‘ಕೆಜಿಎಫ್ 2’ ಕಲೆಕ್ಷನ್ ಬಿತ್ತು: 42ನೇ ದಿನಕ್ಕೆ ಗಳಿಸಿದ್ದೆಷ್ಟು?

ಕನ್ನಡದ ಒಂದು ಸಿನಿಮಾ ಇಡೀ ಜಗ್ಗತ್ತಿನ ಗಮನ ಸೆಳೆದಿದೆ. ಚಿತ್ರ ರಿಲೀಸ್ ಆದ ಮೂರೇ ದಿನದಲ್ಲಿ ಭವಿಷ್ಯ ಬರೆಯುವ ಕಾಲ ಇದು. ಆದರೆ ಕೆಜಿಎಫ್ 2 ಚಿತ್ರಕ್ಕೆ ಮಾತ್ರ ಇದು ಅನ್ವಯ ಅಗುದಿಲ್ಲ. ಯಾಕೆಂದರೆ ಕೆಜಿಎಫಪ್ 2 ವಿಶ್ವದಾದ್ಯಂತ ತೆರೆಕಂಡು 40 ದಿನಗಳು ಯಶಸ್ವಿ ಪ್ರದರ್ಶನ ಕಂಡಿದೆ.ದಿನದಿಂದ ದಿನಕ್ಕೆ ಕೆಜಿಎಫ್ 2 ಸಿನಿಮಾದ ಗಳಿಕೆ ಹೆಚ್ಚುತ್ತಲೆ ಇದೆ. ಇನ್ನು 40 ದಿನಗಳ ಬಳಿ ಸಿನಿಮಾ ಕಲೆಕ್ಷನ್ ಹೇಗಿದೆ ಅಂತ ನೋಡಿದರೆ. ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಹೌದು ಕೆಜೆಎಫ್ 2 ಬಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ.ರಿಲೀಸ್ ಆದ ಮೊದಲ ದಿನದಿಂದಲೂ ಕೋಟಿ, ಕೋಟಿ ಲೂಟಿ ಮಾಡಿದ ‘ಕೆಜಿಎಫ್ 2’ ರಿಲೀಸ್ ಆಗಿ 42 ದಿನಗಳ ಕಳೆದಿವೆ. ಆದರೆ ಈಗಲೂ ಸಿನಿಮಾದ ಕಲೆಕ್ಷನ್ ಬಗ್ಗೆ ಇರುವ ನಿರೀಕ್ಷೆಗಳು ಮಾತ್ರ ಕಡಿಮೆ ಆಗಿಲ್ಲ. ಸದ್ಯ ಕೆಜಿಎಫ್ 2 ಗಳಿಕೆ ಪ್ರಮಾಣ ಹೇಗಿದೆ ಎನ್ನುವುದನ್ನು ಮುಂದೆ ಓದಿ.

ಕೆಜಿಎಫ್ 2 ಸಿನಿಮಾ 40 ದಿನಗಳ ಬಳಿಕ ಗಳಿಕೆಯಲ್ಲಿ ಇಳಿಕೆ ಕಂಡಿದೆ. ನಲವತ್ತು ದಿನಗಳ ತನಕ ಉತ್ತಮವಾದ ಕಲೆಕ್ಷನ್ ಮಾಡುತ್ತಾ ಇತ್ತು. ಆದರೆ ದಿನ ಕಳೆದಂತೆ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆ ಆಗಿದೆ. ಹಾಗಾಗಿ ಈಗ ಕೆಜಿಎಫ್ 2 ಸಿನಿಮಾದ ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಇನ್ನು 42ನೇ ದಿನ ಕಡಿಮೆ ಮೊತ್ತವನ್ನು ದಾಖಲಿಸಿದೆ ಕೆಜಿಎಫ್ 2.

42ನೇ ದಿನ KGF 2 ಗಳಿಕೆ: 1.46 ಕೋಟಿ!

ಕೆಜಿಎಫ್ 2 ಈಗಾಗಲೇ ದಾಖಲೆಯ ಮಳೆಯನ್ನೇ ಸುರಿಸಿದೆ. ಹಲವು ವಿಚಾರಗಳಲ್ಲಿ ಈ ಸಿನಿಮಾ ಮಾಡಿರುವ ದಾಖಲೆಗಳನ್ನು ಮುರಿಯುವುದು ಅಸಾಧ್ಯ ಎನ್ನಲಾಗುತ್ತಿದೆ. ಸಾಕಷ್ಟು ದಾಖಲೆಗಳನ್ನು ಮಾಡಿರುವ ಕೆಜಿಎಫ್ 2 ಕಲೆಕ್ಷನ್ 40 ದಿನಗಳ ಬಳಿಕೆ ಇಳಿಕೆ ಕಂಡಿದೆ. 42ನೇ ದಿನಕ್ಕೆ ಕೆಜಿಎಫ್ 2 ವಿಶ್ವಾದ್ಯಂತ ಗಳಿಕೆ 1.46 ಕೋಟಿ ರೂ. ವಿಶ್ವಾದ್ಯಂತ ಕಲೆಕ್ಷನ್ 2 ಕೋಟಿ ಕೂಟ ಮುಟ್ಟಿಲ್ಲ. ಆದರೆ 42 ದಿನ ಸಿನಿಮಾ ಚಿತ್ರಮಂದಿರದಲ್ಲಿ ಇರುವುದೇ ದೊಡ್ಡ ವಿಚಾರ.

‘ಕೆಜಿಎಫ್ 2’ ವಿಶ್ವದಾದ್ಯಂತ ಗಳಿಕೆಯ ಲೆಕ್ಕಾಚಾರ!

ಕೆಜಿಎಫ್ 2 ಸಿನಿಮಾ ಮೊದಲ ವಾರದಿಂದಲೂ ಎಷ್ಟೆಟ್ಟು ಗಳಿಕೆ ಮಾಡಿದೆ ಎನ್ನುವ ಲೆಕ್ಕಾಚಾರವನ್ನು ಟ್ರೇಡ್ ವಿಶ್ಲೇಷಕ ಮನೋಬಾಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಮಾಹಿತಿಯಂತೆ ಮೊದಲ ವಾರದಿಂದ 5ನೇ ವಾರಕ್ಕೆ- ₹ 1210.53 ಕೋಟಿ ರೂ. ಗಳಿಕೆ ಕಂಡಿದೆ ಕೆಜಿಎಫ್ 2.

6ನೇ ವಾರ

ದಿನ 1 – ₹ 3.10 ಕೋಟಿ ರೂ.

ದಿನ 2 – ₹ 3.48 ಕೋಟಿ ರೂ.

ದಿನ 3 – ₹ 4.02 ಕೋಟಿ ರೂ.

ದಿನ 4 – ₹ 4.68 ಕೋಟಿ ರೂ.

ದಿನ 5 – ₹ 1.87 ಕೋಟಿ ರೂ.

ದಿನ 6 – ₹ 1.46 ಕೋಟಿ ರೂ.

ಒಟ್ಟಾರೆ – ₹ 1229.14 ಕೋಟಿ ರೂ.

ಹಿಂದಿ ಕೆಜಿಎಫ್ 2ಗೆ ಭುಲ್ ಭುಲಯ್ಯ ಠಕ್ಕರ್!ಕೆಜಿಎಫ್ 2 ಸಿನಿಮಾ 1229 ಕೋಟಿ ಗಳಿಕೆ ಕಂಡಿದೆ. ಈ ಸಾವಿರ ಕೋಟಿಯಲ್ಲಿ ಹೆಚ್ಚು ಗಳಿಕೆ ಕಂಡಿರುವುದು ನಾರ್ತ್‌ನಲ್ಲಿ. ಹಿಂದಿಯ ಕೆಜಿಎಫ್ 2 400 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ. ಆದರೆ ಬಾಲಿವುಡ್ ಸಿನಿಮಾ ಭೂಲ್ ಭುಲಯ್ಯ ರಿಲೀಸ್ ಬಳಿಕ ಕೆಜಿಎಫ್ 2 ಕಲೆಕ್ಷನ್ ಕಡಿಮೆ ಆಗಿದೆ. ಅತ್ತ ಭುಲ್ ಭುಲಯ್ಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಕಾಣುತ್ತಾ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಜ್ರಿವಾಲರಿಂದ ಹಸಿರು ನಿಶಾನೆ ಪಡೆದ ಅರ್ಧಗಂಟೆಗೇ ಕೆಟ್ಟು ನಿಂತ ಇಲೆಕ್ಟ್ರಿಕ್‌ ಬಸ್‌..!

Thu May 26 , 2022
  ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಇಲೆಕ್ಟ್ರಿಕ್‌ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದ ಅರ್ಧ ಗಂಟೆಗೇ ಒಂದು ಇಲೆಕ್ಟ್ರಿಕ್‌ ಬಸ್‌ ಕೆಟ್ಟು ನಿಂತು ದೇಶದ ಗಮನಸೆಳೆದಿದೆ. ರೋಹಿಣಿ ಡಿಪೋ ಬಳಿ ಈ ಘಟನೆ ಆಗಿದೆ. ಬಸ್‌ನ ಇಂಜಿನ್‌ ತಾಪ ಹೆಚ್ಚಾದ ಕಾರಣ ಹೀಗಾಗಿದೆ ಎಂದು ದೆಹಲಿ ಸಾರಿಗೆ ಸಂಸ್ಥೆ ಸಮಜಾಯಿಷಿ ನೀಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಇಂದ್ರಪ್ರಸ್ಥ ಡಿಪೋದಿಂದ 150 ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ […]

Advertisement

Wordpress Social Share Plugin powered by Ultimatelysocial