ಒಳ ಚರಂಡಿಯೊಳಗೆ ಬಿದ್ದ ಕರು: 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ಒಳಚರಂಡಿ ಚೇಂಬರ್​​ನಲ್ಲಿ ಬಿದ್ದಿದ್ದ ಕರುವನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆಯು ದಾದರ್​ನ ಕಬೂತರ್ಖಾನಾ ಎಂಬಲ್ಲಿ ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ಸಂಭವಿಸಿದೆ.ಅಗ್ನಿಶಾಮಕದಳ, ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ಹಾಗೂ ವಿಪತ್ತು ನಿರ್ವಹಣಾ ವಿಭಾಗಗಳ ಘಟಕಗಳೊಂದಿಗೆ ಚೇಂಬರ್​ ಒಡೆದು 5.5 ಅಡಿ ಆಳದ ಗುಂಡಿಯನ್ನು ತೋಡಲಾಗಿದೆ. ಕರುವಿಗೆ ಹಗ್ಗವನ್ನು ಕಟ್ಟಿ ಸುರಕ್ಷಿತವಾಗಿ ಮೇಲೆತ್ತಲಾಗಿದೆ.ಕರುವಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.ಭವಾನಿ ಶಂಕರ್​ ರಸ್ತೆಯಲ್ಲಿರುವ ರಾಮಮಂದಿರ ಮುಂಭಾಗದ ಒಳಚರಂಡಿ ಚೇಂಬರ್​ನಲ್ಲಿ ಕರುವು ಬಿದ್ದಿದೆ. ಚೇಂಬರ್​ನ್ನು ಸರಿಯಾಗಿ ಮಚ್ಚದೇ ತೆರದಿಟ್ಟಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.ಈ ವಿಚಾರವಾಗಿ ಮಾತನಾಡಿದ ಅಧಿಕಾರಿಯೊಬ್ಬರು, ನಾವು ಕರುವಿನ ಮಾಲೀಕರಾದ ಗಂಗೂ ಶಿಂಧೆಯನ್ನು ಕೇಳಿದಾಗ ಅವರು ಚೇಂಬರ್​ನ ಮುಚ್ಚಳ ಸಡಿಲವಾಗಿತ್ತು. ಹೀಗಾಗಿ ಕರುವು ತನ್ನ ಕಾಲಿನಿಂದ ಮುಚ್ಚಳವನ್ನು ತಳ್ಳಿರಬಹುದು ಎಂದು ಹೇಳಿದ್ದಾರೆ. ಫುಟ್​ಪಾತ್​​ ಕಾಮಗಾರಿ ನಡೆಯುತ್ತಿರೋದ್ರಿಂದ ಒಳಚರಂಡಿ ಚೇಂಬರ್​ನ ಮುಚ್ಚಳವನ್ನು ಸ್ವಲ್ಪ ತೆರೆಯಲಾಗಿತ್ತು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಕುಮಾರ ಶ್ರೀಗಳಿಗೆ ಭಾರತರತ್ನ : ಅಮಿತ್ ಷಾ ಜೊತೆ ಬಿಎಸ್‍ವೈ ಚರ್ಚೆ

Tue Mar 29 , 2022
  ತುಮಕೂರು, ಮಾ.29- ಏಪ್ರಿಲ್ 1ರಂದು ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಸುಮಾರು 2ಲಕ್ಷ ಮಂದಿ ಸೇರಬಹುದೆಂಬ ನಿರೀಕ್ಷೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. These games are the https://tpashop.com/18-year-old-casino-near-me/ most popular among the crowd. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ […]

Related posts

Advertisement

Wordpress Social Share Plugin powered by Ultimatelysocial