೆ ನುಸ್ರತ್.ವಿಡಿಯೋ ಒಂದನ್ನು ಹಂಚಿಕೊಂಡಿರುವ ನುಸ್ರತ್​, ‘ಎಲ್ಲರೂ ತಮ್ಮ ಪೋಸ್ಟ್​ಗೆ ಬಂದ ಬೆಸ್ಟ್ ಕಮೆಂಟ್​ ಸೆಲೆಕ್ಟ್ ಮಾಡುತ್ತಾರೆ. ಆದರೆ, ನಾನು ಇಲ್ಲಿ ಅತಿ ಕೆಟ್ಟ ಕಮೆಂಟ್​​ಗಳನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೇ ವಿಡಿಯೋದಲ್ಲಿ ಕೆಟ್ಟ ಕಮೆಂಟ್​ಗಳ ಪಟ್ಟಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್ 2 ನಂತರ ಭಾರತೀಯ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಪ್ರಶ್ನೆ,

Sat May 7 , 2022
 ಯಶ್ ನಟನೆಯ ಮುಂದಿನ ಸಿನಿಮಾ ಯಾವುದು? ನಿರ್ದೇಶಕರು ಯಾರು? ಯಾವ ಕಥೆಯನ್ನು ಅವರು ಒಪ್ಪಲಿದ್ದಾರೆ ಎನ್ನುವುದು. ಹಲವು ಬಾರಿ ಸ್ವತಃ ಯಶ್ ಅವರಿಗೆ ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಾಗಿ ‘ಕಥೆ ಗಟ್ಟಿಯಾಗುತ್ತಿದೆ. ದೊಡ್ಡದಾಗಿಯೇ ಕನಸು ಕಾಣುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಹೇಳುತ್ತೇನೆ’ ಎಂದು. ಇದರ ಹೊರತಾಗಿ ಅವರು ಬೇರೆ ಏನೂ ಹೇಳಿಲ್ಲ ಆದರೆ, ಯಶ್ ಮುಂದಿನ ಸಿನಿಮಾ ಕುರಿತಾಗಿ ಈಗಷ್ಟು ಸುದ್ದಿ ಸಿಕ್ಕಿವೆ. ಗಾಂಧಿನಗರದಲ್ಲಿ ಭಾರೀ ಬಜೆಟ್ ಚಿತ್ರಗಳನ್ನು ಮಾಡುತ್ತಿರುವ ಮತ್ತು ಆರ್.ಆರ್.ಆರ್ […]

Advertisement

Wordpress Social Share Plugin powered by Ultimatelysocial